ಶಿವಮೊಗ್ಗ

ಸಮರ್ಥ ಯೋಜನೆಯಿಂದ ಯಶಸ್ವಿ ಆರ್ಥಿಕ ವ್ಯವಸ್ಥೆ

Published On :

ಕ.ಪ್ರ.ವಾರ್ತೆ ಸಾಗರ ಮಾ. 21
ಕಾಲಕಾಲದ ವಿದ್ಯಮಾನಗಳನ್ನು ಪರಿಶೀಲಿಸಿ, ಸೂಕ್ತ ಮಾರ್ಪಾಡು ಮಾಡಿಕೊಳ್ಳುತ್ತಾ  ಸಮರ್ಥ ಯೋಜನೆ ರೂಪಿಸಿಕೊಳ್ಳದೇ ಹೋದರೆ ಯಶಸ್ವಿ ಆರ್ಥಿಕ ವ್ಯವಸ್ಥೆ ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮಂಗಳೂರು ವಿವಿ ನಿರ್ವಹಣಾ ವಿಭಾಗ ಮುಖ್ಯಸ್ಥ ಡಾ.ಟಿ.ಮಲ್ಲಿಕಾರ್ಜುನಪ್ಪ ಹೇಳಿದರು.
ಇಲ್ಲಿನ ಎಲ್.ಬಿ. ಕಾಲೇಜಿನಲ್ಲಿ ಶುಕ್ರವಾರ ಹಣಕಾಸು ಸೇವಾ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ಯುಜಿಸಿ ಪ್ರಾಯೋಜಕತ್ವದಡಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡಿದರು.
ನಿರೀಕ್ಷಿತ ಅಭಿವೃದ್ಧಿ: ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ ಕಾಪಾಡಿಕೊಂಡಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತದೆ. ಆರ್ಥಿಕ ಹಿಂಜರಿತ ಸಂದರ್ಭದಲ್ಲಿ ಅಮೇರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸಿದಾಗ ಭಾರತ ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸದೆ ಇರಲು ಮುಖ್ಯ ಕಾರಣ ನಮ್ಮ ದೇಶದ ಹಣಕಾಸು ಸೇವಾ ಕ್ಷೇತ್ರದಲ್ಲಿನ ಶಿಸ್ತು ಎಂದವರು ಹೇಳಿದರು.
ಹಣಕಾಸು ಸೇವಾ ಕ್ಷೇತ್ರದಲ್ಲಿ ವಿಮೆ, ಖಾಸಗಿ ಹಾಗೂ ಸರ್ಕಾರಿ ಪ್ರಾಯೋಜಕತ್ವದ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲಕಾಲಕ್ಕೆ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಸಮರ್ಥ ಯೋಜನೆ ರೂಪಿಸುತ್ತಿವೆ ಎಂದರು.
ಸೇವ ಶಬ್ದ ಸವಕಲು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್, ಹಣಕ್ಕೆ ವಿಶೇಷ ಶಕ್ತಿ ಇದೆ. ಹಣದ ಎದುರು ಸೇವೆ ಎಂಬ ಶಬ್ದ ಸವಕಲಾಗುತ್ತಿರುವುದು ಆಧುನಿಕ ಅರ್ಥ  ವ್ಯವಸ್ಥೆ ದುರಂತವಾಗಿದೆ. ಹಣಕಾಸು ಕೊಡುಕೊಳ್ಳುವಿಕೆ ಹೆಸರಿನಲ್ಲಿ ಸ್ಥಾಪಿತವಾಗಿರುವ ಸಂಸ್ಥೆಗಳು ಸೇವೆ ಎಂಬ ಪದವನ್ನು ಉಪಯೋಗಿಸುತ್ತಿದೆ ಎಂದರೆ ಅದರ ಗೂಡಾರ್ಥ ಬೇರೆಯೆ ಆಗಿರುತ್ತದೆ ಎಂದರು.
ಎಂ.ಡಿ.ಎಫ್. ಸಹ ಕಾರ್ಯದರ್ಶಿ ಬಿ.ವಿ. ದೀಪಕ್, ರವೀಂದ್ರ ಸಭಾಹಿತ್, ಅಡಕೆ ವರ್ತಕರ ಸಂಘದ ಅಧ್ಯಕ್ಷ ಕೆ. ಬಸವರಾಜ್ ಹಾಜರಿದ್ದರು. ಪ್ರಾಚಾರ್ಯ ಪ್ರೊ. ಬಿ.ಸಿ. ಶಶಿಧರ್ ಸ್ವಾಗತಿಸಿದರು. ಪ್ರೊ. ಐ.ಜಿ. ಪ್ರಕಾಶ್ ವಂದಿಸಿದರು. ಪ್ರೊ. ಲಕ್ಷ್ಮೀಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.