ತುಮಕೂರು

ಶ್ರೀಯೋಗವಾಧವ ದೇವಾಲಯದ ಕಾಮಗಾರಿ ಕಳಪೆ

Published On :

ಚಿಕ್ಕನಾಯಕನಹಳ್ಳಿ: ತಾಲೂಕಿನ ಅತಿ ಪುರಾತನ ದೇವಾಲಯ ಹೊಯ್ಸಳ ಶೈಲಿಯ ಶ್ರೀಯೋಗವಾಧವ ದೇವಾಲಯದ ಕಾಮಗಾರಿಯನ್ನು ಗುತ್ತಿಗೆದಾರರು ಕಳೆಪೆಯಾಗಿ ನಿರ್ಮಿಸಿತ್ತಿದ್ದು ಮುಜುರಾಯಿ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಭಕ್ತಾದಿಗಳು  ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ  ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಯ ಅಧೀನಕ್ಕೊಳಪಟ್ಟಿರುವ ಹೊಯ್ಸಳ ಶೈಲಿಯ ಶ್ರೀಯೋಗವಾಧವ ದೇವಾಲಯದ ಜೀರ್ಣೋದ್ಧಾರವನ್ನು ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದಿದ್ದಾರೆ. ಅದರ ಅಂದಾಜು ಮೊತ್ತ 1ಕೋಟಿ 32 ಲಕ್ಷರು.ಗಳು. ಇಷ್ಟು ದೊಡ್ಡ ಮೊತ್ತದ ಗುತ್ತಿಗೆಯನ್ನು ಪಡೆದ ಗುತ್ತಿಗೆದಾರರು ದೇವಾಲಯದ ಕಾಮಗಾರಿಯನ್ನು ಕಳಪೆ ಮಾಡಿರುವುದಲ್ಲದೆ, ದೇವಾಲದಲ್ಲಿರುವ ಉತ್ತಮ ದರ್ಜೆಯ, ಅತ್ಯಂತ ಬೆಲೆಬಾಳುವ ಕಲ್ಲುಗಳನ್ನು ರಾತ್ರೋರಾತ್ರಿ ಬೇರೆಡೆಗೆ ಸಾಗಿಸಿರುವುದನ್ನು ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಗುತ್ತಿಗೆದಾರನನ್ನು ಪ್ರಶ್ನಿಸಿದರೆ, ಆತ ಗ್ರಾಮಸ್ಥರನ್ನೇ ಗದರಿಸಿರುವುದಾಗಿ ತಿಳಿದು ಬಂದಿದೆ.
ಅನುಮತಿ ನೀಡಿದವರಾರರು?: ಇಷ್ಟಕ್ಕು ಆತ ದೇವಾಲಯದ ಕಲ್ಲುಗಳನ್ನು ಬೇರೆಡೆ ಸಾಗಿಸಲು ಅನುಮತಿ ನೀಡಿದವರು ಯಾರು. ಕಾಮಗಾರಿ ನಡೆಯುವ ಜಾಗದಲ್ಲಿ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು, ಕಾಮಗಾರಿಯ ಸ್ವರೂಪ, ಕಾಮಗಾರಿಗೆ ನಿಗದಿ ಪಡಿಸಿರುವ ಮೊತ್ತ, ಕಾಮಗಾರಿಯನ್ನು ಪೂರೈಸಲು ಸರ್ಕಾರ ವಿಧಿಸಿರುವ ಕಾಲಮಿತಿ, ಮತ್ತು ಕಾಮಗಾರಿಗೆ ಬಳಸುವ ಕಚ್ಚಾವಸ್ತುಗಳ ವಿವರ ಮತ್ತು ಗುಣಮಟ್ಟ, ಮಾಹಿತಿಯುಳ್ಳ ಫಲಕವನ್ನು ಹಾಕಬೇಕು. ಇದು ಸರ್ಕಾರದ ಪಾರದರ್ಶಕ ನೀತಿಯ ನಿಯಮ. ಆದರೆ ಗುತ್ತಿಗೆದಾರ ಇದಾವುದನ್ನು ಪಾಲಿಸದೆ,ಸ್ಥಳೀಯ ಜನರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ಪ್ರಾರಂಭಿಸಿರುವದಲ್ಲದೆ.ಪ್ರಶ್ನಿಸಲು ಹೋದವರಿಗೆ ಧಮಕಿ ಹಾಕಿದ್ದಾರೆ. ಇದರಿಂದ ಕೆರಳಿದ ಜನತೆ ಪ್ರತಿಭಟಿಸಿ, ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸಿ ಕಾಮಗಾರಿಯ ಕಳಪೆ ಗುಣಮಟ್ಟದ ಬಗ್ಗೆ ವಿವರಿಸಿ , ಮನವಿ ಪತ್ರವನ್ನು ಸಹ ಸಲ್ಲಿಸಿದ್ದಾರೆ.  ಈ ಬಗ್ಗೆ ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದರೆ  ಮುಂಬರುವ ದಿನಗಳಲ್ಲಿ ಪ್ರತಿಭಟನೆಗಿಳಿಯುವುದು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.
ಇಂದು ಶನಿಪ್ರಭಾವ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ಗ್ರಾಮದೇವತೆ ಶ್ರೀ ಕಾಳಿಕಾಂಬದೇವಿಯ ಆಶೀರ್ವಾದದೊಂದಿಗೆ  ಪ್ರ್ರಾಯೋಗವಾಗಿ  ಶನಿವಾರದಂದು ಊರಿನ ಪ್ರಮುಖ ಬೀದಿಗಳಲ್ಲಿ ಶನೇಶ್ವರಸ್ವಾಮಿ ಉತ್ಸವ, ನವಗ್ರಹ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯ ನಡೆಸಿ, ಇದೇ ದಿನ ರಾತ್ರಿ ಕಂದಿಕೆರೆಯ ಡ್ರಾಮ ಸೀನರಿಯಲ್ಲಿ ರಾಜಸತ್ಯವ್ರತ ಅಥವಾ ಶನಿಪ್ರಭಾವ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ಕೆ.ಪಿ.ಚನ್ನಬಸವಯ್ಯ ಅವರ ನಿರ್ದೇಶನದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.