ತುಮಕೂರು

ಅಕ್ರಮ ಮಾನವ ಸಾಗಾಣಿಕೆ ಪತ್ತೆ: ಪೊಲೀಸರಿಂದ 79 ಜನರ ರಕ್ಷಣೆ

Published On :

ಕ.ಪ್ರ.ವಾರ್ತೆ  ,   ತುಮಕೂರು  ,   ಏ.23
ಕೆಲಸದ ಅಮಿಷ ತೋರಿಸಿ ಅಕ್ರಮ ಮಾನವ ಸಾಗಾಣೆ ಮಾಡುತ್ತಿದ್ದ ನಾಲ್ವರನ್ನು ಸರಕಾರೇತರ ಸಂಸ್ಥೆಯೊಂದರ ಸಹಕಾರದೊಂದಿಗೆ ಪಾವಗಡ ಪೊಲೀಸರು 42  ಮಹಿಳೆಯರು,16 ಹುಡುಗರು ಹಾಗೂ 21 ಪೋಷಕರನ್ನು ರಕ್ಷಿಸಿದ್ದಾರೆ.
ಬೆಂಗಳೂರಿನ ಓಯಸಿಸ್ ಎಂಬ ಎನ್.ಜಿ.ಓ ಸಂಸ್ಥೆ ನಿರ್ದೇಶಕಿ ಅನಿತಾ ಕನ್ನಯ್ಯ ನವರು ನೀಡಿದ ಖಚಿತ ಮಾಹಿತಿ ಮೇರೆಗೆ ಪಾವಗಡ ಠಾಣಾ ಪೊಲೀಸರು ಪಾವಗಡ ತಾಲೂಕಿನ ಹಿಂದೂಪುರ ರಸ್ತೆಯಲ್ಲಿ ಸಂಚರಿಸುತಿದ್ದ  ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕ್ರೂಸರ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಎರಡು ವಾಹನಗಳಿಂದ 42  ಹುಡುಗಿಯರು, 16 ಹುಡುಗರು ಹಾಗೂ ಸುಮಾರು 21 ಪೋಷಕರನ್ನು ಹಣ ಮತ್ತು ಕೆಲಸದ ಆಮಿಷವೊಡ್ಡಿ ತಮಿಳುನಾಡು ಮೂಲದ ಆರ್.ಗೋವಿಂದರಾಜು, ವಿ.ಸುಬ್ರಮಣ್ಯಂ, ಕೆ.ಕಾಮರಾಜು ಹಾಗೂ ಆಂಧ್ರ್ರ ಪ್ರದೇಶ ಮೂಲದ ನರಸಿಂಹ ಎಂಬುವವರು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ. ನಾಲ್ಕು ಜನರನ್ನು ವಶಕ್ಕೆ  ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ವಿರುದ್ದ ಐಪಿಸಿ ಕಲಂ 370(3),(5) ಮತ್ತು 370(ಎ) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಎ.ಎಸ್.ಪಿ. ಹನುಮಂತರಾಯಪ್ಪ, ಮಧುಗಿರಿ ಡಿವೈಎಸ್ಪಿ ಡಾ.ಎಸ್.ಕೆ. ಸೌಮ್ಯಲತಾ ಮಾರ್ಗದರ್ಶನದಲ್ಲಿ ಪಾವಗಡ ಸಿಪಿಐ ಭಾನುಪ್ರಸಾದ್, ಡಿಸಿಐಬಿ ವಿಭಾಗದ ಪಿಎಸ್‌ಐ ರವಿಕುಮಾರ್ ಮತ್ತಿತರರು ಭಾಗವಹಿಸಿ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದ ಬಾಲಕ, ಬಾಲಕಿಯರನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.