ಸ್ವಾಭಿಮಾನದ ಬದುಕು ಸಾಗಿಸಲು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ
ಕನ್ನಡಪ್ರಭ ವಾರ್ತೆ ಮಧುಗಿರಿ ಆ.28
ನಮ್ಮಲ್ಲಿ ಒಗ್ಗಟ್ಟು ಮೂಡಿಸಿ ಪ್ರೀತಿ, ವಿಶ್ವಾಸದಿಂದ ಜನಾಂಗದ ಏಳಿಗೆಗೆ
ಸಂಘಟಿತರಾಗಿ ಸ್ವಾಭಿಮಾನದ ಬದುಕು ಸಾಗಿಸಲು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಬುಧವಾರ ಮಧುಗಿರಿ ತಾಲೂಕು ತಿಗಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಿಗಳರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಪಟ್ಟಣದ ಎಂಎನ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಿಗಳ ಜನಾಂಗ ಮುಗ್ಧ ಮನಸ್ಸುಳ್ಳವರು. ಶ್ರಮ ಜೀವಿಗಳು, ಸಂಘಟನೆ ಮೂಲಕ ತಮ್ಮಲ್ಲಿರುವ ಭಿನ್ನಾಭಿಪ್ರಾಯ ಸಮಾಲೋಚಿಸಿ ಬಗೆಹರಿಸಿಕೊಂಡು ಜನಾಂಗದ ಏಳಿಗೆಗೆ, ಸಮಾಜದ ಅಭಿವೃದ್ಧಿಗೆ ಹಾಗೂ ದೇಶದ ಪ್ರಗತಿಗೆ ಪ್ರೀತಿ, ವಿಶ್ವಾಸದಿಂದ ಒಗ್ಗಟ್ಟಾಗಬೇಕು. ಸಮಾಜಕ್ಕೆ ಮಾರಕವಾಗುವ ವಿಚಾರ ಬದಿಗೊತ್ತಿ ತಮ್ಮ ಕಟ್ಟುಪಾಡು ಸಡಿಲಿಸಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುನ್ನಗ್ಗಬೇಕು ಎಂದರು.
ಈ ಕಟ್ಟಡಕ್ಕೆ ನನ್ನ ಅನುದಾನದಲ್ಲಿ 5 ಲಕ್ಷ ರು.ಮಂಜೂರು ಮಾಡುವುದಾಗಿ ಘೋಷಿಸಿದರು. ತಾಲೂಕಿನಲ್ಲಿ ಮಳೆ ಇಲ್ಲದೆ ಬರಗಾಲ ತಾಂಡವವಾಡುತ್ತಿದೆ. ಯಾವುದಾದರು ಮೂಲದಿಂದ ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪ್ರಾಮಾಣಿಕರು: ಸಾನಿಧ್ಯ ವಹಿಸಿದ್ದ ಶಿವಗಂಗಾ ಕ್ಷೇತ್ರದ ತಿಗಳರ ಮಹಾಲಕ್ಷ್ಮೀ ಸಂಸ್ಥಾನ ಪೀಠಧ್ಯಾಕ್ಷ ಶ್ರೀಜ್ಞಾನಾನಂದಪುರಿ ಸ್ವಾಮೀಜಿ ಸ್ವಾಭಿಮಾನ, ಪರಿಶ್ರಮ ಮತ್ತು ಪ್ರಮಾಣಿಕ ಜನಾಂಗವೆಂದರೆ ಅದು ತಿಗಳರ ಜನಾಂಗ, ತುಮಕೂರು ಜಿಲ್ಲೆಯಲ್ಲಿ ತಿಗಳರು 2ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಇದ್ದರೂ ಕೂಡ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಹೇಳಿದ ಸ್ವಾಮೀಜಿ ಆಸ್ತಿ, ಸ್ಥಿತಿವಂತರಿದ್ದರು ಬೆನ್ನು ತಟ್ಟಿ ಬೆಳಸುವ ಮಂದಿಯಿಲ್ಲದೆ ತಿಗಳರು ರಾಜಕೀಯ ಕ್ಷೇತ್ರದಲ್ಲಿ ವಂಚಿತರಾಗಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ನಮ್ಮ ಜನಾಂಗ 30 ಲಕ್ಷ ಜನರಿದ್ದರೂ ರಾಜಕೀಯವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಹಾಗಾಗಿ ತಿಗಳರು ತಾಳ್ಮೆಯಿಂದ ಸಂಘಟಿತರಾಗಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮುರುಳಿಕೃಷ್ಣ, ಬಡವನಹಳ್ಳಿ ನಾಗರಾಜು, ಹಳೇಹಟ್ಟಿ ನಾಗರಾಜು, ನಾರಾಯಣಮೂರ್ತಿ ಮಾತನಾಡಿದರು. ಸಮಾರಂಭದಲ್ಲಿ ತಾ.ಅಧ್ಯಕ್ಷ ಭೀಮಣ್ಣ, ಗೌರವಾಧ್ಯಕ್ಷ ಕರಿಯಣ್ಣ, ಕಾರ್ಯದರ್ಶಿ ರಾಮಕೃಷ್ಣಯ್ಯ,
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್, ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಾಗಂಗಾಂಭಿಕೆ, ತಿಗಳರ ಕ್ಷೇಮಾಭಿವೃದ್ಧಿ ಸಂಘದ ರೇವಣ್ಣಸಿದ್ದಯ್ಯ, ನಾಗರಾಜು, ಗಂಗಾಧರ್,ನಾರಾಯಣಪ್ಪ, ನಾಗಮಣಿ, ಮುಖಂಡ ತುಂಗೋಟಿ ರಾಮಣ್ಣ, ಚೌಡಪ್ಪ, ಅಹಿಂದ ಸಂಘಟನೆ ಮುಷ್ತಾಕ್ ಅಹಮದ್ ಹಾಗೂ ತಿಗಳ ಜನಾಂಗದ ಅನೇಕ ಮುಖಂಡರು ಉಪಸ್ಥಿತರಿದ್ದರು. ರೇವಣ್ಣಸಿದ್ದಯ್ಯ ಸ್ವಾಗತಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

