ತುಮಕೂರು

ಶಾಲಾ ಕಟ್ಟಡ ಶಿಥಿಲಾವಸ್ಥೆಗೆ, ಸಾರ್ವಜನಿಕರ ಆತಂಕ

Published On :

ಕ.ಪ್ರ.ವಾರ್ತೆ   ಮಧುಗಿರಿ   ಆ. 5
ಮಧುಗಿರಿ ಕಸಬಾ ಬಿಜವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಂತಹ ಶಾಲೆ  ಈಚೆಗೆ ತುಮಕೂರು ನಿರ್ಮಿತಿ ಕೇಂದ್ರದವರು ನಿರ್ಮಿಸಿರುವ ಶಾಲಾ ಕೊಠಡಿ ಮಾತ್ರ ಕಳಪೆ ಕಾಮಗಾರಿಯಿಂದಾಗಿ ಶಿಥಿಲಾವಸ್ಥೆ ತಲುಪಿರುವುದು ದುರದೃಷ್ಟಕರ ಸಂಗತಿ.
1902ರಲ್ಲಿ ಸ್ಥಾಪಿಸಲ್ಪಟ್ಟ ಈ ಸರ್ಕಾರಿ ಶಾಲೆ ಗ್ರಾಮಸ್ಥರ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಕಾಳಜಿಯಿಂದಾಗಿ ಉತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು,ಇಲ್ಲಿನ ಶಿಕ್ಷಕರು ಕೂಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಚನ್ನಾಗಿ ಪಾಠ ಪ್ರವಚನ ಬೋಧಿಸುವ ಮೂಲಕ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿದ್ದಾರೆ. ಇಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 105 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದಕ್ಕಾಗಿ ಒಟ್ಟು 8 ಕೊಠಡಿಗಳಿವೆ.ಈ ಪೈಕಿ 5 ಹಳೆಯ ಕೊಠಡಿಗಳಿವೆ. ಹೆಂಚು ತೆಗೆದು ಮೇಲ್ಚಾವಣಿಗೆ ಆರ್ಸಿಸಿ ಹಾಕಿಸಲಾಗಿದೆ.
ಸರ್ವ ಶಿಕ್ಷಣ ಅಭಿಯಾನದಡಿ ಶಾಲಾಭಿವೃದ್ಧಿ ಸಮಿತಿಯವರು 2010-11ನೇ ಸಾಲಿನಲ್ಲಿ 3.70ಲಕ್ಷ ರು.ವೆಚ್ಚದಲ್ಲಿ ಮುಖ್ಯ ಶಿಕ್ಷಕರ  ಕೊಠಡಿ, ಇದಕ್ಕೂ ಮೊದಲು 1.50ಲಕ್ಷ ರು.ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ, 60 ಸಾವಿರ ರು.ವೆಚ್ಚದಲ್ಲಿ ಅಕ್ಷರ ದಾಸೋಹದ ಅಡುಗೆ ಕೋಣೆ ನಿರ್ಮಿಸಿದ್ದಾರೆ.
ಈ ಎಲ್ಲ ಕಟ್ಟಡ ಕಾಮಗಾರಿಗಳು ಸಮರ್ಪಕವಾಗಿದ್ದು, ಕೊಠಡಿಗಳು ವ್ಯವಸ್ಥಿತವಾಗಿವೆ. ಆದರೆ 2004-05ರಲ್ಲಿ ತುಮಕೂರಿನ ನಿರ್ಮಿತಿ ಕೇಂದ್ರದವರು 2ಲಕ್ಷ ರು.ವೆಚ್ಚದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ನಿರ್ಮಿಸಿದ್ದು ಇದು ಕಳಪೆ ಕಾಮಗಾರಿಯಿಂದ ಕೂಡಿ ಶಿಥಿಲಾವಸ್ಥೆ ತಲುಪಿ ಮಳೆ ಬಂದರೆ ನೀರು ಕೊಠಡಿಯಲ್ಲೇ ನಿಲ್ಲುತ್ತವೆ. ಕಟ್ಟಡದ ಗೋಡೆ ಮತ್ತು ಬೀಮ್ ಬಿರುಕು ಬಿಟ್ಟಿದೆ. ಕಟ್ಟಡದ ಸಜ್ಜೆಗೆ ಆಧಾರವಾಗಿ ಯಾವುದೇ ರೀತಿಯ ಬೀಮ್ ಇಲ್ಲದ ಕಾರಣ ಮುಂಭಾಗದಲ್ಲಿ ಬೀಳುವ ಹಂತ ತಲುಪಿದ್ದನ್ನು ಕಂಡ ಶಾಲಾಭಿವೃದ್ಧಿ ಸಮಿತಿಯವರೇ ಸಜ್ಜೆಗೆ ಆಧಾರವಾಗಿ ಕಂಭ ನಿರ್ಮಿಸಿ ರಕ್ಷಿಸಿಕೊಂಡಿದ್ದಾರೆ. ಬಿರುಕು ಬಿಟ್ಟಿರುವ ಗೋಡೆ ಮೇಲೆ ಮಳೆಗಾಲದಲ್ಲಿ ನೀರು  ಇಳಿದು ಮಕ್ಕಳು ಕೂರಲು ಆಗುವುದಿಲ್ಲ ಯಾವಾಗ ಬೇಕಾದರು ಅಪಾಯ ಸಂಭವಿಸಬಹುದು ಎಂಬುದು ಸಾರ್ವಜನಿಕರ ಆತಂಕವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.