ತುಮಕೂರು

ಪೊಲೀಸ್ ಠಾಣೆಯ ಆವರಣದಲ್ಲೇ..ಹೊಡೆದಾಟಕ್ಕೆ ಮುಂದು, ಲಾಠಿ ಪ್ರಹಾರ

Published On :

ಕುಣಿಗಲ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕೋಮಿನ ಎರಡು ಗುಂಪು ಠಾಣಾವರಣದಲ್ಲೆ ಹೊಡೆದಾಟಕ್ಕೆ ಬಿದ್ದು, ಉದ್ವಿಘ್ನ ಸ್ಥಿತಿಗೆ ಕಾರಣರಾದ ಹಿನ್ನೆಲೆಯಲ್ಲಿ, ಪೊಲೀಸರು ಸಕಾಲಿಕ ಲಘು ಲಾಠಿ ಪ್ರಹಾರದಿಂದ ಎರಡು ಗುಂಪಿನ ನಡವೆ ಘರ್ಷಣೆ ತಪ್ಪಿದ ಘಟನೆ ಶನಿವಾರ ಕುಣಿಗಲ್ ಪೊಲೀಸ್ ಠಾಣಾವರಣದಲ್ಲಿ ನಡೆಯಿತು.
ತಾಲೂಕಿನ ಕಸಬಾಹೋಬಳಿಯ ಕೊತ್ತಿಪುರ ಗ್ರಾಮದಲ್ಲಿನ ಮುಸ್ಲಿಮರ ಸ್ಮಶಾನಕ್ಕೆ ಹೊಂದಿಕೊಂಡಂತೆ ಇರುವ ಎರಡುವರೆ ಎಕರೆ ತೋಟದ ಭೂವಿವಾದಕ್ಕೆ ಸಂಬಂಧಪಟ್ಟಂತೆ ಗ್ರಾಮದ ಹಬೀಬ್ಸಾಬ್ ಮತ್ತು ದಾದಾಪೀರ್ ಕುಟುಂಬಗಳ ನಡುವೆ ಕಳೆದ ಹಲವು ವರ್ಷಗಳಿಂದ ಬಗೆಹರಿಯದ ಕಗ್ಗಾಂಟಾಗಿ ನ್ಯಾಯಾಲಯ ಮೆಟ್ಟಿಲೇರಿದೆ. ಶನಿವಾರ ಬೆಳಗ್ಗೆ ಸದರಿ ಜಮೀನಿಗೆ ಹೊಂದುಕೊಂಡಿದ್ದ ಸ್ಮಶಾನ ಪ್ರದೇಶದಲ್ಲಿನ ಗುಂಡಿ ಮುಚ್ಚಲು, ಸ್ಥಳೀಯ ಸ್ಮಶಾನ ಅಭಿವೃದ್ಧಿ ಸಮಿತಿ ಮುಂದಾದಾಗ ತೋಟದ ಗಡಿಯಲ್ಲಿದ್ದ ಹೊಂಗೆಮರದ ದೊಡ್ಡಕೊಂಬೆ ಮುರಿದು ಬಿದ್ದಿತು. ಈ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಗೊಂದಲದ ವಾತವರಣ ನಿರ್ಮಾಣವಾಯಿತು. ಈ ಮಧ್ಯೆ ದಾದಾಪೀರ್ ಕಡೆಯವರು ಹಬೀಬ್ಸಾಬ್ ಕಡೆಯವರ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ.
ಎರಡು ಕಡೆಯವರು ದೂರುಗಳನ್ನು ಹಿಡಿದು ಕುಣಿಗಲ್ ಠಾಣೆಯ ಆವರಣದಲ್ಲಿ ಜಮಾವಣೆಗೊಂಡರು. ಪರಸ್ಪರ ವಾಗ್ವಾದ ನಡೆಸಿ ಘರ್ಷಣೆ ನಡೆಸುವ ಹಂತಕ್ಕೆ ಮುಂದಾದರು. ಪಿಎಸೈ ಗುರುಪ್ರಸಾದ್, ಎರಡೂ ಬಣದವರ ಮೇಲೆ ಲಘುಲಾಠಿ ಪ್ರಹಾರ ನಡೆಸಿ ಚದುರಿಸಿದರು. ಠಾಣಾವರಣದಲ್ಲಿ ಚದುರಿದ ಗುಂಪು ಪುನಃ ಸಮೀಪದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಮಾವಣೆಗೊಂಡು ಬಡಿದಾಟಕ್ಕೆ ಇಳಿದರು. ಆಸ್ಪತ್ರೆಯ ಸಿಬ್ಬಂದಿ ದೂರವಾಣಿ ಮೂಲಕ ವಿಷಯ ತಿಳಿಸಿದ ಮೇರೆಗೆ, ಆಸ್ಪತ್ರೆ ಆವರಣಕ್ಕೆ ಆಗಮಿಸಿದ ಪೊಲೀಸರು, ಇಲ್ಲಿಯೂ ಲಾಠಿ ರುಚಿ ತೋರಿಸಿ ಗುಂಪನ್ನು ಚದುರಿಸಿ, ಬಿಎಂ ರಸ್ತೆ, ಕೆನರಾಬ್ಯಾಂಕ್ ಸಮೀಪ, ಹುಚ್ಚಮಾಸ್ತಿಗೌಡ ಸರ್ಕಲ್ನಲ್ಲಿದ್ದ ಎರಡೂ ಬಣದ ಆರು ಮಂದಿಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದರಿಂದ ಎರಡೂ ಬಣದ ನಡುವೆ ಘರ್ಷಣೆ ತಪ್ಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.