ಕ್ಷೀರ ಭಾಗ್ಯ ಯೋಜನೆ ಉಪಯೋಗ ಪಡೆದುಕೊಳ್ಳಿ: ಶಾಸಕ
ಕ.ಪ್ರ.ವಾರ್ತೆ ಮಧುಗಿರಿ ಆ. 29
ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಜೊತೆಗೆ ಪೌಷ್ಟಿಕಾಂಶದ ಕೊತೆಯಿಂದ ನರಳ ಬಾರದು ಎಂಬ ಸದುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರ ಭಾಗ್ಯ ಯೋಜನೆ ರೂಪಿಸಿದ್ದಾರೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಸುಂದರವಾದುದು ಅದರ ಮಹತ್ವ ಅರಿತು ಶ್ರದ್ಧೆ, ಭಕ್ತಿ, ಸಂಯಮದಿಂದ ಮುಂದೆ ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ಹೆತ್ತವರಿಗೆ, ಗುರು ಹಿರಿಯರಿಗೆ ಕೀರ್ತಿ ತರಬೇಕು.
ಆ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯವಂತ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಟಿ.ಎಸ್. ಆಂಜನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಬಿಇಓ ವೈ.ಎನ್. ರಾಮಕೃಷ್ಣಯ್ಯ, ಮುಖ್ಯಶಿಕ್ಷಕ ಮಂಜುನಾಥ್, ಮುಖಂಡ ಎಸ್.ಡಿ.ಕೃಷ್ಣಪ್ಪ ಮೊದಲಾದವರು ಇದ್ದರು.
ಓವರ್ ಲೋಡ್ ದುರಂತಕ್ಕೆ ದಾರಿ
ಹುಳಿಯಾರು: ಕಳೆದ ಎರಡು ದಿನಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ಬಸ್ ಚಾಲಕರ ಅಜಾಗರೂಕತೆಯಿಂದ ಎರಡು ಅಪಘಾತ ಸಂಭವಿಸಿ ನಾಲ್ಕು ಜನ ದುರ್ಮರಣವನ್ನಪ್ಪಿದ್ದು, ಘಟನೆ ಇನ್ನು ಹಸಿಯಾಗಿರುವಾಗಲೇ ಇದರ ಪರಿವೇ ಇಲ್ಲದೆ ಖಾಸಗಿ ಬಸ್ಸುಗಳಲ್ಲಿ ಓವರ್ ಲೋಡ್ ಮಾಡಿಕೊಂಡು ಹೊಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಭಾನುವಾರ ಅತಿವೇಗದಿಂದ ಬಂದ ಮರ್ಚೆಂಟ್ ಬಸ್ ಮೂವರನ್ನು ಬಲಿ ತೆಗೆದುಕೊಂಡಿದ್ದು, ಇಂದು ಅದೇ ಕಂಪನಿಯ ಮತ್ತೊಂದು ಬಸ್ ಈ ರೀತಿ ಓವರ್ ಲೋಡ್ನೊಂದಿಗೆ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ನಿತ್ಯ ಇದೇ ರೀತಿ ಸಂಚರಿಸುವ ಬಸ್ಸುಗಳ ಬಗ್ಗೆ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಕಂಡುಕಾಣದಂತಿರುವುದು ಸೊಜಿಗದ ಸಂಗತಿ. ಇದೇ ಸಮಯದಲ್ಲಿ ಮಂಗಳವಾರ ಕೂಡ ಬಸ್ ಚಾಲಕನ ಅಜಾಗರೂಕತೆಯಿಂದ ವೃದ್ಧೆಯೊಬ್ಬಳು ಸಾವನಪ್ಪಿದ್ದು ಬಸ್ಸಿನವರ ಅವಾಂತರಗಳ ಬಗ್ಗೆ ಪ್ರಶ್ನಿಸುವಂತಾಗಿದೆ.ಈಗಲಾದರೂ ಎಚ್ಚೆತ್ತ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

