ತುಮಕೂರು

ಜಾತ್ರೆ ಸಾಮಾಜಿಕ ಸಂಬಂಧ ಬೆಸೆಯುತ್ತೆ

Published On :

ಕ,ಪ್ರ,ವಾರ್ತೆ  ಮಧುಗಿರಿ   ಏ. 4
ಜಾತ್ರೆಗಳು ಸಾಮಾಜಿಕ ಸಂಬಂಧಗಳನ್ನು ಬೆಸೆಯುವ ಜೊತೆಗೆ ಬಂಧು ಬಳಗದವರನ್ನು ಹತ್ತಿರ ತರುತ್ತವೆ ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅಭಿಪ್ರಾಯಪಟ್ಟರು.
 ಮಧುಗಿರಿಯ ಇತಿಹಾಸ ಪ್ರಸಿದ್ಧ  ಶಕ್ತಿ ದೇವತೆ  ಶ್ರೀದಂಡಿನಮಾರಮ್ಮ ಜಾತ್ರೆ ಪ್ರಯುಕ್ತ ಬುಧವಾರ ರಾತ್ರಿ  ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಬೆಳ್ಳಿ ಪಲ್ಲಕ್ಕಿ ಉತ್ಸವ, ಆಕರ್ಷಕ ಸಿಡಿಮದ್ದು ಪ್ರದರ್ಶನ ಮತ್ತು ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಸಮಾರಂಭ ಅಧ್ಯಕ್ಷತೆ ವಹಿಸಿ  ಅವರು  ಮಾತನಾಡಿದರು.
ಈ ಬೆಳ್ಳಿ ಪಲ್ಲಕ್ಕಿ ಉತ್ಸವ ನೋಡಲು ಬಂದಿರುವ ಜನ ಸಮೂಹ ಅಚ್ಚರಿ ತರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನು ಉಳಿದಿರುವ ಮನುಷ್ಯ ಸಂಬಂಧಗಳು ವಿಕಾಸ ರೂಪವಾಗಿ ಇದನ್ನು ನಾನು ಕಂಡಿದ್ದೇನೆ ಎಂದು ತಿಳಿಸಿ, ನಾನು ಇಲ್ಲಿ ಎಸಿ ಆಗಿದ್ದಾಗ ಇಂಥದ್ದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೆನಪು ಮರುಕಳಿಸುತ್ತಿದೆ. ಪ್ರತಿ ವರ್ಷದಂತೆ ಈ ಜಾತ್ರೆ ಸಂಪ್ರದಾಯ ಪರಂಪರೆಯನ್ನು ಮುಂದುವರಿಸಿ ಕೊಂಡು ಬರುತ್ತಿರುವುದು ಜನರಲ್ಲಿ ಇರುವ ಸೌಹರ್ದ, ಸಹಕಾರ  ಹಾಗೂ ಸೇವಾ ಮನೋಭಾವನ್ನು ಎತ್ತಿ ತೋರುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತ್ರೆಗಳು ಮನುಷ್ಯ ಸಂಬಂಧಗಳನ್ನು ಗಟ್ಟಿ ಗೊಳಿಸುತ್ತವೆ. ಆ ನಿಟ್ಟಿನಲ್ಲಿ ಈ ಜಾತ್ರೆ ಪ್ರತಿ ವರ್ಷದಂತೆ ಶಾಂತಿ, ಸುವ್ಯವಸ್ಥಿತವಾಗಿ ನಡೆದು ಕೊಂಡು ಬರುತ್ತಿರುವುದು ಶಕ್ತಿ ದೇವತೆಯ ಪವಾಡವೇ ಸರಿ ಎಂದರು.
 ಉತ್ತಮ ತಳಿಯ ಆಯ್ಕೆ ಮಾಡಿದ್ದ  ರಾಸುಗಳ ರೈತರಿಗೆ ಜಿ.ಪಂ.ಸಿಇಓ ಗೋವಿಂದರಾಜು  ಬಹುಮಾನ ವಿತರಿಸಿದರು.  ಬಾಣ ಬಿರುಸುಗಳು  ಜನರ ಮೆಚ್ಚುಗೆ ಗಳಿಸಿತು. ಮಧುಗಿರಿಯ ಸುತ್ತಮುತ್ತಲಿನವರಲ್ಲದೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ   ಭಕ್ತಾದಿಗಳು ಶಕ್ತಿ ದೇವತೆಯ ಉತ್ಸವಕ್ಕ ಆಗಮಿಸಿ ತಮ್ಮ ಶ್ರದ್ಧಾ, ಭಕ್ತಿ ಭಾವ ತೋರಿದ್ದು ಕಂಡು ಬಂತು. ಉಪವಿಭಾಗಾಧಿಕಾರಿ ಸಿ.ಅನಿತಾ, ತಹಸೀಲ್ದಾರ್ ರಮೇಶ್, ಡಿವೈಎಸ್ಪಿ ಸೌಮ್ಯಲತಾ, ಪ್ರಧಾನ ಅರ್ಚಕ ಎಂ.ಆರ್.ನಾಗಲಿಂಗಾಚಾರ್, ಧಾರ್ಮಿಕ ಮುಖಂಡಶ್ರೀನಿವಾಸಮೂರ್ತಿ ಇನ್ನು ಅನೇಕ ಗಣ್ಯರು ಭಕ್ತಾದಿಗಳು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.