ಶಿವಮೊಗ್ಗ

ಕಾಂಗ್ರೆಸ್ 20 ಸ್ಥಾನ ಗೆದ್ದರೆ ರಾಜಕೀಯ ಸನ್ಯಾಸ

Published On :

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸವಾಲೆಸೆದಿದ್ದಾರೆ.
ಯಡಿಯೂರಪ್ಪ ನಾಮಪತ್ರ ಸಲ್ಲಿಸಿದ ನಂತರ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು, ಜಾತಿ ರಾಜಕಾರಣ ಮಾಡುವ ನೀವು (ಕಾಂಗ್ರೆಸ್) ಜಾತಿ ಹೆಸರಲ್ಲಿ ವೋಟು ಕೇಳುತ್ತೀರಿ. ಆದರೆ, ನಮಗೆ ಕೋಮುವಾದಿಗಳು ಎನ್ನುತ್ತೀರಿ. ಸಿದ್ದರಾಮಯ್ಯ ಅವರು ಬರೀ ಆಟದ ಗೊಂಬೆ. ಜುಟ್ಟು ಕೇಂದ್ರದಲ್ಲಿದೆ ಎಂದರು. ಸಂತೋಷ್ ಲಾಡ್ ಅವರ ವಿರುದ್ಧ ಆರೋಪಗಳಿವೆ ಎಂಬ ಕೂಗು ಕೇಳಿ ಬಂದಾಗ ಸಾಕ್ಷಿ ಎಲ್ಲಿ ಎಂದು ಕೇಳಿದಿರಿ. ಆದರೆ, ಅವರನ್ನು ಕೈಬಿಟ್ಟಿರಿ. ಯಾವ ಕಾರಣಕ್ಕೂ ಕಳಂಕಿತರನ್ನು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿರಿ. ಆದರೆ, ಡಿ.ಕೆ. ಶಿವಕುಮಾರ್‌ರನ್ನು ಸಚಿವರನ್ನಾಗಿ ಮಾಡಿದಿರಿ. ಸಿದ್ದರಾಮಯ್ಯರ ಮಾತು ನಡೆಯುವುದಿಲ್ಲ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.