ತುಮಕೂರು

'ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ'

Published On :

ಕ.ಪ್ರ.ವಾರ್ತೆ     ತಿಪಟೂರು     ಆ. 12
ವಿಶ್ವಕರ್ಮ ಸಮಾಜವು ಒಗ್ಗಟ್ಟಿನಿಂದ ಕೂಡಿದಾಗ ಮಾತ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೋ.ಮು. ಭಾಸ್ಕರಾಚಾರ್ ಅಭಿಪ್ರಾಯಪಟ್ಟರು.
 ತಾಲೂಕು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜವು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ತುಂಬಾ ಹಿಂದುಳಿದಿರುವುದು ಶೋಚನೀಯ ಸಂಗತಿ. ಈ ಸಮಾಜವು ವಿಶ್ವಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಆದರ್ಶ ಬದುಕು ಸಾಗಿಸುವ ಸಮಾಜವಾಗಿದ್ದು, ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸುವತ್ತ ಹೆಜ್ಜೆ ಹಾಕಬೇಕಾಗಿದೆ. ಆದ್ದರಿಂದ ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಬೇಕೆಂದ ಅವರು ವಿಶ್ವಕರ್ಮ ಸಂಘದ ಬೆಳವಣಿಗೆಯನ್ನು ಶ್ಲಾಘಿಸಿದರು.
ನಿವೃತ್ತ ಪ್ರಾಂಶುಪಾಲರಾದ ಕೆ.ಉಪೇಂದ್ರ ವಿದ್ಯಾರ್ಥಿಗಳಿಗೆ ದಾನವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ತಮ್ಮ ಮಕ್ಕಳಿಗೆ ಇಂದಿನಿಂದಲೆ ಉತ್ತಮವಾಗಿ ಭವಿಷ್ಯವನ್ನು ರೂಪಿಸಿದರೆ ಮುಂದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
 ಕಸಾಪ ತಾ. ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ವಿಶ್ವಕರ್ಮ ಸಮಾಜದ ಕೊಡುಗೆ ವಿಶ್ವಕ್ಕೆ ಹೇಗೆ ಸಹಾಯಕವಾಗಿದ ಎಂಬುದರ ಬಗ್ಗೆ ವಿವರಿಸಿದರು.  ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಲ್ಲಪ್ಪಾಚಾರ್, ಶೋಷಿತ ಜನಾಂಗಗಳಿಗೆ ಶಿಕ್ಷಣಮೊಂದೆ ಬಿಡುಗಡೆ ಮಾರ್ಗ, ಶ್ರಮಿಕ ಮತ್ತು ಕೌಶಲ್ಯ ವೃತ್ತಿ ಮಾರ್ಗಗಳು ತಮ್ಮ ಜ್ಞಾನವನ್ನು ಶಿಕ್ಷಣದ ಬೆಳಕಿನಲ್ಲಿ ವಿಸ್ತರಿಸಿಕೊಳ್ಳಬೇಕೆಂದು ತಿಳಿಸಿದರು. ಸಂಸ್ಕೃತ ವಿದ್ವಾಂಸರಾದ ಮೃತ್ಯುಂಜಯಚಾರ್ಮಾತನಾಡಿದರು.
ಸಮಾರಂಭದಲ್ಲಿ  ಸಂಘದ ಮಂಜುನಾಥ್, ಜಿ.ಸಿ. ಕುಮಾರ್ ಮತ್ತಿತರರಿದ್ದರು.  ಶುಭ ಪ್ರಾರ್ಥಿಸಿ, ಬಿ.ಸಿ. ಮೂರ್ತಿ ಸ್ವಾಗತಿಸಿ, ದಯಾನಂದ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.