ಶಿವಮೊಗ್ಗ

ಮಂಜುನಾಥ ಗೌಡ ಬಣಕ್ಕೆ ಗೆಲವು

Published On :

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹೊಸಬರು- ಹಳಬರ ಸಮ್ಮಿಲನವಾಗಿದೆ. ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡರ ಬಣ ಗೆಲುವು ಸಾಧಿಸಿದರೆ, ಕೊನೆ ಹಂತದಲ್ಲಿ ಹೋರಾಡಿದ ಸಹಕಾರ ಭಾರತಿ ತಂಡಕ್ಕೆ ಪೂರ್ಣ ಯಶ ಸಿಗಲಿಲ್ಲ.
 ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 13 ನಿರ್ದೇಶಕ ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 9 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಿತು.
ಗೆಲವು: ಡಿಸಿಸಿ ಬ್ಯಾಂಕ್‌ನ ಮುಂದಿನ ಅವಧಿಗೆ ನಿರ್ದೇಶಕರಾಗಿ ಕೆ.ಪಿ. ದುಗ್ಗಪ್ಪಗೌಡ, ಜೆ.ಪಿ. ಯೋಗೇಶ್, ಅಗಡಿ ಅಶೋಕ್, ಎನ್.ಎಚ್. ಶ್ರೀಪಾದ್ ರಾವ್, ಎಚ್.ಕೆ. ವೆಂಕಟೇಶ್, ಎಂ.ಎಂ. ಪರಮೇಶ್, ಬಸವಾನಿ ವಿಜಯದೇವ್, ಆರ್.ಎಂ. ಮಂಜುನಾಥ ಗೌಡ, ಕೀರ್ತಿರಾಜ್ ಕೆ. ಕಾನಳ್ಳಿ, ಎಸ್.ಪಿ. ದಿನೇಶ್, ಎಂ.ಬಿ. ಚನ್ನವೀರಪ್ಪ, ಟಿ.ಎಸ್. ಮಂಜುನಾಥ,
ಬಿ.ಡಿ. ಭೂಕಾಂತ್ ಆಯ್ಕೆಯಾಗಿದ್ದಾರೆ. ಮುಂದಿನ ಅವಧಿಗೆ ಮಂಜುನಾಥ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.  ಮತ ಎಣಿಕೆ ನಂತರ ಪ್ರಕ್ರಿಯೆ ನೀಡಿದ ಆರ್.ಎಂ.ಮಂಜುನಾಥ ಗೌಡ, ಸಹಕಾರಿ ವಲಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಎಸ್.ಪಿ.ದಿನೇಶ್, ಶ್ರೀಪಾದ್, ಯೋಗೀಶ್ ಮುಂತಾದವರು ಮಂಡಳಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಡಿಸಿಸಿ ಬ್ಯಾಂಕ್ ಅನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮುಂದೆಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಚುನಾವಣೆಯಲ್ಲಿ ಅಕ್ರಮ- ದೂರು:
ಶಿವಮೊಗ್ಗ: ಡಿಸಿಸಿ ಬ್ಯಾಂಕ್ಚುನಾವಣೆಯಲ್ಲಿ ಗುಪ್ತ ಮತದಾನ ಪಾಲನೆಯಾಗಿಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ.ಆರ್.ಭೀಮರಾವ್ ಆರೋಪಿಸಿದ್ದಾರೆ.
 ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಖುದ್ದು ಮುಂದೆ ನಿಂತು ಚುನಾವಣಾ ಅಕ್ರಮಕ್ಕೆ ಕಾರಣರಾಗಿದ್ದಾರೆ. ಮತದಾರರು ಮತ ಪತ್ರವನ್ನು ಮಂಜುನಾಥ ಗೌಡರಿಗೆ ತೋರಿಸಿದ್ದಾರೆ ಎಂದು ಭೀಮರಾವ್ ಚುನಾವಣಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದರು.
 ಮತದಾನದ ಟೇಬಲ್ ಅನ್ನು ಎಲ್ಲರಿಗೂ ಕಾಣುವಂತೆ ದಿಕ್ಕು ಬದಲಿಸಿ ಇಡಲಾಗಿತ್ತು. ಮಂಜುನಾಥ ಗೌಡರು 15 ಮಂದಿ ಮತದಾರರನ್ನು ಏಕಕಾಲಕ್ಕೆ ಕರೆತಂದು ಮತಚಲಾವಣೆ ಮಾಡುವಂತೆ ನೋಡಿಕೊಂಡರು. ಇಷ್ಟೆಲ್ಲಾ ಆದರೂ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಕುಸುಮ ಕುಮಾರಿ ಚಕಾರ ಎತ್ತಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
