ಶಿವಮೊಗ್ಗ

ಖರೀದಿ- ಮಾರಾಟ ಅಪ್‌ಲೋಡ್ ಆದೇಶ ಮುಂದೂಡಲು ಒತ್ತಾಯ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 21
ವರ್ತಕರು ತಮ್ಮ ಪ್ರತಿದಿನದ ಖರೀದಿ ಮತ್ತು ಮಾರಾಟ ಮಾಹಿತಿಯನ್ನು ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಮುಂದೂಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಹಕಾರ ಸಂಘ ಒತ್ತಾಯಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಎನ್. ಮಹೇಂದ್ರಪ್ಪ ಮಾತನಾಡಿ, ಮೌಲ್ಯವರ್ಧಿತ ತೆರಿಗೆ ಇಲಾಖೆಯ ಆದೇಶ ಮುಂದೂಡುವಂತೆ ಒತ್ತಾಯಿಸಿದರು.
20ರೊಳಗೆ ಅಪ್‌ಲೋಡ್: ಮೌಲ್ಯವರ್ಧಿತ ತೆರಿಗೆ ಇಲಾಖೆ ಹೊರಡಿಸಿರುವ ಆದೇಶದನ್ವಯ ವರ್ತಕರು ಹಾಗೂ ಉದ್ಯಮಿಗಳು ತಮ್ಮ ಪ್ರತಿದಿನದ ಖರೀದಿ ಮತ್ತು ಮಾರಾಟದ ಮಾಹಿತಿಯನ್ನು ನಂತರದ ತಿಂಗಳ 20ರ ಒಳಗಾಗಿ ಇಲಾಖೆ ವೆಬ್ ಸೈಟಿನಲ್ಲಿ ಅಪ್‌ಲೋಡ್ ಮಾಡಬೇಕಿದೆ.
ಇದಕ್ಕಾಗಿ ಸರ್ಕಾರ ಪ್ರತ್ಯೇಕ ಸಾಫ್ಟ್‌ವೇರ್ ರೂಪಿಸಿದ್ದು, ಟಿನ್ ನಂಬರ್ ಪಡೆದಿರುವ ವರ್ತಕರು ಹಾಗೂ ಉದ್ಯಮಿಗಳು ನಮೂನೆ 115 ರಲ್ಲಿ ವರ್ಷದ ಅಂತ್ಯಕ್ಕೆ 60 ದಿನದೊಳಗೆ ಗಣಕೀಕೃತ ವ್ಯವಸ್ಥೆಯನ್ವಯ ಸಲ್ಲಿಸಬೇಕು. ಇಲ್ಲದಿದ್ದರೆ ರು. 5,000 ದಂಡ, ವರದಿ ಸಲ್ಲಿಸುವ ತನಕ ಪ್ರತಿದಿನ ರು. 50 ತಂಡ ವಿಧಿಸುವ ನಿಯಮ ರೂಪಿಸಿದೆ ಎಂದಿದ್ದಾರೆ. ಆದರೆ ವರ್ತಕರಿಗೆ ಹೊಸ ಆದೇಶದ ಬಗ್ಗೆ ಸರ್ಕಾರ ಯಾವುದೇ ತಿಳಿವಳಿಕೆ ನೀಡಿಲ್ಲ. ವರ್ತಕರು ಕಂಪ್ಯೂಟರ್ ಜ್ಞಾನ ಇರುವವರ ನೆರವು ಪಡೆಯಬೇಕು. ಅದಕ್ಕಿಂತ ಮುಂಚೆಯೇ ಕಾರ್ಯಗತ ಮಾಡಲು ಹೊರಟಿದೆ. ಹಾಗಾಗಿ ವರ್ತಕರು ಈ ಬಗ್ಗೆ ಜಾಗೃತರಾಗುವವರೆಗೆ 6 ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.
ಅಲ್ಲದೇ ಸರ್ಕಾರ ನಿಗದಿಪಡಿಸಿರುವ ರು. 50 ಲಕ್ಷ ವಹಿವಾಟು ಮಿತಿಯನ್ನು ರು. 1 ಕೋಟಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿರುವ ಅವರು, ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರ ಕೈಗಾರಿಕಾ ಬಳಕೆದಾರರಿಗೆ ವಿದ್ಯುಚ್ಛಕ್ತಿ ದರ ಏರಿಕೆ ಮಾಡಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಹಳೆ ದರವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಂಜಪ್ಪ, ವಾಸುದೇವ್, ಮಧುಸೂದನ್ ಐತಾಳ್, ಅಶ್ವತ್ಥನಾರಾಯಣ ಶೆಟ್ಟಿ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.