'ವರದಕ್ಷಿಣೆ ಪಡೆಯೋದು ಕಾನೂನುಬಾಹಿರ
ಕ.ಪ್ರ.ವಾರ್ತೆ , ಕುಣಿಗಲ್ , ಆ. 18
ಯಾವುದೇ ವ್ಯವಹಾರಗಳು ಕಾನೂನಿನ ಚೌಕಟ್ಟಿನಲ್ಲಿ ನಿಷೇಧವಾಗಿದೆ. ಅಂತಹ ವ್ಯವಹಾರಗಳಿಗೆ ಬರೆಸಿಕೊಳ್ಳುವ ಕರಾರುಗಳು ಶೂನ್ಯ ಮೌಲ್ಯ ಹೊಂದಿರುತ್ತವೆಂದು ನ್ಯಾಯಾಧೀಶೆ ಆರ್.ಶಾರದ ತಿಳಿಸಿದರು.
ಪಟ್ಟಣದ ಬಿಜಿಎಸ್ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಕಾನೂನು ಅರಿವು- ನರೆವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಎರಡೂ ಅಂಶಗಳು ಕಾನೂನಿಗೆ ವಿರುದ್ಧವಾಗಿವೆ. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಬಹುತೇಕ ಮಂದಿ ವರದಕ್ಷಿಣೆ ನೀಡಲು ಸಾಧ್ಯವಾಗದಂತಹ ಸಂದರ್ಭ ಕರಾರುಗಳನ್ನು ಲಿಖಿತ ರೂಪದಲ್ಲಿ ಮಾಡಿಕೊಂಡಿರುತ್ತಾರೆ. ಇಂತಹ ಸಂದರ್ಭ ಈ ಕರಾರುಗಳು ಶೂನ್ಯ ಮೌಲ್ಯಗಳನ್ನು ಹೊಂದಿರುತ್ತವೆ. ವಿದ್ಯಾರ್ಥಿ ದಿಸೆಯಲ್ಲಿ ದೈನಂದಿನ ಜೀವನದಲ್ಲಿ ಎದುರುವ ಹಲವು ಸಮಸ್ಯೆಗಳ ಕುರಿತಂತೆ ಕಾನೂನಿನ ಅರಿವನ್ನು ಹೊಂದುವ ಮೂಲಕ ನೆಮ್ಮದಿಯುತ ಜೀವನ ನಿರ್ವಹಣೆ ಸಾಧ್ಯ ಎಂದರು.
ವಿದ್ಯಾರ್ಥಿಗಳೊಂದಿಗೆ ಸರಳ ಕಾನೂನುಗಳ ಬಗ್ಗೆ ಪ್ರಶ್ನೋತ್ತರ ಸಂವಾದ ನಡೆಸುವ ಮೂಲಕ ಅವರಲ್ಲಿ ವಿನೂತನವಾಗಿ ಕಾನೂನು ಅರಿವು ಮೂಡಿಸಿದರು.
ನ್ಯಾಯಾಧೀಶರಾದ ಎನ್.ಮುನಿರಾಜು, ಕನಿಷ್ಠ ಕಾನೂನುಗಳ ಬಗ್ಗೆ ಅರಿವು ಇರುವಂತನಿಗೆ ವ್ಯಾಜ್ಯವಿಲ್ಲದ ನೆಮ್ಮದಿಯುವ ಜೀವನ ಸಾಧ್ಯ. ಕಾನೂನಿನ ನೆರವಿಲ್ಲದೆ ಮಾಡಿದಂತ ತಪ್ಪಿಗೆ ಕ್ಷಮೆ ಇರುವುದಿಲ್ಲ. ಆದ್ದರಿಂದ ಪ್ರತಿ ನಾಗರಿಕನೂ ಕನಿಷ್ಠ ಕಾನೂನು ಅರಿವು ಹೊಂದಬೇಕು ಎಂದರು.
ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಣಿ ಮಕ್ಕಳ ಹಕ್ಕುಗಳ ಬಗ್ಗೆ, ವಕೀಲ ಸುರೇಶ್ ರ್ಯಾಗಿಂಗ್ ನಿಯಂತ್ರಣ ಕಾಯಿದೆ ಬಗ್ಗೆ, ವಕೀಲ ಸಂಘದ ಅಧ್ಯಕ್ಷ ದಯಾನಂದ್, ಸಾಮಾನ್ಯ ಕಾನೂನಿನ ಬಗ್ಗೆ ಹಾಗೂ ಎಪಿಪಿ ಸುರೇಖಾ ಹಿರೇಮಠ ಮಹಿಳೆ ಮತ್ತು ಕ್ರಿಮಿನಲ್ ಕಾನೂನಿನ ಬಗ್ಗೆ ಕಿರು ಉಪನ್ಯಾಸ ನೀಡಿದರು.
ಪ್ರಾಚಾರ್ಯ ಚೌಡಪ್ಪ, ವಕೀಲರಾದ ಮುಮ್ತಾಜ್ ಅಹಮದ್, ಹುಚ್ಚೇಗೌಡ, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