 ಗುಪ್ತ ಮತದಾನ ನಡೆಯಬೇಕಿದ್ದ ಜಾಗದಲ್ಲಿ ಮತ ಪತ್ರವನ್ನು ಅಭ್ಯರ್ಥಿಗೆ ತೋರಿಸಿದ್ದಲ್ಲದೇ ಮತದಾನ ಪ್ರಕ್ರಿಯೆಯನ್ನು ಸಾರ್ವಜನಿಕರು ನೋಡುವಂತೆ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನವಾಗಿದೆ. ಇದನ್ನು ಸ್ಥಳದಲ್ಲೇ ಪ್ರತಿಭಟಿಸಿದರೂ ಚುನಾವಣಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಭೀಮರಾವ್ ಹಾಗೂ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿಯವರು ಹೆಚ್ಚುವರಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು, ಬಹಿರಂಗವಾಗಿ ಪ್ರದರ್ಶಿಸಿದ ಮತ ಪತ್ರಗಳನ್ನು ಅಸಿಂಧುಗೊಳಿಸಬೇಕು, ಇಲ್ಲವೇ ಮರು ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳು, ಅಭ್ಯರ್ಥಿಗಳ ಪಡೆದ ಮತಗಳ ವಿವರ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು: ಶಿವಮೊಗ್ಗ ತಾಲೂಕು- ಕೆ.ಪಿ.ದುಗ್ಗಪ್ಪಗೌಡ, ಅವಿರೋಧ ಆಯ್ಕೆ ಭದ್ರಾವತಿ ತಾಲೂಕು- ಜೆ.ಪಿ.ಯೋಗೇಶ್ (05), ಎಚ್.ಎಲ್.ಷಡಾಕ್ಷರಿ (04) ತೀರ್ಥಹಳ್ಳಿ ತಾಲೂಕು- ಬಸವಾನಿ ವಿಜಯದೇವ (20), ಎಚ್.ಆರ್.ನವೀನ (02) ಸಾಗರ ತಾಲೂಕು- ಎಚ್.ಕೆ.ವೆಂಕಟೇಶ್ (10), ಬಿ.ಜಿ.ದಿನೇಶ್ಬ್‌ರದವಳ್ಳಿ (06), ಪಿ.ಎನ್.ಸುಬ್ಬರಾವ್ (04), ಎಂ.ಸಿ.ರತ್ನಾಕರ ಗೌಡ(01), ಕೆ.ಆರ್.ಶ್ರೀಧರ ಭಟ್(01)  ಸೊರಬ ತಾಲೂಕು- ಎನ್.ಎಚ್.ಶ್ರೀಪಾದರಾವ್(ಅವಿರೋಧ ಆಯ್ಕೆ) ಹೊಸನಗರ ತಾಲೂಕು- ಎಂ.ಎಂ.ಪರಮೇಶ (ಅವಿರೋಧ ಆಯ್ಕೆ)  ಶಿಕಾರಿಪುರ ತಾಲೂಕು- ಅಗಡಿ ಅಶೋಕ (ಅವಿರೋಧ ಆಯ್ಕೆ)  ಕೃಷಿ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ, ಇತರೆ ಮಾರಾಟ ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗ- ಆರ್.ಎಂ.ಮಂಜುನಾಥ ಗೌಡ(15), ಭೀಮರಾವ್ ಟಿ.ಆರ್.-(01) ಸಾಗರ ಉಪ ವಿಭಾಗ- ಕೀರ್ತಿರಾಜ್ ಕೆ.ಕಾನಳ್ಳಿ(16), ಹರನಾಥ ರಾವ್ (07), ಬಿ.ಎಸ್.ಈರೇಶ್ (00)  ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು: ಶಿವಮೊಗ್ಗ ಉಪ ವಿಭಾಗ- ಎಸ್.ಪಿ.ದಿನೇಶ್ (33), ಎಸ್.ಕೆ.ಮರಿಯಪ್ಪ (16), ಎಸ್.ರಮೇಶ್ (02), ಪಿ.ವೀರಮ್ಮ (01) ಸಾಗರ ಉಪ ವಿಭಾಗ- ಎಂ.ಬಿ.ಚನ್ನವೀರಪ್ಪ (35), ಎಪ್.ಪಿ.ನಂಜುಂಡಪ್ಪ (09),  ಇನ್ನಿತರೆ ಸಹಕಾರ ಸಂಘಗಳು: ಶಿವಮೊಗ್ಗ ಉಪ ವಿಭಾಗ- ಟಿ.ಎಸ್.ಮಂಜುನಾಥ (64), ಧರ್ಮೇಗೌಡ (54), , ಡಿ.ಚಂದ್ರಶೇಖರಪ್ಪ (02), ಚಂದ್ರಶೇಖರ್ (02) ಸಾಗರ ಉಪ ವಿಭಾಗ- ಬಿ.ಡಿ.ಭೂಕಾಂತ್ (34), ನವುಲೇಶಪ್ಪ (28)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.