ವಿಜ್ಞಾನ, ತಂತ್ರಜ್ಞಾನ ಬೆಳೆದರೂ ಮೂಢನಂಬಿಕೆ ಕಡಿಮೆಯಾಗಿಲ್ಲ
ಸೊರಬ: ವಿಜ್ಞಾನದ ಆವಿಷ್ಕಾರಗಳು ಹಾಗೂ ತಂತ್ರಜ್ಞಾನದಿಂದ ಇಡೀ ಜಗತ್ತಿನ ಮಾಹಿತಿ ಕ್ಷಣಾರ್ದದಲ್ಲಿ ತಿಳಿಯಬಹುದು. ಆದರೆ ಇಂಥ ಆವಿಷ್ಕಾರಗಳನ್ನು ಕೆಲವರು ವಿನಾಶಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾಧ್ಯಕ್ಷ ಶೇಖರ್ ಗೌಳಿ ಹೇಳಿದರು.
ಪಟ್ಟಣದ ಗುರುಭವನ ರಸ್ತೆಯಲ್ಲಿರುವ ಬಾಲವಿಕಾಸ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಶಾಖೆ ಹಾಗೂ ಸ್ನೇಹ ಸುರಭಿ ಮಹಿಳಾ ಸಮಾಜ, ಸೊರಬ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಮೂಢನಂಬಿಕೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟೀವಿ ಕಾರಣ: ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಮ್ಮಲ್ಲಿನ ಮೌಢ್ಯತೆಗಳು ಮತ್ತಷ್ಟು ಹೆಚ್ಚಾಗಲು ದೂರದರ್ಶನ ಮತ್ತು ಮೊಬೈಲಲ್ಕಾರಣವಾಗಿದೆ. ಟೀವಿಯಲ್ಲಿ ಅತಿರೇಕದ ದೃಶ್ಯಗಳು ಹೆಚ್ಚು ರಂಜಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜೋತಿಷ್ಯ, ಭವಿಷ್ಯ, ಗ್ರಹಗತಿ ಇವುಗಳನ್ನು ನಂಬದೇ ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ಫಲ ತಾನಾಗಿಯೇ ದೊರೆಯುತ್ತದೆ ಎಂದು ಹೇಳಿದರು.
ಸ್ನೇಹ ಸುರಭಿ ಮಹಿಳಾ ಸಮಾಜದ ಅಧ್ಯಕ್ಷೆ ರೇಣುಕಮ್ಮ ಗೌಳಿ ಅಧ್ಯಕ್ಷತೆ ವಹಿಸಿದ್ದರು. ಪ.ಪಂ. ಷಹರಿರೋಜ್‌ಗಾರ್ ಯೋಜನೆಯ ಅಧ್ಯಕ್ಷೆ ಸರಸ್ವತಿ ನಾವುಡ, ಪ.ಪಂ. ಸದಸ್ಯೆ ರತ್ನಮ್ಮ ನಾಗಪ್ಪ, ಶಿಕ್ಷಕಿ ಮುಕ್ತಾಬಾಯಿ ಭಟ್, ಇಂದ್ರಮ್ಮ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

