ಶ್ರೀಬತ್ತ ಬೇಸಾಯ ಅಳವಡಿಸಿ: ಗಂಗಾಧರ ರೈ
ತುಮಕೂರು: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 30 ರಷ್ಟು ಜನರು ಮಾತ್ರ ಆಹಾರೋತ್ಪಾದನೆಯಲ್ಲಿ ತೊಡಗಿದ್ದು ಏರುತ್ತಿರುವ ಜನಸಂಖ್ಯೆಗೆ ಆಹಾರದ ಕೊರತೆ ಇದೆ. ಆಹಾರ ಬತ್ತ, ಕನಿಷ್ಠ ನೀರು, ಬೀಜ, ಕೂಲಿಯಾಳುಗಳನ್ನು ಉಪಯೋಗಿಸಿ ಹೆಚ್ಚಿನ ಪ್ರಮಾಣದ ಇಳುವರಿ ಪಡೆಯುವ ಪದ್ಧತಿ ಶ್ರೀ ಮಾದರಿಯಲ್ಲಿ ರೈತರು ಬತ್ತದ ಕೃಷಿಯನ್ನು ಅಳವಡಿಸಿಕೊಳ್ಳಬಹುದೆಂದು ಜಿಲ್ಲಾ ನಿರ್ದೇಶಕ ಪಿ. ಗಂಗಾಧರ ರೈ ಸಲಹೆ ನೀಡಿದರು. ಅವರು ಶ್ರೀ ಪದ್ಧತಿ ಬತ್ತದ ಪ್ರಾತ್ಯಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು.
ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ಅವರು ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ 150 ಕುಟುಂಬಗಳು ಪ್ರಸ್ತುತ 300 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿಯಾದ ಶ್ರೀ ಪದ್ಧತಿಯನ್ನು ಅಳವಡಿಕೆ ಮಾಡುತ್ತಿದ್ದು, ಇವರಿಗೆ ತರಬೇತಿ, ಮಾಹಿತಿ, ಯಂತ್ರೋಪಕರಣ ಒದಗಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಲು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು, ಬತ್ತದ ಬೀಜ ಆಯ್ಕೆ, ಸಸಿಮಡಿ ತಯಾರಿ, ಭತ್ತದ ನಾಟಿ ಕ್ರಮ, ಕಳೆನಿಯಂತ್ರಣ, ನೀರು ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಹೈನುಗಾರಿಕಾ ಮೇಲ್ವಿಚಾರಕ ಮಂಜುನಾಥ್, ವಲಯದ ಮೇಲ್ವಿಚಾರಕರಾದ ಜಯರಾಮ್ ಇತರರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

