'ಅಲ್ಲಮ ವಚನದಿಂದ ತನು, ಮನ, ಭಾವ ಶುದ್ಧಿ'
ತುಮಕೂರು: ಅಲ್ಲಮಪ್ರಭು ಅವರು ತನು, ಮನ, ಭಾವಗಳ ಕೊಳೆಯ ಕಳೆದ ಮಹಾನುಭಾವ ಎಂದು ನಾಗವಲ್ಲಿಯ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಎಂ. ಸುರೇಶ್ ಬಣ್ಣಿಸಿದರು.
ಅವರು ನಗರದ ಶಾಂತಿನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತುಮಕೂರು ಘಟಕದ ಕಚೇರಿಯಲ್ಲಿ ಏರ್ಪಡಿಸಿದ್ದ ವಚನ ಶ್ರವಣ ಹಾಗೂ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದೇ ಘಟದಲ್ಲಿ ಪಂಚೇಂದ್ರಿಯಗಳನ್ನು ಹೊಂದಿದ ಮನುಷ್ಯನಿಗೆ ಮರೆವು ಆವರಿಸಿ, ಭ್ರಾಂತಿ ಮುಸುಕಿ, ಮಾಯೆಯ ಬಾಯಿಗೆ ತುತ್ತಾಗುವುದು ಸರಿಯೇ ಎಂಬ ಅಲ್ಲಮನ ವಚನವಾಣಿಯನ್ನು ಮನುಕುಲ ಅರಿತುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಲೇಖಕ ರುದ್ರಮೂರ್ತಿ ಎಲೆರಾಂಪುರ ಮಾತನಾಡಿ, ಜನಸಾಮಾನ್ಯರ ಬಳಿಗೆ ವಚನಗಳ ಮೌಲ್ಯಗಳು ಇಂದು ಹೆಚ್ಚು ತಲುಪಬೇಕು. ಇದಕ್ಕೆ ವಚನ ಶ್ರವಣ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಡಿ.ಎನ್. ಯೋಗೀಶ್, ಸಾಹಿತಿ ಎಂ.ಜಿ. ಸಿದ್ದರಾಮಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಎಸ್.ಎಸ್. ಮೂರ್ತಿ, ಶಿವಕುಮಾರ್, ಸಿರಿ, ಶ್ವೇತ, ಮಿಮಿಕ್ರಿ ಈಶ್ವರಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

