ಪ್ರತ್ಯೇಕ ಪ್ರಕರಣ: ಮೂವರ ಸಾವು
ಸಾಗರ: ತಾಲೂಕಿನ ಕಳಸವಳ್ಳಿ ದಡದಲ್ಲಿ ಸ್ನಾನಕ್ಕೆ ಇಳಿದ ಇಬ್ಬರು ಯುವಕರು ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿ ನಿವಾಸಿಗಳಾದ ಜಗದೀಶ್(20) ಹಾಗೂ ಶರತ್ (20) ಮೃತಪಟ್ಟ ದುರ್ದೈವಿಗಳು. ಬೆಂಗಳೂರಿನ ಸೆಂಟ್ ಲಾರೆನ್ಸ್ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ಕು ಜನ ಸ್ನೇಹಿತರು ಶನಿವಾರ ರಾತ್ರಿ ಸಿಗಂದೂರು ಕ್ಷೇತ್ರಕ್ಕೆ ಹೋಗಲು ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ಸಾಗರಕ್ಕೆ ಹೊರಟಿದ್ದರು. ಅಂಬಾರಗೋಡ್ಲುವಿನಲ್ಲಿ ಲಾಂಚ್ ಮೂಲಕ ಕಳಸವಳ್ಳಿ ದಡ ತಲುಪಿದ್ದಾರೆ. ಸ್ನಾನ ಮಾಡಿ ಶ್ರೀದೇವಿಯ ದರ್ಶನಕ್ಕೆ ತೆರಳುವ ಉದ್ದೇಶದಿಂದ ಕಳಸವಳ್ಳಿ ದಡದಲ್ಲಿ ಶರಾವತಿ ಹಿನ್ನೀರಿಗೆ ಇಳಿದಾಗ ಈ ಘಟನೆ ನಡೆದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸಾಗರದ ಬಸವನಹೊಳೆಯಲ್ಲಿ ಹೋಳಿ ಮುಗಿಸಿಸ್ನಾನ ಮಾಡಲು ಹೋಗಿದ್ದ ಜಂಬಗಾರು ಮಂಜಪ್ಪ ಅವರ ಪುತ್ರ ರವೀಂದ್ರ (28) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಭಾನುವಾರ ಬೆಳಗ್ಗೆಯಿಂದಲೆ ಸ್ನೇಹಿತರ ಜತೆ ಹೋಳಿ ಹಬ್ಬದ ಅಂಗವಾಗಿ ಬಣ್ಣದೊಕುಳಿಯಲ್ಲಿ ತೊಡಗಿದ್ದ ರವೀಂದ್ರ ಮಧ್ಯಾಹ್ನ ಸ್ನಾನಕ್ಕೆ ಹೋಗಿದ್ದಾರೆ. ಇವರ ಜತೆ 14ಕ್ಕೂ ಹೆಚ್ಚು ಜನ ಸ್ನೇಹಿತರಿದ್ದರು. ಸ್ನಾನ ಮುಗಿಸಿ ಉಳಿದ ಸ್ನೇಹಿತರು ಮೇಲೆ ಬಂದರೂ, ರವೀಂದ್ರ ಮಾತ್ರ ಮೇಲೆ ಬಂದಿರಲಿಲ್ಲ. ತಕ್ಷಣ ಸ್ನೇಹಿತರು ರವೀಂದ್ರ ಅವರಿಗೆ ಹುಡುಕಾಟ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಶವವನ್ನು ಮೇಲಕ್ಕೆ ತರಲಾಗಿದ್ದು, ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಟಿಪಿ ತರಬೇತಿ
ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘವು ಡಿಟಿಪಿ ಹಾಗೂ ಸ್ಕ್ರೀನ್ ಪ್ರಿಂಟಿಂಗ್ ತರಬೇತಿ ತರಗತಿ ಆರಂಭಿಸುತ್ತಿದೆ. ಆಸಕ್ತ ಯುವಕ ಯುವತಿಯರು ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ತರಬೇತಿ ನಂತರ ವಿವಿಧ ಮುದ್ರಣಾಲಯಗಳಲ್ಲಿ ಲಭ್ಯತೆಗೆ ಅನುಗುಣವಾಗಿ ಉದ್ಯೋಗದ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಮಾಹಿತಿಗೆ ಮೊ. 9538913619ಗೆ ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

