ರೇಷ್ಮೆಗೂಡು ಕದಿಯಲು ಯತ್ನ: ಇಬ್ಬರ ಬಂಧನ
ಶಿಡ್ಲಘಟ್ಟ: ಆಂಧ್ರದಿಂದ ರೇಷ್ಮೆಗೂಡು ಪಟ್ಟಣದ ಗೂಡು ಮಾರುಕಟ್ಟೆಗೆ ಟೆಂಪೊದಲ್ಲಿ ಸಾಗಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಕದಿಯಲು ಪ್ರಯತ್ನಿಸಿ ಇಬ್ಬರು ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಬಾಬು (ಬಾಷ) ಲಾರಿ ಚಾಲಕ. ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯ ನಿವಾಸಿ. ಮುನೀರ್ ಪಾಷಾ ಆಟೋ ಚಾಲಕ. ಚಿಂತಾಮಣಿ ನಗರದ ಕೀತರ್ ನಗರದ ವಾಸಿ. ಕಿಟ್ಟಿ, ಮುನಾವರ್ ಚಿಂತಾಮಣಿಯ ನಿವಾಸಿಗಳಾಗಿದ್ದು, ಪರಾರಿಯಲ್ಲಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಲಾಗಿದೆ. ಗ್ರಾಮಾಂತರ ಠಾಣೆ ಪಿಎಸ್ಐ ಹನುಮಂತಪ್ಪ ತನಿಖೆ ನಡೆಸಿದ್ದರು. ಆಂಧ್ರದ ನಾಯನಪಲ್ಲಿಯ ವೀರಭದ್ರ ಎನ್ನುವವರು ಬೆಳೆದ ಗೂಡು ಟೆಂಪೋದಲ್ಲಿ ಶಿಡ್ಲಘಟ್ಟದ ಗೊಡಿನ ಮಾರುಕಟ್ಟೆಗೆ ಸಾಗಿಸುತ್ತಿದ್ದಾಗ ಚಿಂತಾಮಣಿ- ಶಿಡ್ಲಘಟ್ಟದ ದಾರಿ ಮಧ್ಯದಲ್ಲಿ ರಾತ್ತಿ 9.30ರಲ್ಲಿ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಟೆಂಪೋಗೆ ಹತ್ತಿ ಗೂಡು ಕದಿಯಲು ಪ್ರಯತ್ನಿಸಿದ್ದ. ಆಗ ಎಚ್ಚೆತ್ತ ಟೆಂಪೋ ಚಾಲಕ ಗಾಡಿಯನ್ನು ನಿಲ್ಲಿಸಿದಾಗ ಆರೋಪಿ ಹಿಂದೆ ಬರುತ್ತಿದ್ದ ಬೈಕಿನಲ್ಲಿ ಪರಾರಿಯಾಗಿದ್ದರು.
ವಿಜಯಾ ಬ್ಯಾಂಕ್ ಸೇವೆ ಸ್ಥಗಿತ: ಜನರ ಪರದಾಟ
ಟೇಕಲ್: ಟೇಕಲ್ ಬಿಎಸ್ಎನ್ಎಲ್ ಹಾಗೂ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಟೇಕಲ್ ವಿಜಯಾ ಬ್ಯಾಂಕ್ ಸುಮಾರು 3 ದಿನಗಳಿಂದ ಸ್ಥಗಿತಗೊಂಡಿದೆ. ಬಹುತೇಕ ಗ್ರಾಮೀಣ ಜನತೆಗೆ ತೊಂದರೆಯಾಗಿದ್ದು, ಜನತೆ ಪರದಾಡುವ ಸ್ಥಿತಿ ಉಂಟಾಗಿದೆ. ಶುಕ್ರವಾರದಿಂದ ಬಿಎಸ್ಎನ್ಎಲ್ ನೆಟ್ವರ್ಕ್ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ. ದೂರವಾಣಿ ಕೇಂದ್ರಕ್ಕೆ ಪೋನಾಯಿಸಿದರೆ ಉತ್ತರ ಕೊಡುವವರೆ ಇಲ್ಲವಾಗಿದೆ. ಕೊನೆಗೆ ಟೇಕಲ್ನಲ್ಲಿ ಇಲಾಖೆ ಅಧಿಕಾರಿ ಯಾರು ಎಂಬುದೇ ಜನತೆಗೆ ಗೊತ್ತಿಲ್ಲ. ಇರುವ ಸಿಬ್ಬಂದಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದು, ಏನೇ ತೊಂದರೆ ಬಂದರೂ ಮಾಲೂರಿನ ದೂರವಾಣಿ ಕಚೇರಿಯನ್ನೇ ಸಂಪರ್ಕಿಸಬೇಕು. ದಿನವಹಿ ಬ್ಯಾಂಕಿನಲ್ಲಿ ಸಾವಿರಾರು ರು. ವಹಿವಾಟು ನಡೆಯುತ್ತಿದೆ. ಮೊದಲೇ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆ ಸಾಲುಗಟ್ಟಲೆ ನಿಂತು ಬ್ಯಾಂಕಿನಲ್ಲಿ ಹಣ ಪಾವತಿಸಬೇಕು. ಹೊಸ ಬ್ಯಾಂಕ್ ಬುಕ್ ತೆಗೆಯಬೇಕೆಂದರೆ ವಿಳಂಬವಾಗುತ್ತದೆ. ಒಮ್ಮೆ ಬ್ಯಾಂಕಿನೊಳಗೆ ಹೋದರೆ ನಾವು ಹೊರ ಬರಬೇಕಾದರೆ ದಿನದ 24 ಗಂಟೆ ಕಾಲ ಬೇಕಾಗುತ್ತದೆ ಈ ಬಗ್ಗೆ ಏನೂ ಅರಿಯದ ಗ್ರಾಮೀಣ ಜನತೆ ಪಡುವ ಪಾಡು ಹೇಳತೀರದು. ಬ್ಯಾಂಕಿನಲ್ಲಿ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಾ ಹೋದರೆ ಕೊನೆಗೆ ಬೆಸ್ಕಾಂ ಇಲಾಖೆಯಿಂದ ಕರೆಂಟ್ ಕಟ್ ರಾಜ್ಯದಲ್ಲಿ ಮೊದಲ ಬಾರಿಗೆ ದಿನದ 24 ಗಂಟೆಗಳ ನಿರಂತರ ವಿದ್ಯುತ್ ಇಲ್ಲಿ ಪ್ರಾರಂಭಗೊಂಡಿದೆ. ಇತ್ತಿಚೀನ ದಿನದಲ್ಲಿ ಅದು ನಿಂತ ವಿದ್ಯುತ್ ಆಗಿದೆ. ಇದರಿಂದ ಬ್ಯಾಂಕಿನಲ್ಲಿರುವ ಬ್ಯಾಟರಿಗಳು 5 ರಿಂದ 6 ತಾಸು ಮಾತ್ರ ಕೆಲಸ ನಿರ್ವಹಿಸುತ್ತದೆ. ಇನ್ನಾದರೂ ಈ ಬಗ್ಗೆ ಬಿಎಸ್ಎನ್ಎಲ್ ಹಾಗೂ ಬೆಸ್ಕಾಂ ಇಲಾಖೆ ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಜನತೆ ಮನವಿ ಮಾಡಿದ್ದಾರೆ.
ಹೃದಯ ಶಸ್ತ್ರಚಿಕಿತ್ಸಾ ಶಿಬಿರ
ಶಿಡ್ಲಘಟ್ಟ: ತಾಲೂಕಿನ ಬೆಂಗಳೂರಿನ ವಿಮ್ಸ್ ಆಸ್ಪತ್ರೆ ವತಿಯಿಂದ ವಾಜಪೇಯಿ ಆರ್ಯೋಗ್ಯಶ್ರೀ ಯೋಜನೆಯಡಿ ಉಚಿತ ಹೃದಯ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಉಚಿತ ಹೃದಯ ಶಸ್ತ್ರಚಿಕಿತ್ಸೆ ವಾಜಪೇಯಿ ಆರ್ಯೋಗ್ಯಶ್ರೀ ಯೋಜನೆಯಡಿ ಆಯೋಜಿಸಿದ್ದು ಬೆಳ್ಳಿಗೆ 9 ಗಂಟೆಯಿಂದ ಪ್ರಾರಂಭವಾದ ಶಿಬಿರ ಸಂಜೆ 4 ರವರೆಗೆ ನಡೆಯಿತು. ಆಯ್ಕೆಯಾದ ರೋಗಿಗಳಿಗೆ ಅದರಲ್ಲೂ ವಿಶೇಷವಾಗಿ ಬಿಪಿಎಲ್, ಅಕ್ಷಯ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು ತಿಳಿಸಿದರು. ಶಿಬಿರದಲ್ಲಿ ಹೃದಯ ರೋಗಕ್ಕೆ ಸಂಬಂಧಿಸಿದಂತೆ ಇಸಿಜಿ, ಸ್ಕ್ಯಾನಿಂಗ್ ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ಮಾಡಲಾಯಿತು. ವೈದ್ಯರಾದ ಡಾ.ನಾಗರಾಜ್, ಡಾ.ಸಾರಾ, ವಿ.ಜಿ.ಹರೀಶ್, ಟಿ.ಹರೀಶ್ ಹಾಗೂ ಆರ್ಯೋಗ್ಯ ಮಿತ್ರ ಸಿಬ್ಬಂದಿಯಾದ ರಾಜಣ್ಣ, ಕಾಂತರಾಜ್ ಮತ್ತಿರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

