ತುಮಕೂರು

ಪಿಬಿಎಸ್ಗೆ ಭಾವಪೂರ್ಣ ಶ್ರದ್ಧಾಂಜಲಿ

Published On :

ಕನ್ನಡಪ್ರಭ ವಾರ್ತೆ    ತುಮಕೂರು    ಏ.30
ಇಲ್ಲಿನ ನಗರ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಡಾ. ಪಿ.ಬಿ. ಶ್ರೀನಿವಾಸ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಗಾಯಕರು ಪಿಬಿಎಸ್ ಅವರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಲೇಖಕಿ ಎಂ.ಸಿ. ಲಲಿತಾ ಮಾತನಾಡಿ ಪಿ.ಬಿ. ಶ್ರೀನಿವಾಸ್ ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಮಾನಸಿಕವಾಗಿ ಇದ್ದಾರೆ. ಅವರ ಎಲ್ಲಾ ಗೀತೆಗಳು ಇಂದಿಗೂ ಮಾಧುರ್ಯ ಮತ್ತು ಅರ್ಥಭರಿತ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ. ರೇಣುಕಯ್ಯ ಮಾತನಾಡಿ ಪಿಬಿಎಸ್ ರವರು ಸಾವಿರಾರು ಹಾಡುಗಳ ಬಹುಭಾಷಾ ಗಾಯಕರು. ಅವರ ಶಿಸ್ತು, ಶ್ರದ್ಧೆ, ಶ್ರಮ, ತಾಳ್ಮೆ, ವ್ಯಕ್ತಿತ್ವ ಇಂದಿನ ಗಾಯಕರಿಗೆ ಮಾದರಿಯಾಗಲಿ ಎಂದು ತಿಳಿಸಿದರು.ತ್ರಿನೇತ್ರ ನೃತ್ಯ ಶಾಲೆಯ ವ್ಯವಸ್ಥಾಪಕ ಎಚ್.ಆರ್. ನವೀನ್ ಅವರು ಡಾ. ಪಿ.ಬಿ.ಎಸ್ ಅವರ ಗೀತೆಗಳನ್ನು ಅತ್ಯುತ್ತಮವಾಗಿ ಹಾಡಿದ ಗಾಯಕರಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಸುಮ ಪ್ರಸನ್ನಕುಮಾರ್ ಸ್ವಾಗತಿಸಿದರು. ಮೋಹನ್ ಜಾದೂಗಾರ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ತು.ಮ. ಬಸವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.