ಧರ್ಮಪ್ರಜ್ಞೆಯಿಂದ ಸದೃಡ ದೇಶ
ಕ.ಪ್ರ.ವಾರ್ತೆ ್ಣ ಶಿಕಾರಿಪುರ ್ಣ ಮೇ 12
ದೇಶದಲ್ಲಿ ಬದಲಾವಣೆಯ ಅನಿವಾರ್ಯ ಸ್ಥಿತಿ ಉದ್ಭವಿಸಿದ್ದು, ಈ ದಿಸೆಯಲ್ಲಿ ಜನತೆಯಲ್ಲಿ ದೇಶಾಭಿಮಾನ ಧರ್ಮಪ್ರಜ್ಞೆ ಮೂಲಕ ಸದೃಡ ರಾಷ್ಟ್ರ ನಿರ್ಮಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ತಾಲೂಕಿನ ನಿಂಬೇಗೊಂದಿಯಲ್ಲಿ ಸೋಮವಾರ ಗ್ರಾಮದ ಗುರುಕೊಟ್ಟೂರೇಶ್ವರ ಸ್ವಾಮಿಯ ಸ್ವಯಂ ಭೂ ಮೂರ್ತಿಗೆ ನಿರ್ಮಿಸಿದ ನೂತನ ಶಿಲಾಮಂದಿರ ಕಳಸಾರೋಹಣ ಮಹೋತ್ಸವದ ಕಡೆಯ ದಿನದ ಧರ್ಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಥಮ ಸ್ಥಾನ: ಜನಸಾಮಾನ್ಯರಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ, ಸಮಾಜ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಭಾರತವು ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ನಾಡಿನಲ್ಲಿ ಸಕಾಲಕ್ಕೆ ಉತ್ತಮ ರೀತಿಯ ಮಳೆ, ಬೆಳೆಯ ಮೂಲಕ ಜನಸಾಮಾನ್ಯರು ಉತ್ತಮ ಸ್ಥಿತಿಯಲ್ಲಿರಲು ಧಾರ್ಮಿಕ ಪ್ರಜ್ಞೆ ಬಹುಮುಖ್ಯ ಕಾರಣವಾಗಿದೆ ಎಂದವರು ಹೇಳಿದರು.
ದೇಶದಲ್ಲಿ ಬದಲಾವಣೆಯ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದು, ಎಲ್ಲಾ ರಂಗದಲ್ಲಿಯೂ ದೇಶ ಪ್ರಥಮ ಸ್ಥಾನದಲ್ಲಿರುವುದನ್ನು ಇತರೆ ದೇಶಗಳು ಮೆಚ್ಚಿಕೊಂಡಿದ್ದರೂ ಜನರಲ್ಲಿ ಜನಜಾಗೃತಿ, ಸ್ವಾಭಿಮಾನ ಮೂಡಿಸಬೇಕಾಗಿದೆ ಎಂದ ಅವರು, ದೇಶಾಭಿಮಾನ ಧರ್ಮಪಜ್ಞೆ ಮೂಲಕ ಸದೃಢ ರಾಷ್ಟ್ರ ನಿರ್ಮಾಣ ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ತಾರತಮ್ಯವಿಲ್ಲ: ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಮುಖ್ಯಮಂತ್ರಿಯಾಗಿ ಅಧಿಕಾರ ದೊರೆತ ಸಂದರ್ಭದಲ್ಲಿ ಯಡಿಯೂರಪ್ಪನ ತಾರತಮ್ಯಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಎಲ್ಲಾ ವರ್ಗದ ಮಠ ಮಂದಿರಗಳಿಗೂ ಅನುದಾನ ನೀಡಿದ್ದು, ಇಂದಿನ ಸರ್ಕಾರ ಮುಜರಾಯಿ ಸುಪರ್ದಿನ ದೇವಾಲಯಗಳಿಗೆ ಮಾತ್ರ ಅನುದಾನ ನೀಡುವ ಸುತ್ತೋಲೆ ಹೊರಡಿಸಿದೆ ಎಂದು ಬೇಸರಿಸಿದರು.
ಐತಿಹಾಸಿಕ ಹಿನ್ನೆಲೆಯಲ್ಲಿ ಗುರುಕೊಟ್ಟೂರೇಶ್ವರ ಸ್ವಾಮಿಯ ದೇವಾಲಯದ ಅಭಿವೃದ್ಧಿಗೆ ತಾಯಿಯ ಸ್ಮರಣಾರ್ಥ ರು. 2 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯವನ್ನು ಕೊಟ್ಟೂರು ಶ್ರೀ ಮ.ನಿ.ಜ ಶಂಕರಸ್ವಾಮಿಗಳು ವಹಿಸಿದ್ದರು. ಕೋಣಂದೂರಿನ ಶ್ರೀ ಷ.ಬ್ರ ಪಂಡಿತಾರಾದ್ಯ ಶಿವಾಚಾರ್ಯ ಶ್ರೀ ಆಶೀರ್ವದಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಇ.ಕೊಟ್ರೇಶಪ್ಪ ಅದ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಈಶ್ವರಪ್ಪ, ಮುಖಂಡ ಗುರುಮೂರ್ತಿ, ಕೊಟ್ಟೂರು ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ ಸತ್ಯಪ್ರಕಾಶ್, ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಧರ್ಮಕರ್ತ ಎ.ಎಂ.ಬಿ ಕೊಟ್ರಯ್ಯ, ಕಾರ್ಯದರ್ಶಿ ಕೆ.ಎಂ ನಾಗರಾಜ್, ಸಿದ್ದಲಿಂಗಪ್ಪ ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ರಾತ್ರಿ ಗ್ರಾಮದ ಹುಚ್ಚಂಗೇಶ್ವರಿ ವಾಲ್ಮೀಕಿ ತರುಣ ನಾಟ್ಯ ಸಂಘದ ವತಿಯಿಂದ ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ ಎಂಬ ಸಾಮಾಜಿಕ ನಾಟಕವನ್ನು ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

