'ಅರ್ಥವಿಲ್ಲದ ಓದು ಅನರ್ಥಕ್ಕೆ ಮೂಲ'
ಚಿಕ್ಕನಾಯಕನಹಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲತೆ ಬೆಳೆಸಿಕೊಳ್ಳಲು ದೈಹಿಕ ಶ್ರಮ ಮುಖ್ಯವಾಗುತ್ತದೆ ಎಂದು ನವೋದಯ ಕಾಲೇಜಿನ ಅಧ್ಯಕ್ಷರಾದ ಜೆ.ಸಿ.ಮಾಧುಸ್ವಾಮಿ ನುಡಿದರು.
ಅವರು ಇಲ್ಲಿನ ನವೋದಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿದ್ಯೆ ಸಾಧಕನ ಸ್ವತ್ತು, ಸಾಧನೆಗೆ ಬಹಳ ತ್ಯಾಗ ಮಾಡಬೇಕಾಗುತ್ತದೆ. ಆದ್ದರಿಂದ ಕಲಿಯುವ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮೋಜಿನ ಜೀವನವನ್ನು ತ್ಯಾಗಮಾಡಬೇಕಾಗುತ್ತದೆ.
ಪ್ರತಿಭೆ ಯಾರಸ್ವತ್ತು ಅಲ್ಲ, ಆದರೆ ಅದನ್ನು ಗುರುತಿಸಲು ಸಂಸ್ಕಾರ ಬೇಕು. ಬದುಕಿಗೆ ಒಂದು ಶಾಸ್ತ್ರೀಯ ಚೌಕಟ್ಟು ನೀಡಿ . ವಿದ್ಯಾರ್ಥಿಯ ಮನಸ್ಸು ತೆರೆದ ಪುಸ್ತಕದಂತಿರಬೇಕು. ಅನುಭವವನ್ನು ಮೀರಿ ತಿಳುವಳಿಕೆಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಲು ತಪಸ್ಸಿನಂತೆ ಅಧ್ಯಯನಶೀಲನಾಗಬೇಕಿದೆ. ಅದು ಆತನ ಜೀವನವನ್ನು ರೂಪಿಸಲಿದೆ ಎಂದರು.
ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಸ್ತಿನ ಜೀವನ ರೂಪಿಸಿಕೊಳ್ಳಿ. ನೀವು ತಲೆಯ ಮೇಲೆ ಚಪ್ಪಡಿ ಹೊತ್ತು ಹೆಜ್ಜೆಯಿಡುತ್ತಿದ್ದೀರಿ. ಎಚ್ಚರ ತಪ್ಪಿದರೆ ಚಪ್ಪಡಿ ನಿಮ್ಮ ಕಾಲ ಮೇಲೆ ಬೀಳುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್ ಉದ್ಘಾಟಿಸಿದರು. ನಿವೃತ್ತ ಪ್ರೊ.ಮಾ.ಚಿ.ಕೈಲಾಸ್ನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲರಾದ ಬಸವಲಿಂಗಯ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

