ಚುನಾವಣಾ ಅಕ್ರಮ ತಡೆಗೆ ಬಿಗಿ ಭದ್ರತೆ
ತುರುವೇಕೆರೆ: ತಾಲೂಕಿನ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ನಾಲ್ಕು ದಿಕ್ಕಿನಲ್ಲೂ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.
ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ತುರುವೇಕೆರೆ ವಲಯ ವ್ಯಾಪ್ತಿಯಲ್ಲಿ 12 ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ. ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡಿದ್ದ ಆಪಾದನೆ ಮೇರೆಗೆ ಹುಲಿಕಲ್ ಗ್ರಾಮದ ನಾಗರಾಜು, ಸುರೇಶ್, ರಾಮಕೃಷ್ಣ, ರಂಗಸ್ವಾಮಿ, ಗೌರಮ್ಮ, ಪುಟ್ಟೇಗೌಡ, ಸ್ವಾಮಿ, ಕೆ.ಮಾವಿನಹಳ್ಳಿಯ ಸುರೇಶ್, ಮೇಲನಹಳ್ಳಿಯ ಎಂ.ಎಲ್.ಲೋಕೇಶ್, ನೆರಿಗೇಹಳ್ಳಿಯ ಎನ್.ಎಂ.ಮುನಿರಾಜು, ಸತೀಶ್, ಕೊಂಡಜ್ಜಿ ಕ್ರಾಸ್ ನ ಕೆ.ಆರ್.ರಂಗೇಗೌಡ ಎಂಬುವವರ ವಿರುದ್ಧ ಅಕ್ರಮ ಮದ್ಯ ಸಂಗ್ರಹಣೆ ಮಾಡಿದ ಆರೋಪ ಹೊರಿಸಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್ ತಿಳಿಸಿದ್ದಾರೆ.
ಕಣ್ಗಾವಲು: ಚೆಕ್ ಪೋಸ್ಟ್ಗಳ ಸ್ಥಾಪನೆ ಮಾಡಿದ್ದು ಹಗಲು - ರಾತ್ರಿ ಗಸ್ತು ತಂಡಗಳ ನಿಯೋಜನೆ ಮಾಡಲಾಗಿದೆ. ಕಳೆದ ಎರಡು ವರ್ಷದಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ದಾಖಲು ಮಾಡಲಾಗಿರುವ ಸುಮಾರು 200 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಗಳ ಮೇಲೆ ಕಣ್ಗಾವಲು ಇಡಲಾಗಿದೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳಿಂದ ಅನ್ಯ ರಾಜ್ಯಗಳಿಂದ ನಕಲಿ ಮದ್ಯವನ್ನು ತಂದು ಹಂಚುವುದನ್ನು ತಡೆಗಟ್ಟಲು ಚುನಾಯಿತ ಪ್ರತಿನಿಧಿಗಳಾದ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ.
ಚುನಾವಣೆಯ ವೇಳೆ ಹಂಚುವ ಮದ್ಯದಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅಬಕಾರಿ ಇಲಾಖಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಮಾಡುವವರು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಅಬಕಾರಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್ ವಿನಂತಿಸಿಕೊಂಡಿದ್ದಾರೆ. ದೂರವಾಣಿ ಸಂಖ್ಯೆ 9620379070 (ವಿಜಯಕುಮಾರ್ ಅಬಕಾರಿ ನಿರೀಕ್ಷಕರು), 9964485866 (ಎಲ್.ಮಧುಸೂಧನ್ ಅಬಕಾರಿ ಉಪ ನಿರೀಕ್ಷಕರು) ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

