'ಬಾಣ' ಹೂಡಲು ಕುಮಾರ್ಗೆ ಆಹ್ವಾನ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ. 23
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್. ಶನಿವಾರವಷ್ಟೇ ಸುದ್ದಿಗೋಷ್ಠಿ ನಡೆಸಿ ತನಗೆ ಕಾಂಗ್ರೆಸ್ ಟಿಕೆಟ್ ನೀಡದೇ ಇದ್ದರೆ ಮಾ.26 ರಂದು ಮಧ್ಯಾಹ್ನ ನಾಮಪತ್ರ ಸಲ್ಲಿಸುವುದು ಖಚಿತ ಎಂದು ಕುಮಾರ್ ಬಂಗಾರಪ್ಪ ಘೋಷಿಸಿದ್ದರು. ಇದರ ಬೆನ್ನಲ್ಲೆ, ಸಂಯುಕ್ತ ಜನತಾದಳವು ಕುಮಾರ್ ಬಂಗಾರಪ್ಪನವರನ್ನು ತನ್ನತ್ತ ಸೆಳೆಯಲು ಗಾಳ ಹಾಕಿದೆ.
ಈ ಮೂಲಕ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಅಸ್ವಿತ್ವಕ್ಕಾಗಿ ಪರದಾಡುತ್ತಿದ್ದ ಜೆಡಿಯು ನಾಯಕರು ಸಣ್ಣದೊಂದು ರಾಜಕೀಯ ತಂತ್ರಗಾರಿಕೆ ಹೆಣೆದಿದ್ದಾರೆ.
ಕುಮಾರ್ ಬಂಗಾರಪ್ಪ ಅವರಿಗೆ 'ನೀವು ನಮ್ಮ ಪಕ್ಷಕ್ಕೆ ಬನ್ನಿ...' ಎಂದು ಅಧಿಕೃತ ಆಹ್ವಾನ ನೀಡಿಲಾಗಿದೆ. ಅಲ್ಲದೇ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದೆ. ಹಾಗೆಯೇ ಕುಮಾರ್ ಬಂಗಾರಪ್ಪ ಅವರು ಕೂಡ ಆಹ್ವಾನವನ್ನು ತಿರಸ್ಕರಿಸಿಲ್ಲ. ಹಾಗೆಯೇ ಒಪ್ಪಿಲ್ಲ ಕೂಡ ನೀಡಿಲ್ಲ. ತಾವು ಪಕ್ಷೇತರನಾಗಿ ಕಣಕ್ಕಿಳಿದರೆ ಬೆಂಬಲಿಸುವಂತೆಯೂ ಅವರು ಕೋರಿರುವುದು ಅಚ್ಚರಿಗೆ ಕಾರಣವಾಗಿದೆ.
ಅಭಿಪ್ರಾಯ ಸಂಗ್ರಹ: ಶನಿವಾರ ಕುಮಾರ್ ಬಂಗಾರಪ್ಪ ಅವರು ಕಾರ್ಯಕರ್ತರ ಸಭೆ ನಡೆಸುವ ಮುನ್ನ ಜೆಡಿಯು ಮುಖಂಡರು ಭೇಟಿ ಮಾಡಿ ತಮ್ಮ ಅಭಿಲಾಷೆ ಹೊರಗೆಡಹಿದ್ದಾರೆ. ನಿಮ್ಮಲ್ಲಿ ಸಂಘಟನಾ ಶಕ್ತಿ ಇದೆ. ಈ ಆಹ್ವಾನವನ್ನು ತಣ್ಣಗೆ ಸ್ವೀಕರಿಸಿರುವ ಕುಮಾರ್ ಬಂಗಾರಪ್ಪ ಅವರು, ಕಾದು ನೋಡುವ ಎಂದು ಹೇಳಿದ್ದಾರೆ. ಅಲ್ಲದೇ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳುವ ಮೂಲಕ ಜೆಡಿಯು ನಾಯಕರ ಆಸೆಯನ್ನು ಜೀವಂತವಾಗಿಟ್ಟಿದ್ದಾರೆ.
