ಜಲಮಾಲಿನ್ಯ ಕುರಿತು ಮಹಿಳಾ ಕಾರ್ಯಾಗಾರ
ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಜಲಮಾಲಿನ್ಯ ನಿಯಂತ್ರಣ ಹಾಗೂ ವರಲಕ್ಷ್ಮಿ ಪೂಜೆಯ ವಿಶೇಷ ಕುರಿತು ಮಹಿಳಾ ಸದಸ್ಯರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಸವರಾಜು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಜಲ ಮೂಲಗಳನ್ನು ಮಲೀನ ಮಾಡುವುದರಿಂದ ಉಂಟಾಗುವ ರೋಗಗಳ ಬಗ್ಗೆ ಮಾಹಿತಿ ನೀಡಿ, ಮನುಷ್ಯನಿಗೆ ನೀರಿನ ಶೇ 80 ರಷ್ಟು ಕಾಯಿಲೆಗಳು ಹರಡುತ್ತಿದ್ದು,ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತಿ ಮೂಡಿಸಿಕೊಳ್ಳಬೇಕೆಂದರು.
ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರು ಜಲ ಮಾಲಿನ್ಯದ ಬಗ್ಗೆ ತಿಳಿಸಿ ಹೇಳುವ ಮೂಲಕ ಭವಿಷ್ಯದಲ್ಲಿ ಉಂಟಾಗುವ ನೀರಿನ ಸಮಸ್ಯೆ ನಿವಾರಣೆಯ ಜೊತೆಗೆ ನೀರಿನಿಂದ ಬರುವ ರೋಗಗಳಿಂದ ದೂರವಿರುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಶಿಕ್ಷಕರು ಚಿಂತನೆ ನಡೆಸಬೇಕಾಗಿದೆ ಎಂದರು.
ಚೇಳೂರು ಎಪಿಎಂಸಿ ಅಧ್ಯಕ್ಷ ಹಿತೇಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯವರು ಕೇವಲ ಅರ್ಥಿಕವಾಗಿ ಮಹಿಳೆಯರನ್ನು ಸದೃಢರನ್ನಾಗಿಸದೆ ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿಯೂ ಅವರಿಗೆ ಅರಿವು ಮೂಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವೆಂದರು.
ಸಮಾಜ ಸೇವಕಿ ಸಿ.ಟಿ.ಶಾರದಮ್ಮ, ವರಲಕ್ಷಿ ಪೂಜೆ ಮತ್ತು ಅದರಿಂದ ದೊರೆಯುವ ಫಲಗಳ ಕುರಿತು ಮಾಹಿತಿ ನೀಡಿದರು.
ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಲಯ ಅಧ್ಯಕ್ಷ ನರಸಿಂಹಮೂರ್ತಿ, ಒಕ್ಕೂಟದ ಅಧ್ಯಕ್ಷ ಬಸವರಾಜು, ಮಹಿಳಾ ಘಟಕದ ಶಿವಮ್ಮ ಜ್ಞಾನವಿಕಾಸ ಸಂಯೋಜನಾಧಿಕಾರಿ ಉಷಾರಾಣಿ, ವಲಯ ಮೇಲ್ವಿಚಾರಕ ಹರೀಶ್ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
29 ರಿಂದ ಕೊಬ್ಬರಿ ಖರೀದಿ
ತಿಪಟೂರು: ತಾಲೂಕಿನ ತೆಂಗು ಬೆಳೆಗಾರರಿಗೆ 2ನೇ ಹಂತದಲ್ಲಿ ನಫೆಡ್ನಿಂದ ಕೊಬ್ಬರಿ ಖರೀದಿಸಲು, ಆ.29ರಿಂದ ಹೊಸ ಡೇಟ್ಸ್ ನೀಡಲಾಗುತ್ತಿದ್ದು, ಕೊಬ್ಬರಿಯನ್ನು ಸೆ.2ರಿಂದ ಖರೀದಿಸಲಾಗುವುದೆಂದು ಎಪಿಎಂಸಿ ಕಾರ್ಯದರ್ಶಿ ಸಿದ್ದುನ್ಯಾಮನಗೌಡ ಮತ್ತು ನಫೆಡ್ ವ್ಯವಸ್ಥಾಪಕ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಂದು ಪಹಣಿಯಿಂದ 10ಕ್ವಿಂಟಾಲ್ ಕೊಬ್ಬರಿ ಮಾತ್ರ ಖರೀದಿಸಲಿದ್ದು, ಈ ನಿಟ್ಟಿನಲ್ಲಿ ರೈತಎರಡೂವರೆ ಎಕರೆಯ ಪಹಣಿ ಹೊಂದಿರಬೇಕು. ನಫೆಡ್ ಮೂಲಕ ಒಮ್ಮೆ ಮಾತ್ರ ಒಬ್ಬ ರೈತರು ಕೊಬ್ಬರಿ ಮಾರಾಟ ಮಾಡಲು ಅರ್ಹರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ರೈತರು ಎಪಿಎಂಸಿ ಕಾರ್ಯದರ್ಶಿ ಅಥವಾ ನಫೆಡ್ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

