ಶಿವಮೊಗ್ಗ

'ಕಾಂಗ್ರೆಸ್ ಮಾರ್ಗದರ್ಶಿ ಪಕ್ಷವಾಗಲಿದೆ'

Published On :

ತೀರ್ಥಹಳ್ಳಿ: ಕಾಂಗ್ರೆಸ್‌ಗೆ ಸರಿಸಮಾನವಾದ ಪಕ್ಷ ಇನ್ನೊಂದಿಲ್ಲ. ದೇಶಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಾರ್ಗದರ್ಶಿ ಪಕ್ಷವಾಗಲಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.   
ಕಾಂಗ್ರೆಸ್ ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಭಾರತ್ ನಿರ್ಮಾಣ ಪಾದಯಾತ್ರೆ  ಗೋಪಾಲಗೌಡರ ಜನ್ಮ ಸ್ಥಳವಾದ ಆರಗ ಶಾಂತವೇರಿಯಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಸುಮಾರು 11 ಕಿ.ಮೀ. ದೂರವನ್ನು  ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಯಾತ್ರೆ ನಡೆಸಿತು.
1 ಕೆಜಿ ಅಕ್ಕಿ: ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ  ಮಾತನಾಡಿದ ಸಚಿವರು, ಬಡವರಿಗೆ ಒಂದು ರೂ. ಕೆ.ಜಿ. ಅಕ್ಕಿ ನೀಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ಹೇಳಿದರು.    
 ಸಮಾರಂಭದ ವೇದಿಕೆಯಲ್ಲಿ ಮಾಜಿ ಶಾಸಕ ಪಟ್ಟಮಕ್ಕಿ ರತ್ನಾಕರ್, ಕಡಿದಾಳು ದಿವಾಕರ್, ಬಿ. ಸ್ವಾಮಿರಾವ್,
ಕರಿಯಣ್ಣ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಪ್ರಸನ್ನಕುಮಾರ್, ಪ್ರಭಾವತಿ ಶಾಮಣ್ಣ, ಜಿ.ಎಸ್.ನಾರಾಯಣರಾವ್, ಹೊಸನಗರ ಭಾಗದ ಪಟೇಲ್ ಗರುಡಪ್ಪಗೌಡ, ಕಲಗೋಡು ರತ್ನಾಕರ್,  ಜಿಲ್ಲಾ ಪಂಚಾಯಿತಿ ಸದಸ್ಯರಾದ  ಹಾರೊಗೊಳಿಗೆ ಪದ್ಮನಾಭ, ಶೃತಿವೆಂಕಟೇಶ್, ಡಾ. ಸುಂದರೇಶ್ ವೇದಿಕೆಯಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.