ಶಿವಮೊಗ್ಗ

ಸಂಸ್ಕೃತ ಕಾಲೇಜಿಗೆ ಶೇ.100 ಫಲಿತಾಂಶ

Published On :

ಶಿವಮೊಗ್ಗ: ಬೆಕ್ಕಿನ ಕಲ್ಮಠದ ಜಗದ್ಗುರು ಗುರು ಬಸವೇಶ್ವರ ವಿದ್ಯಾಪೀಠದಿಂದ ನಡೆಯುತ್ತಿರುವ ಗುರುಬಸವೇಶ್ವರ ಸಂಸ್ಕೃತ ವೇದಪಾಠ ಶಾಲೆ ಮತ್ತು ಗುರುಬಸವೇಶ ಸಂಸ್ಕೃತ ಕಾಲೇಜು 2013- 14ನೇ ಸಾಲಿನ ಸಂಸ್ಕೃತ ಪರೀಕ್ಷೆಗಳಲ್ಲಿ ಶೇ. 100 ಫಲಿತಾಂಶ ಪಡೆದಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನಡೆಸಿದ ಸಂಸ್ಕೃತ ಪ್ರಥಮ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳು, ಕಾವ್ಯ ತರಗತಿಯಲ್ಲಿ 20 ವಿದ್ಯಾರ್ಥಿಗಳು, ಸಾಹಿತ್ಯ ತರಗತಿಯ 12 ವಿದ್ಯಾರ್ಥಿಗಳು, ಬಿಎ ಪ್ರಥಮ ವರ್ಷ 20, ಬಿಎ ದ್ವಿತೀಯ ವರ್ಷ 12 ವಿದ್ಯಾರ್ಥಿಗಳು ಸೇರಿದಂತೆ 89 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಮೇ 30ರಿಂದ ಪುನಃ ತರಗತಿಗಳು ಆರಂಭವಾಗುತ್ತಿದ್ದು, ಪ್ರವೇಶ ಬಯಸುವವರು ಕಾಲೇಜಿನ ಪ್ರಾಂಶುಪಾಲ ವಿ.ಸಿ. ರೇಣುಕಾರಾದ್ಯ ಅವರನ್ನು ಸಂಪರ್ಕಿಸಬಹುದು. ಉಚಿತ ಶಿಕ್ಷಣ, ಪ್ರವೇಶ ಎಲ್ಲಾ ವರ್ಗದವರಿಗೂ ಮುಕ್ತ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಸಂಪರ್ಕ ಸಂಖ್ಯೆ ಮೊ. 9448244093.
ಗುರುತಿನ
ಚೀಟಿ ವಿತರಣೆ
ಶಿವಮೊಗ್ಗ: ದುರ್ಗಿಗುಡಿಯಲ್ಲಿರುವ ಕಂಚಿ ಕಾಮಾಕ್ಷಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ತನ್ನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುತ್ತಿದೆ. ಸದಸ್ಯರು ಸೊಸೈಟಿಗೆ ಆಗಮಿಸಿ ಗುರುತಿನ ಚೀಟಿ ಪಡೆಯುವಂತೆ ಕಾರ್ಯದರ್ಶಿ ಕೋರಿದ್ದಾರೆ. ಹಾಗೆಯೇ ಯಶಸ್ವಿಯ ಆರೋಗ್ಯ ಯೋಜನೆ ಪ್ರಾರಂಭವಾಗಿದ್ದು, ಸದಸ್ಯರು ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಿದ್ದಾರೆ. ಸಂಪರ್ಕ ಸಂಖ್ಯೆ ಮೊ. 8050385443.
ಯೋಗ ಶಿಬಿರ
ಶಿವಮೊಗ್ಗ: ಬಾಡಿ ಆ್ಯಂಡ್ ಸೋಲ್ ಯೋಗ ಸಂಸ್ಥೆಯು ಅಸ್ತಮಾ, ಉಸಿರಾಟದ ತೊಂದರೆ ನಿವಾರಣೆಗಾಗಿ ಯೋಗ ಶಿಬಿರ ಹಮ್ಮಿಕೊಂಡಿದೆ. ಜೂನ್ 5ರಿಂದ ಬೆಳಗ್ಗೆ 7.30ರಿಂದ ಪುರುಷರು- ಮಹಿಳೆಯರಿಗೆ ಹಾಗೂ ಸಂಜೆ 7ರಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಜೈಲ್ ರಸ್ತೆ ಪದ್ಮಾಂಬ ಚಿಕಿತ್ಸಾಲಯದ ಹಿಂಭಾಗದ ರಸ್ತೆ ವೆಂಕಟೇಶ ನಗರದಲ್ಲಿರುವ ಯೋಗ ಕೇಂದ್ರದಲ್ಲಿ ತರಗತಿಗಳು ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ಮೊ. 9844358367ಗೆ ಸಂಪರ್ಕಿಸಿ.
ಜಿಲ್ಲಾ ಸಮಿತಿ ರಚನೆ
ಮುತ್ತಪ್ಪ ರೈ ಅವರು ಸಂಸ್ಥಾಪನಾ ಅಧ್ಯಕ್ಷರಾಗಿರುವ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿ ಪುನರ್ ರಚನೆ ನಡೆಯುತ್ತಿದ್ದು, ಈ ಸಂಬಂಧ ಮೇ 31ರಂದು ರಾಜ್ಯ ಸಮಿತಿಯ ವೀಕ್ಷಕರು ನಗರದ ಜ್ಯೂಯಲ್ ರಾಕ್ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. ಆಸಕ್ತ ಯುವಕ, ಯುವತಿಯಲು ಸಭೆಗೆ ಆಗಮಿಸಲು ಕೋರಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಡಾ. ದೀಪಕ್ ಜೆ.ಆರ್. ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.