ಕರ್ನಾಟಕ ತೆಂಗಿಗೆ ಕೇರಳ ಮಾದರಿ ಪರಿಹಾರ ಬೇಡ: ಬಿಬಿಎಸ್
ತಿಪಟೂರು: ಕೇರಳ ಮಾದರಿಯಲ್ಲಿ ಕರ್ನಾಟಕ ತೆಂಗು ಬೆಳೆಗಾರರಿಗೆ ತೆಂಗು ಬೆಳೆ ಪರಿಹಾರ ಪ್ರಯೋಜನವಿಲ್ಲವೆಂದು ಎಪಿಎಂಸಿ ನಿರ್ದೇಶಕ ಬಿ.ಬಿ. ಸಿದ್ದಲಿಂಗಮೂರ್ತಿ ತಿಳಿಸಿದ್ದಾರೆ.
ಕೇರಳದ ಕಡಿಮೆ ಪ್ರಮಾಣದಲ್ಲಿ ತೆಂಗು ಬೆಲೆ ಬೆಳೆಯುತ್ತಿದ್ದಾರೆ. ಕರ್ನಾಟಕದಲ್ಲಿ ತೆಂಗನ್ನು ಉಳುಮೆ ಮತ್ತು ಸಾವಯವದಲ್ಲಿ ಬೆಳೆಯಲಾಗುತ್ತದೆ. ಅಲ್ಲದೆ ಕೆಲವೆಡೆ ದುಬಾರಿಯಾಗಿರುವ ರಾಸಾಯನಿಕ ಗೊಬ್ಬರ ಹಾಕಿದರೆ ಮಾತ್ರ ಫಸಲು ಬಿಡುವುದು. ಇತ್ತೀಚೆಗೆ ಅಣಬೆ ರೋಗ, ಕಪ್ಪುತಲೆ ರೋಗ, ನುಸಿರೋಗ, ಸುಳಿಕೊಳೆ ರೋಗದಿಂದ ಬಳಲುತ್ತಿರುವ ನಾಡಿನ ಸಂಪತ್ತಾದ ತೆಂಗಿನ ಗಿಡಗಳಿಗೆ ಹಬ್ಬಿರುವ ರೋಗ ನಿರ್ಮೂಲನೆಯನ್ನು ಸರ್ಕಾರ ಸಮಗ್ರವಾಗಿ ಮಾಡುತ್ತಿಲ್ಲ. ಸುಮಾರು ಹತ್ತು ವರ್ಷದಿಂದ ಬಯಲು ಸೀಮೆಗೆ ಮಳೆ ಇಲ್ಲದೆ ಸಾಲ ಮಾಡಿ ಕೊಳವೆ ಬಾವಿ ಕೊರೆಸಿದರೂ ಅಂತರ್ಜಲದ ಕೊರತೆಯಿಂದ ನೀರು ಬರುತ್ತಿಲ್ಲ. ಇದರಿಂದ ತೆಂಗು ವಿನಾಶದಂಚಿಗೆ ತಲುಪುತ್ತಿರುವುದಲ್ಲದೆ ನೈಸರ್ಗಿಕವಾಗಿ ಇಲ್ಲಿ ಬೆಳೆಯುವ ತೆಂಗಿಗೆ ಹೆಚ್ಚು ಖರ್ಚು ಬರುತ್ತಿದೆ.
ಕೇರಳದಲ್ಲಿ ಸುತ್ತ ಸಮುದ್ರ ಮತ್ತು ಜೀವನದಿ ಇದ್ದು, ಕರ್ನಾಟಕದ ಬಯಲು ಸೀಮೆ ಪರಿಸ್ಥಿತಿ ಇದ್ದು, ಇಲ್ಲಿ ಯಾವ ಜೀವನದಿಯೂ ಇಲ್ಲ. ಆದರೂ ಕೇರಳಕ್ಕೆ 2972 ಕೋಟಿ ರು. ಪ್ಯಾಕೆಜ್ ಘೋಷಿಸಿದೆ. ಕರ್ನಾಟಕದಲ್ಲಿ ಹೆಚ್ಚು ಬೆಳೆಯುತ್ತಿದ್ದು, ತೆಂಗಿನಲ್ಲಿ 50 ಭಾಗಕ್ಕಿಂತಲೂ ಫಸಲು ಕಡಿಮೆಯಾಗಿರುವುದಲ್ಲದೆ 50 ಭಾಗಕ್ಕಿಂತಲೂ ಹೆಚ್ಚಿನ ತೆಂಗಿನ ಮರಗಳು ಒಣಗುತ್ತಿವೆ. ಆದ್ದರಿಂದ ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಹಾಗೂ ಒಣಗಿದ ತೆಂಗಿನ ಮರಕ್ಕೆ ವೈಜ್ಞಾನಿಕವಾದ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಬಿ.ಬಿ. ಸಿದ್ದಲಿಂಗಮೂರ್ತಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

