ತುಮಕೂರು

ವಿಶ್ವ ವಿಕಲ ಚೇತನ ಮಕ್ಕಳ ದಿನಾಚರಣೆ

Published On :

ಚಿಕ್ಕನಾಯಕನಹಳ್ಳಿ: ವಿಶ್ವ ವಿಕಲ ಚೇತನ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಡಿ.3ರಂದು ವಿಶ್ವವಿಕಲ ಚೇತನ ಮಕ್ಕಳ ದಿನಾಚರಣೆಯನ್ನು ಬ್ಲಾಕ್ ಮಟ್ಟದಲ್ಲಿ ಬಿಆರ್ಸಿ ಸಭಾಂಗಣದಲ್ಲಿ ಬೆಳಗ್ಗೆ 10.00 ಗಂಟೆಗೆ ಏರ್ಪಡಿಸಲಾಗಿದೆ. ಇದರ ಅಂಗವಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈಕಾರ್ಯಕ್ರಮಕ್ಕೆ ಬ್ಲಾಕ್ನ ಎಲ್ಲಾ ಶಾಲೆಗಳ ವಿಕಲ ಚೇತನ ಮಕ್ಕಳು ಹಾಗೂ ಪೋಷಕರು ಭಾಗವಸಬೇಕು ಎಂದು ಕೋರಿದ್ದಾರೆ.
ಜೈ ಭುವನೇಶ್ವರಿ ಆಟೋ ಚಾಲಕರ ರಾಜ್ಯೋತ್ಸವ
ಗುಬ್ಬಿ: ಚಾಲಕ ವೃತ್ತಿ ಪವಿತ್ರವಾದುದಾಗಿದ್ದು ನಾಡು, ನುಡಿಯ ಬಗ್ಗೆ ವಿಶೇಷ ಅಭಿಮಾನ ಮತ್ತು ಆಸಕ್ತಿ ಇರುವುದು ಅಭಿನಂದನಾರ್ಹವಾದುದೆಂದು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಂದ ತಿಳಿಸಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಜೈ ಭುವನೇಶ್ವರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಅಳವಡಿಸಿದ 50 ಸಾವಿರ ಬೆಲೆಯ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಕಳಕಳಿ ತೋರುವ ಆಟೋ ಚಾಲಕರು ತುರ್ತು ಸಂದರ್ಭದಲ್ಲಿ ಉಚಿತ ಸೇವೆ ನಡೆಸಿದ ನಿದರ್ಶನಗಳು ಸಾಕಷ್ಟಿದೆ. ಕಷ್ಟ ಕಾರ್ಪಣ್ಯಕ್ಕೆ ಮರುಗುವ ಪ್ರವೃತ್ತಿ ಅವರಲ್ಲಿ ಕಾಣಬಹುದು ಎಂದರು. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನಡೆಸಿದ ಹೆಗ್ಗಳಿಕೆ ಹೊಂದಿರುವ ಆಟೋ ಚಾಲಕರು ಕನಿಷ್ಠ ದುಡಿಮೆಯಲ್ಲಿ ಜೀವನ ಸಾಗಿಸಿ ಕನ್ನಡ ಭಾಷಾಭಿಮಾನ ತೋರುತ್ತಿರುವುದು ಶ್ಲಾಘನೀಯ. ಇದರೊಂದಿಗೆ ಮಕ್ಕಳಿಗೆ ಶಿಕ್ಷಣ ಒದಗಿಸುವ ಬಗ್ಗೆ ಚಿಂತನೆ ನಡೆಸಿ ಸರ್ಕಾರ ನೀಡುವ ಸವಲತ್ತು ಬಳಸಿಕೊಳ್ಳುವಂತೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.