ಭಾನುವಾರ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಪಟೇಲ್ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಚಂದ್ರನಾಯ್ಕ ಈ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿದರು.
ಕುಮಾರ್ ಬಂಗಾರಪ್ಪ ಅವರು ನಮ್ಮ ಆಹ್ವಾನವನ್ನು ಒಪ್ಪುತ್ತಾರೆ ಎಂಬ ಆಶಯವಿದೆ. ನಮ್ಮ ಪಕ್ಷದ ಸಂಸದೀಯ ಮಂಡಳಿಯು ಅಭ್ಯರ್ಥಿ ಆಯ್ಕೆಯನ್ನು ಮಾ.25 ರಂದು ಅಂತಿಮಗೊಳಿಸಲಿದೆ. ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಧರ್ಮಪ್ಪ ಅಥವಾ, ಶಿವರುದ್ರಯ್ಯಸ್ವಾಮಿ ನಾಮಪತ್ರ ಸಲ್ಲಿಸಿದರೂ ಕೂಡ 26ರ ಸಂಜೆವರೆಗೆ ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಒಂದು ವೇಳೆ ಕುಮಾರ್ ಬಂಗಾರಪ್ಪ ಅವರು ಪಕ್ಷದ ಟಿಕೆಟ್ ಬಯಸಿದರೆ “Ò’ ಫಾರಂ ಬಳಸಿ ಅಭ್ಯರ್ಥಿ ಆಗುವಂತೆ ಮಾಡುತ್ತೇವೆ. ಅಥವಾ ಅವರು ಪಕ್ಷೇತರನಾಗಿ ಕಣಕ್ಕಿಳಿಯಲು ಆಸಕ್ತಿ ತೋರಿಸಿದರೆ ನಮ್ಮ ಅಭ್ಯರ್ಥಿಯ ಮನವೊಲಿಸಿ ಕುಮಾರ್ ಬಂಗಾರಪ್ಪ ಅವರನ್ನು ಬೆಂಬಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಒಟ್ಟಾರೆ, ಕುಮಾರ್ ಬಂಗಾರಪ್ಪ ಅವರು ಪಕ್ಷಕ್ಕೆ ಬರುವ ಅಥಪಾ ಪಕ್ಷದ ಬೆಂಬಲ ಪಡೆಯುವ ವಿಚಾರದಲ್ಲಿ ಸಂಪೂರ್ಣ ಒಪ್ಪಿಗೆ ಕೊಟ್ಟಿಲ್ಲ. ಅವರ ನಿರ್ಧಾರಕ್ಕೆ ಎದುರು ನೋಡುತ್ತಿದ್ದೇವೆ ಎಂದು ಮಂಜುನಾಥ್ ತಿಳಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 10-11 ಸ್ಥಾನದಲ್ಲಿ ಜೆಡಿಯು ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಎಲ್ಲೆಡೆ ಚುನಾವಣಾ ತಯಾರಿ ನಡೆದಿದೆ ಎಂದರು.
ಶಿವರುದ್ರಯ್ಯಸ್ವಾಮಿ ಹೇಳಿದ್ದು ಸುಳ್ಳು
ಶಿವರುದ್ರಯ್ಯಸ್ವಾಮಿಯ ಪಕ್ಷದ ಕಾರ್ಯಕರ್ತ, ಟಿಕೆಟ್ ಆಕಾಂಕ್ಷಿ. ಆದರೆ, ಈವರೆಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಯಾರಿಗೆ ಎಂದು ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸಿಲ್ಲ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ತಾವೇ ಅಭ್ಯರ್ಥಿಎಂದು ಶಿವರುದ್ರಯ್ಯ ಸ್ವಾಮಿ ಹೇಳಿಕೊಂಡು ಓಡಾಡುತ್ತಿರುವುದು ಸರಿಯಲ್ಲ. ಅವರು ಹೇಳಿರುವುದು ಸುಳ್ಳು ಎಂದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

