ಶಿವಮೊಗ್ಗ

ತೀರ್ಥಹಳ್ಳಿ ಪ್ರಥಮ, ಭದ್ರಾವತಿ ಕಡೆ

Published On :

ಶಿವಮೊಗ್ಗ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಪ್ರಥಮ ಸ್ಥಾನದಲ್ಲಿದ್ದರೆ, ಭದ್ರಾವತಿ ತಾಲೂಕು ಕಡೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಒಟ್ಟು ಜಿಲ್ಲೆಯ ಫಲಿತಾಂಶ ಶೇ.68.86 ಆಗಿದೆ. ಇದರಲ್ಲಿ ತೀರ್ಥಹಳ್ಳಿ ಶೇ.78.68 , ಹೊಸನಗರ-ಶೇ. 72.22, ಸೊರಬ-ಶೇ.72.95, ಶಿವಮೊಗ್ಗ- ಶೇ.70.18, ಸಾಗರ-ಶೇ.66.11, ಶಿಕಾರಿಪುರ-ಶೇ.64.01 ಹಾಗೂ ಭದ್ರಾವತಿ ಶೇ.62.40 ಫಲಿತಾಂಶ ಪಡೆದುಕೊಂಡಿದೆ.
ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 18,226 ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ಇವರಲ್ಲಿ  12,551 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 7815 ವಿದ್ಯಾರ್ಥಿಗಳ(ಬಾಲಕರು) ಪೈಕಿ 5122 ಹಾಗೂ 10411 ವಿದ್ಯಾರ್ಥಿನಿಯರಲ್ಲಿ 7429 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 1274 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ಣನಲ್ಲಿ ಉತ್ತೀರ್ಣರಾಗಿದ್ದರೆ, 6615 ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
- ಶೇ.ನೂರು
ಜಿಲ್ಲೆಯ ಎರಡು ಕಾಲೇಜುಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ. ಶಿಕಾರಿಪುರದ ಬನಸಿರಿ ಲಯನ್ಸ್ ವಿದ್ಯಾಲಯ ಹಾಗೂ ಹೊಳೆಹೊನ್ನೂರಿನ ಶ್ರೀ ಸಿದ್ದೇಶ್ವರ ಪದವಿಪೂರ್ವ ಕಾಲೇಜು ಶೇ.100 ಫಲಿತಾಂಶ ಪಡೆದುಕೊಂಡಿವೆ.
ಆದಿಚುಂಚನಗಿರಿ ಶಾಲೆಗೆ ಶೇ.99 ಫಲಿತಾಂಶ
ಭದ್ರಾವತಿಯ ಎಸಸ್ವಿ ಸಂಯುಕ್ತ ಪದವಿಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99 ಫಲಿತಾಂಶ ಪಡೆದುಕೊಂಡಿದೆ. 164 ವಿದ್ಯಾರ್ಥಿಗಳು ವಿಜ್‌ಞಾನ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ್ದು, ಈ ಪೈಕಿ 78 ಮಂದಿ ಉನ್ನತ ಶ್ರೇಣಿಯಲ್ಲಿ, 84 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಲಾವಣ್ಯ 680 ಅಂಕ ಪಡೆದು ಭದ್ರಾವತಿ ತಾಲೂಕಿಗೆ ಪ್ರಥಮರೆನಿಸಿದ್ದಾರೆ. ಉಳಿದಂತೆ ಆಕರ್ಷ ಕುಮಾರ್ 578 ಅಂಕ, ಸಂಗೀತ 578, ಲಕ್ಷ್ಮಿ ಜಿ.ಚಿನಿವಾರ್  574, ರಂಜಿತ್ 574 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಭಿನಂದಿಸಿದ್ದಾರೆ.
ಅಕ್ಷರ ಕಾಲೇಜಿಗೆ ಶೇ.91 ಫಲಿತಾಂಶ
ಶಿಕಾರಿಪುರದ ಅಕ್ಷರ ವಿಜ್ಞಾನ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಕಾಲೇಜಿನ ಪ್ರತೀಕ್ಷಾ ಎಂ ನಾಯ್ಕ್ ಶೇ.95.66 ಹಾಗೂ ಪ್ರಿಯಕುಮಾರ್ ಎಸ್.ಪಿ ಶೇ.94.33 ಅಂಕಗಳೊಂದಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.  ಪರೀಕ್ಷೆಗೆ ಕುಳಿತ ಒಟ್ಟು 55 ವಿದ್ಯಾರ್ಥಿಗಳಲ್ಲಿ 19 ಉನ್ನತ ಶ್ರೇಣಿ, 25 ಪ್ರಥಮ ಶ್ರೇಣಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಗಳಿಸಿರುತ್ತಾರೆ. ಒಟ್ಟಾರೆ ಕಾಲೇಜಿನ ಫಲಿತಾಂಶವು ಶೇ.91 ಆಗಿರುತ್ತದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಬನಸಿರಿ ಲಯನ್ಸ್ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ
ಶಿಕಾರಿಪುರ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಪ್ರತಿಷ್ಠಿತ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ ಲಭ್ಯವಾಗಿದ್ದು, ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
   ಕಲಾ ವಿಭಾಗದಲ್ಲಿ ಪ್ರತಿಭಾ ಹೆಚ್ಚು ಅಂಕ (560) ಗಳಿಸಿದ ಪ್ರತಿಭಾನ್ವಿತೆಯಾಗಿದ್ದು, ನಂತರದಲ್ಲಿ ಭಾರತಿ (ಶೇ.91.33), ಅನುಷಾ (ಶೇ.90.33) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳಲ್ಲಿ 21 ಅತ್ಯುನ್ನತ ಶ್ರೇಣಿಯಲ್ಲಿ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸತತ 6ನೇ ವರ್ಷ ಶೇ.100 ಫಲಿತಾಂಶದ ಮೂಲಕ ಕೀರ್ತಿ ಹೆಚ್ಚಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಚಾರ್ಯ ಮತ್ತು ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.
ಕುಮದ್ವತಿ ಕಾಲೇಜು: ಶೇ.94 ಫಲಿತಾಂಶ
ಶಿಕಾರಿಪುರ:  ಪಿಯು ಪರೀಕ್ಷೆಯಲ್ಲಿ ಇಲ್ಲಿನ ಕುಮದ್ವತಿ ಪದವಿ ಪೂರ್ವ ಕಾಲೇಜಿಗೆ ಶೇ.94.8 ಫಲಿತಾಂಶ ಲಭಿಸಿದ್ದು, ವಿಜ್ಞಾನ ವಿಭಾಗದಲ್ಲಿ ಸಿ.ಎಸ್.ಮೋಹನ್ 556 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾನೆ. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ.100, ವಿಜ್ಞಾನ ವಿಭಾಗದಲ್ಲಿ ಶೇ.89.6 ಫಲಿತಾಂಶ ಲಭಿಸಿದೆ. ಒಟ್ಟಾರೆ ಶೇ.94.8 ಫಲಿತಾಂಶದ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
   20 ಅತ್ಯುನ್ನತ ಶ್ರೇಣಿ, 127 ಪ್ರಥಮ ದರ್ಜೆ, 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಕ್ಷಯಕುಮಾರ್ 571 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಸಹಕಾರ ಸಂಘದ ಅಧ್ಯಕ್ಷರಾಗಿ ಗಿರೀಶ್
ಶಿಕಾರಿಪುರ:  ಇಲ್ಲಿನ ಶ್ರೀಅಲ್ಲಮಪ್ರಭು ವಿವಿಧೋದ್ಧೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಿರೀಶ್ ಧಾರವಾಡದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
  ಸಂಘದ 2ನೇ ಅವಧಿಗೆ ಅಧ್ಯಕ್ಷರಾಗಿರುವ ಗಿರೀಶ್ ಆಯ್ಕೆಯನ್ನು ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು. ಈ ಸಂದರ್ಭ ಸಂಘದ ನಿರ್ದೇಶಕ ರುದ್ರಮುನಿ, ಕಾರ್ಯದರ್ಶಿ ರಾಮಕೃಷ್ಣಪ್ಪ, ರವಿಕುಮಾರ್ ಮತ್ತಿತರು ಹಾಜರಿದ್ದರು.
ಶಿವಮೊಗ್ಗ ಕಾಲೇಜುಗಳ ಪಟ್ಟಿ...
ಕಾಲೇಜು     ಪ.ಕುಳಿತವರು     ಉತ್ತೀರ್ಣರಾದವರು     ಶೇ.     ಡಿಸ್ಟಿಂಕ್ಷನ್

