ತುಮಕೂರು

ನೀರಾ ಉತ್ತೇಜನ ನಿರ್ಧಾರಕ್ಕೆ ಸ್ವಾಗತ

Published On :

ತಿಪಟೂರು: ನೀರಾವನ್ನು ಆರೋಗ್ಯವರ್ಧಕ ಪೇಯವಾಗಿ ಉತ್ತೇಜಿಸುವ ರಾಜ್ಯ ಸರ್ಕಾರದ ತೀರ್ಮಾನದಿಂದ ಕೊಬ್ಬರಿ ಬೆಲೆ ಕುಸಿತ ಹಾಗೂ ರೋಗಬಾಧೆಯಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್. ಸದಾಶಿವಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಔಷಧೀಯ ಗುಣ ಹಾಗೂ ಪುಷ್ಟಿದಾಯಕ ಅಂಶ ಒಳಗೊಂಡ ನೀರಾ ಶಕ್ತಿ ಮತ್ತು ಆರೋಗ್ಯವರ್ಧಕ. ಇದರಿಂದ ಬೆಲ್ಲ, ಸಕ್ಕರೆ ಸೇರಿದಂತೆ ಹತ್ತಾರು ಉಪ ಉತ್ಪನ್ನಗಳನ್ನು ತಯಾರಿಸಬಹುದು. ನೀರಾ ಮತ್ತು ಅದರ ಉಪ ಉತ್ಪನ್ನಗಳು ಜೀರ್ಣಶಕ್ತಿಗೆ ಸಹಕಾರಿ. ಕಾಮಾಲೆಗೆ ರಾಮಬಾಣ. ಜೊತೆಗೆ ಮಧುಮೇಹಿಗಳಿಗೂ ವರದಾನವಾಗಿದೆ.
ಆದ್ದರಿಂದ ತೆಂಗು ಆಧಾರಿತ ಉಪ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕೊಡಲು ಸರ್ಕಾರ ಮುಂದಾಗಿದೆ. ನೀರಾ ಇಳಿಸಲು ತೆಂಗು ಬೆಳೆಗಾರರಿಗೆ ತೊಡಕಾಗಿದ್ದು, ಅಬಕಾರಿ ಕಾಯ್ದೆ ನಿರ್ಬಂಧವನ್ನು ತೆಗೆದುಹಾಕುವುದಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಇದು ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆ ಸಿಗದೆ ಕಂಗಾಲಾಗಿದ್ದ ರಾಜ್ಯದ ತೆಂಗು ಬೆಳೆಗಾರರಿಗೆ ಖುಷಿ ತಂದಿದೆ ಎಂದು ಸದಾಶಿವಯ್ಯ ತಿಳಿಸಿದರು.
ತೆಂಗು ಉತ್ಪಾದಕರ ಸೊಸೈಟಿಗಳ ಮೂಲಕ ನೀರಾ ಸಂಸ್ಕರಣೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ನಲ್ಲಿ ಹಣ ಮೀಸಲಿರಿಸಿದ್ದಾರೆ. ತಾಲೂಕಿನ ತೆಂಗು ಬೆಳೆಗಾರರು ಉತ್ಪಾದಕರ ಸೊಸೈಟಿ ಹೆಚ್ಚಿಸಿ ಸಂಖ್ಯೆಯಲ್ಲಿ ರಚಿಸಿ ರಾಜ್ಯ ಸಹಕಾರ ಕಾಯ್ದೆಯಡಿ ನೋಂದಾಯಿಸಿಕೊಂಡು ತೆಂಗು ಅಭಿವೃದ್ಧಿ ಮಂಡಳಿಯೊಂದಿಗೆ ವ್ಯವಹರಿಸಲು ಮುಂದಾಗಬೇಕೆಂದು ಮನವಿ ಮಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.