'ನಗೆಯಿಂದ ಆರೋಗ್ಯ ನೆಮ್ಮದಿ ವೃದ್ಧಿ'
ಕನ್ನಡಪ್ರಭ ವಾರ್ತೆ, ತುಮಕೂರು, ಏ.30
ನಗೆಮುಗುಳು ಹಾಸ್ಯ ಮಾಸಪತ್ರಿಕೆ ಮತ್ತು ಪೂರ್ಣಿಮಾ ಸಾಹಿತ್ಯ ಮಂದಿರ ಪುಸ್ತಕ ಪ್ರಕಾಶನ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಮಾಸಿಕ ಅಧ್ಯಯನ ಗೋಷ್ಠಿಯ 49 ನೇ ಕಾರ್ಯಕ್ರಮ ಹಾಸ್ಯ ಸಂಜೆ ತುಮಕೂರಿನ ಎಸ್.ಐ.ಟಿ. ಬಡಾವಣೆಯ 28ನೇ ಕ್ರಾಸ್ನಲ್ಲಿರುವ ಹೆಚ್.ಎಸ್.ಆರ್. ಸಭಾಂಗಣದಲ್ಲಿ ನಡೆದು ಶ್ರೋತೃಗಳನ್ನು ನಗೆಗಡಲಿನಲ್ಲಿ ತೇಲಿಸಿತು.
ನಗು ನಗುತ್ತಾ ಜೀವನ ಸಾಗಿಸಿದರೆ ಆನಂದ, ಆರೋಗ್ಯ, ನೆಮ್ಮದಿ ವೃದ್ಧಿಸುತ್ತದೆ. ಆದ್ದರಿಂದ ಎಲ್ಲರೂ ನಗುತ್ತಾ ಬಾಳಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಸ್ಯಪಟುಗಳು ಪ್ರತಿಪಾದಿಸಿದರು.
ಜೀವನದಲ್ಲಿ ಹಾಸ್ಯ ಎಂಬ ಬಗ್ಗೆ ಮಾತನಾಡಿದ ನಿವೃತ್ತ ಆರೋಗ್ಯ ಇಲಾಖಾ ಅಧಿಕಾರಿ ಜಿ.ಕೆ. ಕುಲಕರ್ಣಿ ಅವರು ಆರೋಗ್ಯ ಇಲಾಖೆಯಲ್ಲಿನ ಕಾರ್ಯ ನಿರ್ವಹಣೆಯಲ್ಲಿ ನಡೆದ ಹಾಸ್ಯ ಸನ್ನಿವೇಶಗಳನ್ನು ಸ್ವಾರಸ್ಯಕರವಾಗಿ ವಿವರಿಸಿ ಶ್ರೋತೃಗಳಲ್ಲಿ ನಗೆಯುಕ್ಕಿಸಿದರು.
ಗಾಯಕಿ ವೀಣಾ ಚನ್ನಬಸಪ್ಪ ಅವರು ಕೆಲವು ಹಾಸ್ಯಗೀತೆಗಳನ್ನು ಮಧುರವಾಗಿ ಹಾಡಿದರಲ್ಲದೆ ಜನಪ್ರಿಯ ಹಾಡುಗಳನ್ನು ತಿರುಗಾ ಮುರುಗಾ ಹಾಡಿ ಶ್ರೋತೃಗಳನ್ನು ರಂಜಿಸಿದರು.
ಹಿರಿಯ ಹಾಸ್ಯಪಟು ಪ್ರೊ. ಕೆ.ಎಸ್. ವೆಂಕಟೇಶ್ ಅವರು ಟಿ.ಪಿ. ಕೈಲಾಸಂ ವಿರಚಿತ ಕೋಳಿಕೆರಂಗ ಮತ್ತಿತರ ಹಾಸ್ಯಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳನ್ನು ನಗೆಗಡಲಲ್ಲಿ ಮುಳುಗಿಸಿದರು.
ಮಿಮಿಕ್ರಿ ಈಶ್ವರಯ್ಯ ಅವರು ಕೋಳಿ, ಬೆಕ್ಕು, ನಾಯಿ, ಎಮ್ಮೆ ಮತ್ತಿತರ ಪ್ರಾಣಿಗಳ ಧ್ವನಿ ಅನುಕರಣೆ ಮಾಡಿ ಶ್ರೋತೃಗಳನ್ನು ರಂಜಿಸಿದರು.
ಕೊನೆಯಲ್ಲಿ ಮಿಮಿಕ್ರಿ ಈಶ್ವರಯ್ಯ ಅವರು ನೆರಳು ಬೆಳಕಿನ ಆಟವನ್ನು ಪ್ರದರ್ಶಿಸಿದರು. ನಾಯಿ, ಕೋಳಿ, ಆನೆ, ತಾತ-ಅಜ್ಜಿ ಮುಂತಾದ ಪ್ರಾಣಿಗಳ ಪ್ರತಿರೂಪಗಳನ್ನು ಸೃಷ್ಟಿಸಿ ಪ್ರೇಕ್ಷಕರನ್ನು ರಂಜಿಸಿದರು.ಕಾರ್ಯಕ್ರಮ ಆಯೋಜಕ ಎಚ್.ಎಸ್. ರಾಮಣ್ಣ ಅವರು ಸ್ವಾಗತಿಸಿ ನಗು ಜೀವನದಲ್ಲಿ ಉಲ್ಲಾಸ, ಉತ್ಸಾಹ ಮೂಡಿಸುತ್ತದೆ. ಆದ್ದರಿಂದ ಹಾಸ್ಯ ಸಾಹಿತ್ಯ ಓದಿ ಸದಾ ಹಸನ್ಮುಖಿಗಳಾಗಿರೋಣ ಎಂದು ತಿಳಿಸಿದರು.
ಆಹ್ವಾನಿತ ಗಣ್ಯರನ್ನು ರಶ್ಮಿ ರಾ.ಹೆಬ್ಬೂರು ಮತ್ತು ಎಚ್.ಎಸ್ .ರಾಮಣ್ಣ ಮತ್ತು ಎಚ್.ಎಸ್. ಸಾವಿತ್ರಿ ರಾಮಣ್ಣ ದಂಪತಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಲೇಖಕ ಕೆ.ಜಿ.ರಂಗಯ್ಯ, ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ, ನಿವೃತ್ತ ಅಧಿಕಾರಿಗಳಾದ ರಾಮಚಂದ್ರ, ಬೆ.ನ. ಶ್ರೀನಿವಾಸಮೂರ್ತಿ, ಡಿ. ತಿಮ್ಮಪ್ಪ, ರಾಬರ್ಟ್ ಬಾಷ್ ಕಂಪನಿಯ ಗ್ರೂಪ್ ಮೇನೇಜರ್ ದೀಪಕ್ ಆರ್.ಹೆಬ್ಬೂರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

