ತುಮಕೂರಿನಲ್ಲಿ ಪ್ರತಿಷ್ಠಾಪನಾ ಮಹೋತ್ಸವದ ವಾರ್ಷಿಕೋತ್ಸವ
ತುಮಕೂರು: ನಗರದ ರಾಮಕೃಷ್ಣ - ವಿವೇಕಾನಂದ ಆಶ್ರಮದಲ್ಲಿ ಭಗವಾನ್ ಶ್ರೀ ರಾಮಕೃಷ್ಣರ ಅಮೃತಶಿಲಾ ಮೂರ್ತಿಯು ಪ್ರತಿಷ್ಠಾಪನೆಗೊಂಡು ಮೂರು ವರ್ಷಗಳು ಸಂದಿದ್ದು, ತತ್ಸಂಬಂಧವಾಗಿ ಆಶ್ರಮದ ವತಿಯಿಂದ ಡಿ. 6, 7 ಮತ್ತು 8 ರಂದು ವಿಶೇಷ ಸತ್ಸಂಗ ಕಾರ್ಯಕ್ರಮಗಳು ನೆರೆವೇರುತ್ತಿವೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 6 ಶುಕ್ರವಾರದಂದು ಸಂಜೆ 6 ಗಂಟೆಗೆ ನಗರದ ಸೋಮೇಶ್ವರಪುರಂ ಬಡಾವಣೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನೆರವೇರುವ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಸ್ವಾಮಿ ವೀರೇಶಾನಂದ ಸರಸ್ವತೀಯವರು ಜೀವನ ಸಾರ್ಥಕತೆ ಧರ್ಮದ ಅವಶ್ಯಕತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು.
ವಾಸವಿ ಸಂಘದ ಅಧ್ಯಕ್ಷ ಎನ್. ಎಸ್. ಜಯಕುಮಾರ್ ಅವರು ಮತ್ತು ಉಪಾಧ್ಯಕ್ಷ ಎಂ.ಕೆ. ಸುಬ್ರಹ್ಮಣ್ಯ ಶ್ರೇಷ್ಠಿ ಅವರು ವಿಶೇಷ ಆಹ್ವಾನಿತರಾಗಿದ್ದಾರೆ.
ಡಿ. 7 ಶನಿವಾರದಂದು ನಗರದ ಕೃಷ್ಣರಾಜೇಂದ್ರ ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ಸಂಜೆ 6 ಗಂಟೆಗೆ ವಿಶೇಷ ಸತ್ಯಂಗ ಕಾರ್ಯಕ್ರಮವು ನೆರವೇರಲಿದ್ದು ಸ್ವಾಮಿ ವೀರೇಶಾನಂದರು ಜೀವನ ಮೌಲ್ಯಗಳು ಒಂದು ಚಿಂತನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು.
ಶಿಕ್ಷಣತಜ್ಞ ಡಾ. ಸಿ. ಜಯರಾಮರಾವ್ ಅವರು ಮತ್ತು ಉದ್ಯಮಿ ಬಸವರಾಜು ವಿಶೇಷ ಆಹ್ವಾನಿತರಾಗಿರುತ್ತಾರೆ.
ಡಿ. 8 ಭಾನುವಾರದಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಮಕೃಷ್ಣ - ವಿವೇಕಾನಂದ ಆಶ್ರಮದ ಪ್ರಾರ್ಥನಾಮಂದಿರದಲ್ಲಿ ವಿಶೇಷ ಆಧ್ಯಾತ್ಮಿಕ ಶಿಬಿರವು ಆಯೋಜನೆಗೊಂಡಿದ್ದು ವೇದಘೋಷ, ಭಜನೆ, ಭಗವದ್ಗೀತಾ ಪಠಣ, ಧ್ಯಾನ ಹಾಗೂ ವಿಶೇಷ ಪ್ರವಚನವು ಮೂಡಿ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

