ತುಮಕೂರು

ಸರಣಿ ಕಳ್ಳತನ: ಚಿನ್ನ, ಬೆಳ್ಳಿ ಒಡವೆ, ಮೊಬೈಲ್ ಸೆಟ್ಗಳ ಕಳವು

Published On :

ಶಿರಾ: ಪಟ್ಟಣದ ರಾಘವೇಂದ್ರ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಚಿನ್ನದ ಅಂಗಡಿ, ಮೊಬೈಲ್ ಶಾಪ್ ಸೇರಿದಂತೆ 3 ಕ್ಕೂ ಹೆಚ್ಚು ಅಗಡಿಗಳ ರೋಲಿಂಗ್ ಶಟರ್ಗಳನ್ನು ಕಬ್ಬಿಣದ ರಾಡುಗಳಿಂದ ಮೀಟಿ ಒಡೆದು ಈ ಅಂಗಡಿಗಳಿಂದ ಅಪಾರ ಮೌಲ್ಯದ ಚಿನ್ನ, ಬೆಳ್ಳಿ ವಡವೆ ಮತ್ತು ಮೊಬೈಲ್ ಸೆಟ್ಗಳು ಸೇರಿದಂತೆ ಹಲವು ವಸ್ತುಗಳನ್ನು ದೋಚಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಈ ಸರಣಿ ಕಳ್ಳತನಕ್ಕೆ ಪಟ್ಟಣದ ವ್ಯವಹಾರಸ್ಥರು ಭಯಭೀತರಾಗಿದ್ದು ಈ ರಸ್ತೆಯಲ್ಲಿ ರಾತ್ರಿ ಹಗಲು  ಎನ್ನದೆ ಜನ ತಿರುಗಾಡುವ ಸ್ಥಳವಾಗಿದೆ. ಇದೇ ಸ್ಥಳದಲ್ಲಿ ಕಳ್ಳತನ ಮಾಡಿರುವ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದು, ಈ ರಸ್ತೆಯ ಸಮೀಪದಲ್ಲೆ ಸರ್ಕಾರಿ ಆಸ್ಪತ್ರೆ ಹಾಗೂ ಕೂಗಳತೆಯ ದೂರದಲ್ಲಿ ಖಾಸಗಿ ಬಸ್ ನಿಲ್ದಾಣ, ಲಾಡ್ಜ್ಗಳು ಇದ್ದು ಇಂತಹ ಸ್ಥಳದಲ್ಲಿ ಕಳ್ಳತನ ಆಗಿರುವುದಕ್ಕೆ ಶಿರಾ ಪಟ್ಟಣದಲ್ಲಿ ಇನ್ಯಾವ ಸ್ಥಳ ಸುರಕ್ಷಿತ ಎಂಬಂತಾಗಿದೆ.
ಮೊದಲಿಗೆ ಕಳ್ಳರು ಮಲ್ಲಿಕಾರ್ಜುನಾಚಾರ್ ಎಂಬುವವರ ಚಿನ್ನದ ಅಂಗಡಿ ಬಾಗಿಲನ್ನು ಒಡೆದು ತೆಗೆದು ಅಲ್ಲಿಂದ ಚಿನ್ನದ ಓಲೆ ಮತ್ತು ರಿಂಗ್ ಸೇರಿದಂತೆ ಬೆಳ್ಳಿಯ ಒಡವೆಗಳನ್ನು ದೋಚಿದ್ದಾರೆ. ನಂತರ ಪ್ರದೀಪ್ ಸಿಂಗ್ ಎಂಬುವರ ಮೊಬೈಲ್ ಅಂಗಡಿಯ ಬಾಗಿಲು ಒಡೆದು ಸಾವಿರಾರು ರು. ಮೌಲ್ಯದ ಹೆಸರಾಂತ ಕಂಪನಿಗಳ ಮೊಬೈಲ್ಗಳನ್ನು ಮತ್ತು ಅದರ ಬಿಡಿ ಭಾಗಗಳ ಜೊತೆಗೆ ಕರೆನ್ಸಿ ಕಾರ್ಡ್ಗಳನ್ನು ದೋಚಿದ್ದಾರೆ.   ನಂತರ ಪ್ರದೀಪ್ ಸಿಂಗ್ ಸೇನಿ ಎಂಬುವರ ಮೊಬೈಲ್ ಅಂಗಡಿ ಬಾಗಿಲು ಕಬ್ಬಿಣದ ರಾಡ್ನಿಂದ ಒಡೆದು ತೆಗೆದು ಅಲ್ಲಿಂದಲೂ ಬೆಲೆಬಾಳುವ ಮೊಬೈಲ್ ಸೆಟ್ಗಳು, ಐಪ್ಯಾಡ್ಗಳು ಹಾಗೂ ಬಿಡಿ ಭಾಗಗಳನ್ನು ದೋಚಿದ್ದಾರೆ.
ಇದೇ ರೀತಿ ಮತ್ತೆ ಹಲವು ಅಂಗಡಿಗಳ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಕೇಂದ್ರದಿಂದ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ, ನಗರ ಠಾಣಾಧಿಕಾರಿ ಪ್ರಹ್ಲಾದ್, ಪಿ.ಎಸಿ.ಐ. ರಾಧಾಕೃಷ್ಣ, ಅವರು ಭೇಟಿ ನೀಡಿ ಪರಿಶೀಲಿಸಿ ನೆರೆದಿದ್ದ ಅಪಾರ ಜನತೆಯ ಮುಂದೆ ಕಳ್ಳರನ್ನು ಶೀಘ್ರ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.