ತುಮಕೂರು

ಮಕ್ಕಳ ಸಾಹಿತ್ಯ ಹೆಚ್ಚಲಿ: ಸುನಂದಮ್ಮ

Published On :

ತುಮಕೂರು: ಮಕ್ಕಳಿಗಾಗಿ ಇಂದು ಬರೆಯುವ ಲೇಖಕರ ಸಂಖ್ಯೆ ಅತ್ಯಂತ ವಿರಳವಾಗಿದ್ದು ಮಕ್ಕಳಿಗೋಸ್ಕರ ಚೆಂದದ ಪ್ರಾಸವಿರುವ, ಮಕ್ಕಳು ಹಾಡುತ್ತಾ ನಲಿದಾಡುವ ವಿಫುಲ ಸಾಹಿತ್ಯ ರಚನೆಯಾಗಬೇಕು ಎಂದು ಹಿರಿಯ ಲೇಖಕಿ ಹಾಗೂ ನಿವೃತ್ತ ಉಪನ್ಯಾಸಕಿ ಸಿ.ಎಲ್.ಸುನಂದಮ್ಮ ಹೇಳಿದರು.
ಅವರು ಮಹಿಳಾ ಸಾಹಿತ್ಯ ಕೂಟ ಹಾಗೂ ಕವಿತಾ ಕೃಷ್ಣ ಸಾಹಿತ್ಯ ಮಂದಿರ ಏರ್ಪಡಿಸಿದ್ದ ಚಿಣ್ಣರ ಚಿಲುಮೆ ಮಕ್ಕಳ ಸ್ವರಚಿತ ಕವನ ವಾಚನ ಸ್ಪರ್ಧೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೊಳುವಾರು ಮಹಮದ್ ಅವರು ಸಂಪಾದಿಸಿದ್ದ ಮಕ್ಕಳ ಆಯ್ದ ನೂರಾರು ಪದ್ಯಗಳಲ್ಲಿ ಜಿ.ಪಿ.ರಾಜರತ್ನಂ, ಪಳಕಳ ಸೀತಾರಾಮಭಟ್ಟ, ಸಿದ್ದಯ್ಯ ಪುರಾಣಿಕ, ಎಂ.ವಿ.ಸೀತಾರಾಮಯ್ಯ, ಕುವೆಂಪು, ದಿನಕರ ದೇಸಾಯಿ ಹಾಗೂ ಇತರೆ ದಿಗ್ಗಜರ ಸುಂದರ ಪದ್ಯಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಪ್ರಕಟಿಸಿ ಮಕ್ಕಳಿಗೆ ಹಂಚಿದರು.
ಹಿರಿಯ ಲೇಖಕಿಯನ್ನು ಅಭಿನಂದಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಹೇಮಕೃಷ್ಣ, ಮಕ್ಕಳು ನಾನಾ ದೌರ್ಜನ್ಯ, ಶೋಷಣೆಗೆ ಒಳಗಾಗಿ ಮಾನಸಿಕ ಹಾಗೂ ದೈಹಿಕ ಕಿರಿಕಿರಿಗೆ ಒಳಗಾಗುತ್ತಿರುವುದು ವಿಷಾದನೀಯ. ಮಕ್ಕಳನ್ನು ಪ್ರೀತಿ ಹಾಗೂ ಮಾನವೀಯತೆಯಿಂದ ನಡೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸಿ.ಎನ್. ಸುಗುಣಾದೇವಿ, ಮಕ್ಕಳಿಗಾಗಿ ರಚನೆಯಾದ ಸರಳ ಒಗಟುಗಳು ಹಾಗೂ ಸುಂದರ ಪ್ರಾಸಗಳನ್ನು ಹೇಳುವುದರಿಂದ ಅವರಲ್ಲಿ ಭಾಷೆಯ ಅಲ್ಪಪ್ರಾಣ, ಮಹಾಪ್ರಾಣಗಳ ಸ್ಪಷ್ಟ ಉಚ್ಛರಣೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಮಲಾ ಮಾತನಾಡಿ, ಮಕ್ಕಳು ಭವಿಷ್ಯದ ವಾರಸುದಾರರು. ಆದರೆ ಕೇವಲ ಹಣ ಗಳಿಕೆಯೇ ಶಿಕ್ಷಣದ ಗುರಿ ಮಾಡಿಕೊಂಡಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ವಾರಸುದಾರಿಕೆಯನ್ನು ಎಷ್ಟರ ಮಟ್ಟಿಗೆ ಮಕ್ಕಳಲ್ಲಿ ಸೃಜಿಸುತ್ತಿದ್ದೇವೆ ಎಂಬುದನ್ನು ನಾವೆಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ತಾ.ಲ. ರಂಗನಾಥಶೆಟ್ಟಿ, ಸೀಗೇಹಳ್ಳಿ ನಾರಾಯಣ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಕವಿತಾಕೃಷ್ಣ ಎಲ್ಲ ಮಕ್ಕಳನ್ನು ಅಭಿನಂದಿಸಿದರು. 25ಕ್ಕೂ ಹೆಚ್ಚು ಮಕ್ಕಳು ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರೌಢ ಹಾಗೂ ಪ್ರಾಥಮಿಕ ಎರಡೂ ವಿಭಾಗಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬ್ಯಾಡನೂರು ನಾಗಭೂಷಣ ಮತ್ತು ಎ.ವಿ.ಗಣೇಶ ತೀರ್ಪುಗಾರರಾಗಿದ್ದರು. ಪದ್ಮಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಮಕೂರು ಭಾರ್ಗವಿ ಸ್ವಾಗತಿಸಿದರು. ಉಷಾ ವಂದಿಸಿದರು. ಪೂಜ ಪ್ರಾರ್ಥಿಸಿದರು. ಅಬ್ಬಿನಹೊಳೆ ಸುರೇಶ್ ನಿರೂಪಿಸಿದರು. ಜಯಲಕ್ಷ್ಮೀ ಗುಪ್ತ, ಜಯರಾಂ, ವಾಮನರಾವ್, ಮಂಜುಳಾದೇವಿ, ಸುಶೀಲ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.