ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ರೋಡ್ ಶೋ
ಕ.ಪ್ರ.ವಾರ್ತೆ ಮಧುಗಿರಿ ಏ.23
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತನ್ನ ಹಸ್ತದ ಗುರುತಿಗೆ ಮತ ನೀಡುವಂತೆ ಕೆ.ಎನ್. ರಾಜಣ್ಣ ಬಿರುಸಿನಿಂದ ಮತಯಾಚನೆ ಮಾಡಿದರು.
ಪಟ್ಟಣದಲ್ಲಿ ರೋಡ್ಶೋ ಮೂಲಕ ಮತದಾರರ ಬಳಿಗೆ ತೆರಳಿ ಮತ ಯಾಚಿಸಿದ ಅವರು, ತಾನು ಈ ಕ್ಷೇತ್ರದಲ್ಲಿ ಎರಡು ಸಲ ಸೋಲುಂಡರು ಕೂಡ ಧೃತಿಗೆಡದೆ ಕಳೆದ ಐದು ವರ್ಷಗಳಿಂದ ಶ್ರೀಸಾಮಾನ್ಯರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿ ನನ್ನ ಕೈಲಾದ ಮಟ್ಟಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಕಾಂಗ್ರೆಸ್ ಬಡವರ, ಕೂಲಿಕಾರ್ಮಿಕರ ಹಾಗೂ ಎಲ್ಲ ವರ್ಗದವರ ಪಕ್ಷ.
ಹಾಗಾಗಿ ಮೇ.5ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಲುವಾಗಿ ತಮ್ಮ ಸೇವೆ ಮಾಡಲು ನನಗೆ ಸದಾವಕಾಶ ಮಾಡಿಕೊಡಬೇಕು ಎಂದು ರಾಜಣ್ಣ ಮತದಾರರಲ್ಲಿ ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಮುಖಂಡರಾದ ಎಂ.ಆರ್.ಜಗನ್ನಾಥ್, ಚಿಕ್ಕಣ್ಣ, ಶ್ರೀಧರ,ಪಿ.ಸಿ.ಕೃಷ್ಣಾರೆಡ್ಡಿ, ಡಿ.ಜಿ.ಶಂಕರನಾರಾಯಣಶೆಟ್ಟಿ, ಎಂ.ಜಿ.ಶ್ರೀನಿವಾಸಮೂರ್ತಿ, ವೆಂಕಟೇಶಬಾಬು,ಚಿರಂಜೀವಿ ಶ್ರೀನಿವಾಸಮೂರ್ತಿ, ರವಿಕುಮಾರ್, ಎಂ.ಎಸ್.ಶಂಕರನಾರಾಯಣ ಹಾಗೂ ಕಾರ್ಯಕರ್ತರು ಮತ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