ಪೇಸ್     285     283     99.29     158
ಆದಿಚುಂಚನಗಿರಿ     105     104     99.04     28
ಮೇರಿ ಇಮ್ಯಾಕ್ಯುಲೇಟ್     102     101     99.01     07
ಅರಬಿಂದೋ     234     230     98.29     188
ವಿಕಾಸ      164     160     97.56     41
ಆಚಾರ್ಯ     112     109     97.32     26
ವಿದ್ಯಾಭಾರತಿ     192     170     88.54     42
ಡಿವಿಎಸ್ ಸ್ವತಂತ್ರ     565     476     84.24     111
ಡಿವಿಎಸ್ ಸಂಯುಕ್ತ     338     283     83.72     66
ಪಿಇಎಸ್     172     142     82.55     21
ವಿದ್ಯಾನಿಕೇತನ     78    64     82.50     01
ಕಸ್ತೂರಿಬಾ     433     355     81.98     30
ಆಜಾದ್ ಬಾಲಿಕಾ     106     84     79.24     02
ಜೆಪಿಎನ್     114     88     77.19     01
ಸೆಕ್ರೆಡ್ ಹಾರ್ಟ್     206     159     77.18     05
ವಿದ್ಯಾವಿನೂತನ     33     25     75.75     01
ರಾಷ್ಟ್ರೀಯ ಪಪೂಕಾ    388     275     70.87     11
ಸರ್ವೋದಯ ಬಾಲಿಕಾ     213    138     64.78     03
ಮಂದಾರ     17     11     64.70     00
ಶ್ರೀ ವಿನಾಯಕ     73     47     64.38     03
ಬಸವೇಶ್ವರ     123     77     62.60     00
ಗುರುಕುಲ     19     10     52.63     00
ವೀಣಾ ಶಾರದಾ     63     33     52.38     01
ಸರ್ಕಾರಿ ಪ.ಪೂ.ಕಾಲೇಜು    860     388     45.11     05
ಡಿವಿಎಸ್ ವಿನೋಬನಗರ     71     32     45.07     00
ಸರ್ಕಾರಿ ಬಾಲಿಕಾ ಪಪೂಕಾ    577     235     40.72     00
ಡಿವಿಎಸ್ ವಿಭಜಿತ     137     40     29.19     01
ಎಸಸ್ಜಿ ಎಸ್‌ಕೆ     45     02     04.44     00

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.