ಧಾರ್ಮಿಕ ಕಾರ್ಯದಿಂದ ಮಾನಸಿಕ ನೆಮ್ಮದಿ
ಕ.ಪ್ರ.ವಾರ್ತೆ , ತಿಪಟೂರು , ಆ. 21
ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳುವ ಮೂಲಕ ಧರ್ಮವನ್ನು ಹೆಚ್ಚೆಚ್ಚು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಮಾನವನಿಗೆ ಇಂದು ಧರ್ಮದ ಅಗತ್ಯತೆ ಇದ್ದು, ಧರ್ಮದಿಂದ ಮಾತ್ರ ಮಾನವ ಏಳಿಗೆ ಸಾಧಿಸಬಹುದು ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಚಟ್ನಹಳ್ಳಿ, ಹೊನ್ನೇನಳ್ಳಿ, ಲಿಂಗದಹಳ್ಳಿ ಗ್ರಾಮಗಳ ವಿರೂಪಾಕ್ಷೇಶ್ವರ ಸ್ವಾಮೀಜಿ ಮತ್ತು ಮಲ್ಲೇಶ್ವರಸ್ವಾಮಿ ಕುಂಭಾಭಿಷೇಕ ಮಹೋತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಗ್ರಾಮಗಳು ಸುಭಿಕ್ಷ: ಪ್ರತಿಯೊಂದು ಗ್ರಾಮಗಳಲ್ಲಿ ದೇವಾಲಯಗಳನ್ನು ರಕ್ಷಿಸಿ ಶ್ರದ್ಧಾ ಭಾವನೆಯಿಂದ ಪೂಜಾ ಕಾರ್ಯಗಳನ್ನು ನಡೆಸಿದಲ್ಲಿ ಗ್ರಾಮಗಳಲ್ಲಿ ಏಳಿಗೆ, ಒಗ್ಗಟ್ಟು ನಿರ್ಮಾಣವಾಗಿ ಗ್ರಾಮಗಳು ಸುಭಿಕ್ಷವಾಗಿರುರುತ್ತವೆ ಎಂದು ತಿಳಿಸಿದರು.
ಚಿ.ನಾ.ಹಳ್ಳಿ ತಾಲ್ಲೂಕಿನ ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಯಾರು ರಕ್ಷಿಸುತ್ತಾರೊ ಅವರನ್ನು ಧರ್ಮ ರಕ್ಷಿಸುತ್ತದೆ. ಅನ್ಯಾಯ, ಅಧರ್ಮ, ಭ್ರಷ್ಟಾಚಾರ, ಶಾಂತಿ ಕದಡುವವರನ್ನು ಮಟ್ಟಹಾಕಿ ದೇಶ ಹಾಗೂ ಸಮಾಜದ ಒಳಿತಿಗಾಗಿ ಧರ್ಮ ಪಾಲಿಸಿದರೆ ಮಾನವ ಕುಲದ ಏಳಿಗೆಯಾಗಲು ಸಾಧ್ಯ ಎಂದು ತಿಳಿಸಿದರು.
ಪ್ರಗತಿ ಪಥದಲ್ಲಿ ಮುನ್ನುಗ್ಗಬೇಕಿದೆ: ನಮ್ಮ ದೇಶವನ್ನು ಕಾಯುತ್ತಿರುವ ಯೋಧರು ದೇಶವೇ ನನ್ನ ಕುಟುಂಬ. ಇಲ್ಲಿರುವ ಜನಗಳೇ ನನ್ನ ಅಣ್ಣ ತಮ್ಮಂದಿರು ಎಂಬ ಭಾವನೆಯಿಂದ ಪ್ರತಿ ಕ್ಷಣ ಕಟ್ಟೆಚ್ಚರದಿಂದ ದೇಶವನ್ನು ಕಾಯುತ್ತಿದ್ದಾರೆ. ಆದರೆ ಹಣ, ಅಧಿಕಾರದ ಆಸೆ, ಸ್ವಾರ್ಥ ಎಂಬ ಕುಬ್ಜ ಮನಸ್ಸುಗಳುಳ್ಳ ನಾವೆಲ್ಲರೂ ಸಹ ಅವರಂತೆ ದೇಶಪ್ರೇಮ, ಸ್ವಾಭಿಮಾನಗಳನ್ನು ಬೆಳೆಸಿಕೊಂಡು ದೇಶದ ಪ್ರಗತಿ ಪಥದಲ್ಲಿ ಮುನ್ನುಗ್ಗಬೇಕಿದೆ ಎಂದರು.
ಗುರುಕುಲನಂದಾಶ್ರಮದ ಶ್ರೀ ಇಮ್ಮಡಿಕರಿಬಸವಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜದ ಎಲ್ಲಾ ವರ್ಗದವರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಯಾವುದೇ ಸಮಾರಂಭಗಳ ಯಶಸ್ಸಿಗೆ ಒಗ್ಗಟ್ಟಿನಿಂದ ಸಹಕರಿಸಿ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಬೇಕೆಂದರು.
ಕೆಜೆಪಿ ಮುಖಂಡ ಲೋಕೇಶ್ವರ ಮಾತನಾಡಿ, ಧರ್ಮವನ್ನು ರಕ್ಷಿಸಿದರೆ ಮಾತ್ರ ಸಮಾಜ, ದೇಶದ ಪ್ರಗತಿ ಸಾಧ್ಯ. ಇಂತಹ ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾನು, ನನ್ನದು ಎಂಬ ಸ್ವಾರ್ರ್ಥ ಭಾವನೆಗಳನ್ನು ಅಳಿಸಿ ಎಲ್ಲರೂ ಒಂದೇ ಎಂಬ ಮನೋಭಾವನೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಗ್ರಾಮದ ಬಿದಿರಾಂಭಿಕ ದೇವಿ, ಕೋಡಿ ಕೆಂಪ್ಮ್ಮದೇವಿ, ಶ್ರೀ ಭೀರಲಿಂಗೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ ದೇವರುಗಳ ಆಗಮನದೊಂದಿಗೆ ಕುಂಭಾಬಿಷೇಕವು ವಿಜೃಭಣೆಯಿಂದ ನಡೆಯಿತು. ಸ್ವಾಮಿಯವರಿಗೆ ಮಹಾರುದ್ರಾಭಿಷೇಕ, ರುದ್ರಹೋಮ, ನವಗ್ರಹ ಹೋಮ, ಸಹಸ್ರ ಬಿಲ್ವಾರ್ಚನೆ ಮತ್ತಿತರ ಪೂಜೆಗಳನ್ನು ಸರಾಗವಾಗಿ ನರೆರವೇರಿಸಲಾಯಿತು.
ಶಾಸಕ ಕೆ. ಷಡಕ್ಷರಿ, ಮಾಜಿ ಶಾಸಕ ನಾಗೇಶ್, ಜಿ.ಪಂ. ಸದಸ್ಯ ತ್ರಿಬಂಬಕ ಮತ್ತು ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

