ನೀರಿನ ಶುದ್ಧೀಕರಣ ಘಟಕ ಸರಿಪಡಿಸಿ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿರುವ ನೀರು ಶುದ್ಧೀಕರಣ ಯಂತ್ರದಲ್ಲುಂಟಾಗಿರುವ ದೋಷದಿಂದ ಕುಡಿಯುವ ನೀರನ್ನು ಶುದ್ಧೀಕರಿಸದೆ ಸರಬರಾಜು ಮಾಡುತ್ತಿರುವ ಪುರಸಭೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಅಂತರ್ಜಲ ಕುಸಿದು ಎಂಟುದಿನಗಳಿಗೊಮ್ಮೆ ನೀರು ಬಿಡುತ್ತಿದ್ದ ಪುರಸಭೆ, ಕೊಳವೆ ಮೂಲಕ ಹೇಮಾವತಿ ನೀರು ಕೆರೆಗೆ ಹರಿದು ಬಂದದ್ದರಿಂದ ಸಂಕಷ್ಟದಿಂದ ಪಾರಾಯಿತು.ಮಳೆಗಾಲದಲ್ಲು ಎಂಟತ್ತು ದಿನಗಳಿಗೊಮ್ಮೆ ನೀರು ಬಿಡುವ ಸ್ಥಿಯಲ್ಲಿದ್ದ ಪುರಸಭೆಗೆ ಪಟ್ಟಣದ ಕೆರೆಗೆ ಹೇಮಾವತಿ ನೀರು ಹರಿಯುತ್ತಿರುವುದರಿಂದ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಇದರಿಂದ ಸಿಬ್ಬಂದಿಯು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಸುಮಾರು 28 ಸಾವಿರದಷ್ಟಿರುವ ಜನಸಂಖ್ಯೆಯಿರುವ ಪಟ್ಟಣಕ್ಕೆ ನೀರು ಪೂರೈಕೆಗಾಗಿ ಕೊರೆದಿದ್ದ ಕೊಳವೆ ಬಾವಿಗಳು ಬತ್ತಿಹೋಗಿ ಬೆರಳೆಣಿಕೆಯಷ್ಟು ಕೊಳವೆಬಾವಿಗಳು ಅಲ್ಪಪ್ರಮಾಣದ ನೀರನ್ನು ಪೊರೈಕೆ ಮಾಡುತ್ತಿದ್ದು,ಇದರಿಂದ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಪರಿಸ್ಥಿತಿ ಬಂದಿತ್ತು.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹೇಮಾವತಿ ವರವಾಗಿ ಬಂದಿದೆ.ಇದೇ ನೀರನ್ನು ಪುರಸಭೆಯವರು ಮೂರು ದಿನಕ್ಕೊಮ್ಮೆ ಬಿಡುತ್ತಿದ್ದಾರೆ.ಆದರೆ ಈಗ ಸರಬರಾಜಾಗುತ್ತಿರುವ ನೀರು ಸಂಪೂರ್ಣವಾಗಿ ಶುದ್ಧಿಯಾಗದಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ತಕ್ಷಣ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

