ಜೆಡಿಎಸ್ ಅಭ್ಯರ್ಥಿಯಿಂದ 10 ಸಾವಿರ ಮನೆ ಕಲ್ಪಿಸುವ ಭರವಸೆ
ತುಮಕೂರು: ತುಮಕೂರು ನಗರದ ಜನತೆ ಜೆಡಿಎಸ್ ಪಕ್ಷವನ್ನು ಆಶೀರ್ವದಿಸಿದರೆ ನಗರ ವ್ಯಾಪ್ತಿಯಲ್ಲಿರುವ ಬಡವರು ಹಾಗೂ ದೀನ ದಲಿತರಿಗೆ 10 ಸಾವಿರ ಮನೆ ಕಲ್ಪಿಸುವ ಭರವಸೆಯನ್ನು ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನೀಡಿದ್ದಾರೆ. ಅವರು ನಗರದ ಚಿಕ್ಕಪೇಟೆ ಬಡಾವಣೆಯಲ್ಲಿರುವ ಕೋಟೆ ಕೊಲ್ಲಪುರದಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಚಿಕ್ಕಪೇಟೆ, ದಿಬ್ಬೂರು ತೋಟದ ರಸ್ತೆ, ದಿಬ್ಬೂರು ಬಡಾವಣೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು. ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೋಟಿಗಟ್ಟಲೆ ಹಣ ಹರಿದು ಬಂದಿದೆ. ಆದರೆ ಸ್ಥಳೀಯ ಬಿಜೆಪಿ ಶಾಸಕರ ಇಚ್ಛಾಶಕ್ತಿ ಕೊರತೆಯಿಂದ ಅನುದಾನದ ಹಣದಲ್ಲಿ ನಯಾ ಪೈಸೆ ಪ್ರಯೋಜನವಾಗಿಲ್ಲ. ಬಂದ ಅನುದಾನದಲ್ಲಿ ಶಾಸಕರು ಉದ್ಧಾರವಾಗಿದ್ದಾರೆಯೇ ಹೊರೆತು ನಗರದ ಅಭಿವೃದ್ಧಿ ಪೂರ್ಣ ಪ್ರಮಾಣದಲ್ಲಿ ಮೂಲೆಗುಂಪಾಗಿದೆ ಎಂದರು. ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಭಾಗ್ಯಲಕ್ಷ್ಮೀ ಯೋಜನೆ, ವೃದ್ಧಾಪ್ಯ ವೇತನದಂತಹ ಮಹತ್ವದ ಯೋಜನೆ ಅನುಷ್ಠಾನಗೊಳಿಸಿದ ಕೀರ್ತಿ ಎಚ್.ಡಿ. ಕುಮಾರಸ್ವಾಮಿಗೆ ಸಲ್ಲುತ್ತದೆ. ಈ ಎಲ್ಲಾ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಗುರಿಯಿಟ್ಟುಕೊಂಡು ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು. ನಗರದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೆ ಆದರೆ ಬಡ ಮಕ್ಕಳಿಗೆ ಉಚಿತ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಮರ್ಪಕ ಕುಡಿಯುವ ನೀರು ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು. ಪ್ರಚಾರದಲ್ಲಿ ನಗರಸಭಾ ಸದಸ್ಯ ಟಿ.ಆರ್. ನಾಗರಾಜು, ಮುಖಂಡರಾದ ಅಕ್ಬರ್, ಕಮಲ್, ಯೋಗೇಶ್, ರಂಗನಾಥ್, ಮಲ್ಲಿಕಾರ್ಜುನ್, ವಿಶ್ವಕರ್ಮ ಸಮಾಜದ ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.
ಕೆಜೆಪಿ ಎಸ್ಟಿ ಘಟಕಕ್ಕೆ ಅಧ್ಯಕ್ಷರ ಆಯ್ಕೆ
ತಿಪಟೂರು: ತಾಲೂಕು ಕೆಜೆಪಿ ಎಸ್ಟಿ ಘಟಕಕ್ಕೆ ಹಾಲ್ಕುರಿಕೆಯ ಎಚ್.ಕೆ.ಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ಕೆಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶೇಖರ್, ಕೆಜೆಪಿ ಗೆಲ್ಲಿಸಲು ಯುವ ಶಕ್ತಿಯ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಎಲ್ಲಾ ಎಸ್ಟಿ ಜನಾಂಗವನ್ನು ಸಂಘಟಿಸುವ ಮೂಲಕ ಲೋಕೇಶ್ವರ ಗೆಲವಿಗೆ ಸಹಕರಿಸುವ ಜೊತೆಗೆ ಯಡಿಯೂರಪ್ಪನವರ ಕೈ ಬಲಪಡಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

