ಶಿವಮೊಗ್ಗ

ಭರವಸೆ ಈಡೇರಿಸಿದ ತೃಪ್ತಿ: ಶಾಸಕ ವೈಎಸ್.ವಿ.ದತ್ತ

Published On :

ಕಡೂರು: ತಾವು ಶಾಸಕರಾದ ಪ್ರಥಮ ವರ್ಷದಲ್ಲಿಯೇ ಜನರಿಗೆ ನೀಡಿದ ಭರವಸೆಯಂತೆ ಭದ್ರಾ ಡ್ಯಾಂನಿಂದ ಕಡೂರು ಹಾಗೂ ಬೀರೂರು ಪಟ್ಟಣದ ಜನರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಮೂಲಕ ನನ್ನ ಪ್ರಯತ್ನ ಫಲಕಾರಿಯಾಗಿದೆ. ಈ ಬಗ್ಗೆ ತಮಗೆ ಆತ್ಮ ಸಂತೋಷವಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
2008ರಲ್ಲಿ ಪ್ರಾರಂಭವಾದ ಭದ್ರಾ ಕುಡಿಯುವ ನೀರಿನ ಯೋಜನೆಯು ಅಂದಿನ ಶಾಸಕರಾದ ಕೆ.ಎಂ. ಕೃಷ್ಣಮೂರ್ತಿಯವರು ಮತ್ತು ಸಂಸತ್ ಸದಸ್ಯರಾಗಿದ್ದ ಡಿ.ಸಿ. ಶ್ರೀಕಂಠಪ್ಪ ಅವರ ಅವಧಿಯಲ್ಲಿ ಆರಂಭವಾಯಿತು. 2 ದೊಡ್ಡ ಪ್ರಮಾಣದ ಅಡ್ಡಿಗಳು ಉಂಟಾಗಿ ಯೋಜನೆಯ ಕಾಮಗಾರಿ ಕೆಲಸ ಸಂಪೂರ್ಣ ನಿಷ್ಕ್ರಿಯವಾಗಿತ್ತು. 2013ರ ಮೇ 29 ರಂದು ನಾನು ಕಡೂರು ವಿಧಾನಸಕಭಾ ಕ್ಷೇತ್ರದ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿದೆ. ಅಂದಿನಿಂದಲೇ ಸ್ಥಗಿತವಾಗಿದ್ದ ಈ ಭದ್ರಾ ಯೋಜನೆಗೆ ಚಾಲನೆ ನೀಡಿ ಶತಾಯ ಗತಾಯ ಶೀಘ್ರವಾಗಿಯೇ ಕಾಮಗಾರಿ ಮುಗಿಸುವ ಹಂತಕ್ಕೆ ನನ್ನ ಪ್ರಯತ್ನ ಸಾಗಿತು ಎಂದರು.
ಭದ್ರಾ ನದಿಯಿಂದ ಕಡೂರು, ಬೀರೂರು ಸೇರಿದಂತೆ ಮಾರ್ಗ ಮಧ್ಯದ 34 ಹಳ್ಳಿಗಳಿಗೆ ಈ ಯೋಜನೆ ಶಾಶ್ವತ ನೀರು ಒದಗಿಸಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.