ರಾಜೀವ್, ದೇವರಾಜ ಅರಸು ಕೊಡುಗೆ ಅಪಾರ
ಮಧುಗಿರಿ: ಹದಿನೆಂಟು ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ ಮತದಾನದ ಹಕ್ಕು ಹಾಗೂ ಚುನಾಯಿತ ಹೆಣ್ಣುಮಕ್ಕಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಕೊಟ್ಟ ಯುವಕರ ಕಣ್ಮಣಿ ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಅವರ ಕೊಡುಗೆ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಮಂಗಳವಾರ ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಪುರಸಭೆ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜಅರಸು ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೀಸಲಾತಿ ದೊರಕಿಸಿ ಕೊಟ್ಟ ಕೀರ್ತಿ: ಸಂವಿಧಾನದಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಹೆಣ್ಣು ಮಕ್ಕಳಿಗೆ ಮೀಸಲಾತಿ ದೊರಕಿಸಿ ಕೊಟ್ಟ ಕೀರ್ತಿ ಮತ್ತು ದೇಶದಲ್ಲಿ ಮೊಬೈಲ್ ಸೌಲಭ್ಯ ದೊರೆಯಲು ರಾಜೀವ್ಗಾಂಧಿ ಕಾರಣ ಎಂದ ರಾಜಣ್ಣ, ಮುಂದಿನ ವರ್ಷ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸಹಾಧನದ ಚೆಕ್ಕನ್ನು ಈ ಇಬ್ಬರು ಮಹಾನ್ನಾಯಕರ ಜನ್ಮ ದಿನದಂದು ವಿತರಿಸುವ ಮೂಲಕ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಧೀಮಂತ ನಾಯಕ, ಶೋಷಿತರ, ದೀನ ದಲಿತರ ಪರವಾಗಿ ದೇವರಾಜ ಅರಸರು ಮೊದಲಿಗೆ ದನಿ ಎತ್ತಿದರು. ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿಗೂ ಭಾಜನರಾದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೌಕರ ವರ್ಗಕ್ಕೆ ಚೆಕ್ ಮೂಲಕ ವೇತನ ಪಾವತಿ ಮಾಡಿದ ವಿಧಾನವನ್ನು ಮೊದಲ ಬಾರಿಗೆ ಜಾರಿಗೆ ತಂದವರು ಅರಸು,ದೇವರಾಜ ಅರಸು ಜಾರಿಗೊಳಿಸಿದ ಯೋಜನೆಗಳನ್ನು ಇತರ ರಾಜ್ಯದವರು ಅನುಸರಿಸಿದರು ಎಂದು ಕೊಂಡಾಡಿದರು.
ಅಭ್ಯುದಯಕ್ಕೆ ಶ್ರಮಿಸಿದ ಶಕ್ತಿ: ವಾಣಿಜ್ಯೋದ್ಯಮಿ ಆರ್.ಸಿ.ವಿಜಯಕುಮಾರ್ಜೈನ್ ಮಾತನಾಡಿ, ಶೋಷಿತರ ಸಮಗ್ರ ಅಭ್ಯುದಯಕ್ಕೆ ಶ್ರಮಿಸಿದ ಶಕ್ತಿ ಅರಸು ಮಾನವ ಸಂಪನ್ಮೂಲ ಬಳಕೆಗೆ ಅಧಿಕ ಒತ್ತು ಕೊಟ್ಟು ದೇಶಕ್ಕೆ ಮಾದರಿಯಾದವರು ರಾಜೀವ್ಗಾಂಧಿ ಇವರಿಬ್ಬರು ಸಮಾಜದಲ್ಲಿ ಸಮಾಜಿಕ ನ್ಯಾಯ ಕಲ್ಪಿಸಿಕೊಟ್ಟ ದೀಮಂತ ನಾಯಕರು ಎಂದರು. ಡಿಡಿಪಿಐ ಟಿ.ಎಸ್.ಆಂಜನಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಚೇತನಗಳನ್ನು ಸನ್ಮಾನಿಸಲಾಯಿತು.
ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಸಿದ್ಧಾಗಂಗಾಂಬಿಕೆ, ಜಿ.ಪಂ.ಸದಸ್ಯೆ ಸುಮನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭೆ ಸದಸ್ಯ ಎಯೂಬ್ ಅಲೀಂ, ಎನ್.ಗಂಗಣ್ಣ, ಜುಬೇದ, ಕಮ್ಮನಕೋಟೆ ಶಿವಣ್ಣ, ಸಜೀವಗೌಡ, ಪ್ರಾಂಶುಪಾಲ ಚಿನ್ನತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕೆಂಕೆರೆ ಪ್ರಾರ್ಥಿಸಿ ನಾಡಗೀತೆ ಹಾಡಿದರು. ಬಿಇಒ ವೈ.ಎನ್.ರಾಮಕೃಷ್ಣಯ್ಯ ಸ್ವಾಗತಿಸಿ, ಉಪನ್ಯಾಸಕ ಎನ್.ಮಹಾಲಿಂಗೇಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

