ತುಮಕೂರು

ವಕ್ಫ್ ಮಂಡಳಿ ವತಿಯಿಂದ ನಿರ್ಮಿಸಿರುವ ಮಳಿಗೆಗಳ ಪ್ರಾರಂಭಕ್ಕೆ 'ಹೈ' ತಡೆಯಾಜ್ಞೆ

Published On :

ಶಿರಾ: ಪಟ್ಟಣದ ಕಲ್ಲುಕೋಟೆ ಪ್ರವಾಸಿ ಮಂದಿರದ ಸರ್ಕಲ್ ಬಳಿ ಇರುವ ಸ್ಮಶಾನ ಜಾಗದಲ್ಲಿ ವಕ್ಫ್ ಮಂಡಳಿ ವತಿಯಿಂದ ನಿರ್ಮಿಸಿರುವ 112 ಅಂಗಡಿ ಮಳಿಗೆಗಳ ಪ್ರಾರಂಭಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಚಾಲಕ ರಾಘವೇಂದ್ರ ಅಜೈಕರು ತಿಳಿಸಿದರು.
ಅವರು  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸ್ಮಶಾನದ ಜಾಗದಲ್ಲಿ ಅಂಗಡಿ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿದ್ದು ಅವುಗಳನ್ನು ಪ್ರಾರಂಭಿಸಲು ಅನುಮತಿ ನೀಡಕೂಡದೆಂದು ಹಿಂದೂ ಜಾಗರಣಾ ವೇದಿಕೆ ನ್ಯಾಯಾಲಯಕ್ಕೆ ಮೊರೆ ಹೊಕ್ಕ ಪರಿಣಾಮ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಈ ಹಿಂದೆ ಜಿಲ್ಲಾಧಿಕಾರಿಗಳು ಈ ಬಗ್ಗೆ ತಕರಾರು ಅರ್ಜಿ ನ್ಯಾಯಾಲಯದಲ್ಲಿದ್ದರೂ ಸದರಿ ಅಕ್ರಮ ಮಳಿಗೆಗಳ ಪ್ರಾರಂಭಕ್ಕೆ ಅನುಮೋದನೆ ನೀಡಿದ್ದರು. ಈಗ ಹೈಕೋರ್ಟ್ ತಡೆಯಾಜ್ಞೆ ಪರಿಗಣಿಸಿ ಅವರ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಕೋರಿದರು.
ಸಮಾವೇಶ: ಆ. 31 ಶನಿವಾರ ಆಯೋಜಿಸಿರುವ ಬೃಹತ್ ಹಿಂದೂ ಯುವ ಸ್ವಾಭಿಮಾನಿ ಸಮಾವೇಶ ಮತ್ತು ಸ್ವಯಂ ಪ್ರೇರಿತ ಬಂದ್ ಕಾರ್ಯಕ್ರಮವನ್ನು ಈ ಹಿಂದೆ ಆಯೋಜಿಸಿದಂತೆ ನಡೆಸುವುದು ಖಂಡಿತ ಎಂದು ತಿಳಿಸಿದ ರಾಘವೇಂದ್ರ ಅಜೈಕರ್ ಅವರು ಅಂದಿನ ಸಮಾವೇಶದಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಮಂಜುನಾಥ್, ರಂಗಣ್ಣ, ವಿಶ್ವನಾಥ್ ಆರಾಧ್ಯ, ಉಮೇಶ್, ಸುಬ್ಬು, ತಾಲೂಕು ಸಂಚಾಲಕ ಸುಬ್ಬರಾಜು, ಆರ್.ಎಸ್.ಎಸ್.ನ ವಿಜಯ್‌ಕುಮಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.