ಮೋದಿ, ಬಿಎಸ್ವೈ ಸೇರಿದರೆ ಗಂಗಾ, ಕಾವೇರಿ ಒಂದಾದಂತೆ
ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಮಾ. 23
ರಾಜ್ಯದಲ್ಲಿ ಬಡ್ಡಿಯಿಲ್ಲದೆ ಸಾಲ ನೀಡುವ ಯೋಜನೆ ಜಾರಿಗೊಳಿಸಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಸಭೆಗೆ ಆರಿಸಿಬರಲಿದ್ದಾರೆ. ನರೇಂದ್ರ ಮೋದಿ ಹಾಗೂ ಬಿಎಸ್ವೈ ಒಟ್ಟಾದರೆ ಗಂಗಾ, ಕಾವೇರಿ ಒಟ್ಟಾದಂತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಪಟ್ಟಣದ ರಾಮಮಂದಿರದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ರೈತಪರ ಕಾಳಜಿಯಿಂದಾಗಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರೈತಪರ ಚಿಂತನೆಗಳು ನೆಡೆಯುವಂತಾಯಿತು. ಸಿದ್ಧರಾಮಯ್ಯನವರು ಹಿಂದುಳಿದವರ ಪದಕ್ಕೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ಕಲಾಂ ಕನಸು: ಯಡಿಯೂರಪ್ಪ ಮಾತನಾಡಿ, ಬಿಜೆಪಿ ಸಂಘಟನೆ ಇನ್ನಷ್ಟು ಬಲಪಡಿಸುವ ಕೆಲಸ ಆಗಬೇಕು. ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಈ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದ ಅವರು, ಬರುವ ಆಗಸ್ಟ್ 15ರಂದು ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಬಾವುಟ ಹಾರಿಸಲಿದ್ದು, ಅಬ್ದುಲ್ ಕಲಾಂ ಅವರ 2020ರ ಸೂಪರ್ ಪವರ್ ಕನಸು ನನಸಾಗಲಿದೆ ಎಂದರು.
ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಬಿಜೆಪಿ ಈಬಾರಿ ಶೇ.46ರಷ್ಟು ಮತಗಳಿಸುತ್ತದೆ ಎಂಬ ಸಮೀಕ್ಷೆ ನಿಜವಾಗಲಿದೆ. ಮೋದಿ ಪ್ರಧಾನ ಮಂತ್ರಿಯಾಗುವುದಕ್ಕೆ ಜನ ಸ್ಪಂದಿಸುತ್ತಾರೆ. ಈ ವಾತಾವರಣ ಎಲ್ಲ ಕಡೆಯೂ ಇದೆ. ಚಿದಂಬರಂ ಚುನಾವಣೆಗೆ ನಿಲ್ಲುವುದಿಲ್ಲ ಎಂದಿರುವುದು ಕಾಂಗ್ರೆಸ್ ದುಸ್ಥಿತಿಗೆ ಹಿಡಿರುವ ಕನ್ನಡಿ ಎಂದರು.
ಕನಸು ನನಸಾಗಲಿ: ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಾತನಾಡಿ ಮೋದಿಯವರು ತಮ್ಮದೇ ಆದ ಕನಸು ಹಂಚುತ್ತಿದ್ದಾರೆ. ಈ ಕನಸನ್ನು ನನಸು ಮಾಡೋಣ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಚಕ್ಕೋಡಬೈಲು ರಾಘವೇಂದ್ರ, ಡಿ.ಲಕ್ಷ್ಮಣ್, ಸೋಮಶೇಖರ್, ನಾಗರಾಜಶೋಟ್ಟಿ, ಅಶೋಕಮೂರ್ತಿ, ಗೀತಾ, ಕುಸುಮ, ಪಟ್ಟಣಪಂಚಾಯ್ತಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

