ಕಂದಾಯ ಅಧಿಕಾರಿ ಮೇಲೆ ಹಲ್ಲೆ: ದೂರು
ತಿಪಟೂರು: ನಗರಸಭಾ ಕಂದಾಯಾಧಿಕಾರಿ ಈಶ್ವರಪ್ಪ ಎಂಬುವವರು ಕರ್ತವ್ಯ ನಿರತರಾಗಿದ್ದಾಗಲೇ ನಗರದ ನಿತಿನ್ ಎಂಬಾತ ಹಾಗೂ ಮತ್ತಿಬ್ಬರು ತೀವ್ರ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ. ನಗರದ ಕೆ.ಆರ್. ಬಡಾವಣೆಯ ನಿತಿನ್, ನಂದನ್ ಮತ್ತಿತರರು 4ನೇ ಮುಖ್ಬರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಪಕ್ಕದಲ್ಲಿ ಮನೆಯೊಂದನ್ನು ನಿರ್ಮಿಸುತ್ತಿದ್ದು, ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟುತ್ತಿದ್ದ ಮಾಹಿತಿ ಮೇರೆಗೆ ನಗರಸಭಾ ಅಧಿಕಾರಿಗಳು, ಸಿಬ್ಬಂದಿ ಅಳತೆ ಮಾಡಿ ಹೆಚ್ಚುವರಿ ಕಟ್ಟಡ ತೆರವುಗೊಳಿಸಲು ಬಂದಿದ್ದರನ್ನೆಲಾಗಿದೆ. ಈ ನಿಟ್ಟಿನಲ್ಲಿ ಅಳತೆ ಮಾಡಲು ಕಂದಾಯಾಧಿಕಾರಿ ಈಶ್ವರಪ್ಪ ಮತ್ತು ಸಿಬ್ಬಂದಿ ಮುಂದಾದಾಗ ಈಶ್ವರಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೌರಾಯುಕ್ತರಾದ ಚಂದ್ರಶೇಖರ್, ಎಇಇ ರಾಮಶೇಶು, ಆರ್.ಐ ಪ್ರಕಾಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ನಗರಠಾಣೆ ಕೊಟ್ರೇಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜೂಜು ಪ್ರಕರಣ: 9 ಮಂದಿ ಬಂಧನ
ತುಮಕೂರು: ಎರಡು ಪ್ರತ್ಯೇಕ ಜೂಜು ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗುಬ್ಬಿ ಹೆದ್ದಾರಿ ಪಕ್ಕದ ಅಡಿಕೆ ತೋಟದಲ್ಲಿ ಜೂಜಾಟ ನಿರತ 4 ಮಂದಿಯನ್ನು ಬಂಧಿಸಿ ಅವರಿಂದ ರು. 1140 ನಗದು, 4 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಕ್ಯಾತ್ಸಂದ್ರ ವಾಸಿಗಳು. ಮತ್ತೊಂದು ಪ್ರಕರಣದಲ್ಲಿ ಮಾರನಾಯಕನಪಾಳ್ಯದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಫಯಾಜ್, ನಿಶ್ಚಲ್, ಆದರ್ಶ, ಸಂದೇಶ್, ಜನಾರ್ಧನ್ ಅವರನ್ನು ಬಂಧಿಸಿ ಅವರಿಂದ ಆಟೋ, 4 ಮೊಬೈಲ್ ಹಾಗೂ ರು.4300 ನಗದು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

