ತುಮಕೂರಿನಲ್ಲಿ ಮತ್ತೊಂದು ಮರ್ಡರ್
ಕ.ಪ್ರ.ವಾರ್ತೆ ತುಮಕೂರು ಆ.15
ತಮ್ಮ ಮಗಳನ್ನ ಚುಡಾಯಿಸಬೇಡಿ ಅಂದಿದ್ದಕ್ಕೆ ವ್ಯಕ್ತಿಯೋರ್ವನನ್ನು ಹಾಡಹಗಲೇ ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದವನನ್ನು ಬೆಳಧರ ಗ್ರಾ.ಪಂ. ಮಾಜಿ ಸದಸ್ಯ ಉಮಾಶಂಕರ್ ಅಲಿಯಾಸ್ ಮಣಿ ಎಂದು ಗುರುತಿಸಲಾಗಿದೆ. ತುಮಕೂರು ಹೊರವಲಯದ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊನ್ನೆಯಷ್ಟೆ ಹಾಡಹಗಲೇ ಗೃಹಿಣಿಯೋರ್ವಳ ಹತ್ಯೆಯಿಂದ ತಲ್ಲಣಗೊಂಡಿದ್ದ ನಗರದ ನಾಗರಿಕರಲ್ಲಿ ಇದೀಗ ಮತ್ತಷ್ಟು ಆತಂಕ ಮೂಡಿದೆ. ತಮ್ಮ ಮಗಳನ್ನ ಮತ್ತು ಗ್ರಾಮದ ಯುವತಿಯರನ್ನ ಚುಡಾಯಿಸಬೇಡಿ ಅಂತ ಹೇಳಿದ್ದಕ್ಕೆ ವೈಷಮ್ಯವನ್ನಿಟ್ಟುಕೊಂಡು ಕೊಲೆ ಮಾಡಿದ ಭೀಬತ್ಸ ಕೃತ್ಯವೊಂದಕ್ಕೆ ತುಮಕೂರು ಸಾಕ್ಷಿಯಾಗಿದೆ.
ನಗರದ ಹೊರವಲಯದಲ್ಲಿರುವ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 11.30 ರ ವೇಳೆಗೆ ಈ ದುರ್ಘಟನೆ ನಡೆದಿದೆ. ತುಮಕೂರು ತಾಲೂಕಿನ ಬೆಳಧರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಉಮಾಶಂಕರ್ ಅಲಿಯಾಸ್ ಮಣಿ ಹತ್ಯೆಗೀಡಾದ ನತದೃಷ್ಟ. ಈತನ ಮಗಳನ್ನು ಪುಸಲಾಯಿಸುವ ಉದ್ದೇಶದಿಂದ ಪಕ್ಕದ ಗ್ರಾಮ ಓಬಳಾಪುರದ ಶಿವ ಎಂಬಾತ ಆಗಾಗ್ಗೆ ಚುಡಾಯಿಸುತ್ತಿದ್ದ. ಮಾತ್ರವಲ್ಲ ಶಾಲಾ ಕಾಲೇಜಿಗೆ ಬರುವ ಗ್ರಾಮದ ಯುವತಿಯರನ್ನು ಚುಡಾಯಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿ ಮತ್ತೆ ಚುಡಾಯಿಸಬೇಡಿ ಅಂತ ಹೇಳಿದ್ದಕ್ಕೆ ವೈಷಮ್ಯವನ್ನಿಟ್ಟುಕೊಂಡ ಶಿವು ಗುರುವಾರ ಬೆಳಿಗ್ಗೆ ಉಮಾಶಂಕರ್ ತುಮಕೂರು ನಗರಕ್ಕೆ ಬರುವ ವೇಳೆ ಹಿಂಬಾಲಿಸಿ ಬಂದು ಲಾಂಗಿನಿಂದ ಹತ್ಯೆಗೈದು ಪರಾರಿಯಾಗಿದ್ದಾನೆ.
ಸುದ್ಧಿ ತಿಳಿಯುತ್ತಿದ್ದಂತೆ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ, ಉಪ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತಲೆ ಮರೆಸಿಕೊಂಡಿರೋ ಆರೋಪಿ ಶಿವು ಬಂದನಕ್ಕಾಗಿ ಗ್ರಾಮಾಂತರ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

