ಇಂದಿನಿಂದ ಬೂತ್ ಮಟ್ಟದ ನೋಂದಣಿ ಆರಂಭ
ಕ.ಪ್ರ.ವಾರ್ತೆ ಪಾವಗಡ ಆ. 5
ಪಕ್ಷ ಬಲಗೊಳಿಸುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ತಾಲೂಕಿನಾದ್ಯಂತ ಯುವಕರ ಬೂತ್ ಮಟ್ಟದ ನೋಂದಣಿ ಪ್ರಕ್ರಿಯೆ ಹಮ್ಮಿಕೊಳ್ಳುವುದಾಗಿ ತಾ.ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಎಂ.ಮೈಲಾರರೆಡ್ಡಿ ತಿಳಿಸಿದರು.
ತಾಲೂಕು ಕಾಂಗ್ರೆಸ್ ಯುವ ಘಟಕದ ವತಿಯಿಂದ ಸೋಮವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಯುವ ಕಾರ್ಯಕರ್ತರ ನೋಂದಣಿ ಪ್ರಕ್ರಿಯೆ ಕುರಿತು ಅವರು ಮಾತನಾಡುತ್ತಿದ್ದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಂಡ ಕನಸಿನಂತೆ ಯುವಕರಿಗೆ ಉತ್ತಮ ಸ್ಥಾನಮಾನಗಳು ದೊರಕಬೇಕು. ಪಕ್ಷ ಪ್ರಬಲಗೊಳ್ಳಲು ಹಾಗೂ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಯುವಕರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ತಾ.ಯುವಕರನ್ನು ಪಕ್ಷಕ್ಕೆ ನೋಂದಣಿ ಮಾಡಿಕೊಳ್ಳುವ ಸಲುವಾಗಿ ಎಐಸಿಸಿ ಆದೇಶದಂತೆ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಪಕ್ಷದ ನಿಯೋಜಿತ ಅಧಿಕಾರಿ (ಆರ್ಒ)ಆಂಧ್ರದ ವಿಜಯಕೃಷ್ಣ ಅವರು ಸೋಮವಾರ ಪಟ್ಟಣಕ್ಕೆ ಆಗಮಿಸಿದ್ದು, ಅವರ ಸಮ್ಮುಖದಲ್ಲಿ ಪಕ್ಷದ ಯುವ ಕಾರ್ಯಕರ್ತರ ನೋಂದಣಿ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ ಎಂದರು. ಯುವಕರಿಗೆ ಆದ್ಯತೆ ಸೇರಿದಂತೆ ತಾ.ಪಕ್ಷ ಪ್ರಬಲಗೊಳಿಸುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಯುವ ಘಟಕದ ವತಿಯಿಂದ ತಾಲೂಕಿನಾದ್ಯಂತ ಪ್ರವಾಸ ಹಮ್ಮಿಕೊಂಡು ಗ್ರಾಮಾಂತರ ಯುವಕರನ್ನು ಸಂಘಟಿಸುವ ಮೂಲಕ ಪಕ್ಷಕ್ಕೆ ನೋಂದಾಯಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಯುವಕರಿಗೆ ಆದ್ಯತೆ: ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ಗಾಂಧಿ ಕಂಡ ಕನಸು ಹಾಗೂ ಎಐಸಿಸಿ ಆದೇಶದ ಹಿನ್ನೆಲೆಯಲ್ಲಿ ಯುವಕರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಕಲ್ಪಿಸಲು ಉದ್ದೇಶಿಸಿದ್ದು ಯುವಕರು ಸಂಘಟಿತರಾಗಿ ಪಕ್ಷ ಪ್ರಬಲಗೊಳಿಸಿ ಪಕ್ಷದಲ್ಲಿ ಯುವಕರಿಗೆ ಉತ್ತಮ ಭವಿಷ್ಯವಿರುವುದಾಗಿ ಅವರು ತಿಳಿಸಿದರು.
ನಾಯಕತ್ವ ಗುಣ ಬೆಳೆಸಿಕೊಳ್ಳಿ: ತಾ.ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿ ಕಾಂಗ್ರೆಸ್ನಲ್ಲಿ ಯುವಕರಿಗೆ ಆದ್ಯತೆ ಇದ್ದು ಪಕ್ಷದಲ್ಲಿ ನೋಂದಣಿ ಪಡೆಯುವ ಮೂಲಕ ಯುವಕರು ನಾಯತ್ವ ಗುಣ ಬೆಳೆಸಿಕೊಳ್ಳಿ ಎಂದರು.
ಪಕ್ಷದ ಹಿರಿಯ ಮುಖಂಡ ಜಂಪಯ್ಯ ಮಾತನಾಡಿ ಜನಪರ ಸಮಸ್ಯೆ ನಿವಾರಣೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಮೂಲಕ ದೇಶದ ಭವಿಷ್ಯ ಕಾಪಾಡಬೇಕಿದೆ. ಯುವಕರು ಸಂಘಟಿತರಾಗಿ ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಸಜ್ಜಾಗುವಂತೆ ಯುವಕರಿಗೆ ಸಲಹೆ ನೀಡಿದರು.
ಯುವಕರ ನೋಂದಣಿ ಕಾರ್ಯಕ್ರಮದಲ್ಲಿ ಪಕ್ಷದ ನಿಯೋಜಿತ ಅಧಿಕಾರಿ ವಿಜಯಕೃಷ್ಣ, ಪಕ್ಷದ ತಾ.ಹಿರಿಯ ಮುಖಂಡರಾದ ದವಡಬೆಟ್ಟ ಡಿ.ವಿ.ಗೋಪಾಲ್, ಮದ್ದಿಬಂಡೆ ಎಂ.ಎಸ್. ವಿಶ್ವನಾಥ್, ಎಲ್ಐಸಿ ಗೋವಿಂದರಾಜು, ಪುರಸಭೆ ಸದಸ್ಯ ನಂಜುಂಡಸ್ವಾಮಿ, ಹನುಮಂತರೆಡ್ಡಿ, ಸ್ಟುಡಿಯೋ ಅಮರ್ ಸೇರಿದಂತೆ ಯುವ ಘಟಕದ ಎಲ್ಲ ಪದಾಧಿಕಾರಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

