ಪುಸ್ತಕದ ಸಂದೇಶ ಮಸ್ತಕದೊಳಗೆ ಹೋದಾಗ ವ್ಯಕ್ತಿಗೆ ಮಾನ್ಯತೆ
ಕುಣಿಗಲ್: ಪುಸ್ತಕಗಳು ಜಗತ್ತನ್ನು ಆಳುತ್ತವೆ. ಉತ್ತಮ ಪುಸ್ತಕದೊಳಗಿನ ಉದಾತ್ತ ಮಾನವೀಯ ಮೌಲ್ಯಗಳ ಸಂದೇಶ ಮಸ್ತಕದೊಳಗೆ ತುಂಬಿಕೊಂಡಾಗ, ಮಾನವ ಸಮಾಜ ಮುಖಿಯಾಗುವುದರ ಜೊತೆಗೆ ಉತ್ತಮ ವ್ಯಕ್ತಿಯಾಗಿ ಸರ್ವರಿಂದಲೂ ಮಾನ್ಯನಾಗುತ್ತಾನೆಂದು ಗದಗ ಡಂಬಳ ಮಠದ ತೋಂಟದ ಸಿದ್ದಲಿಂಗಸ್ವಾಮಿ ತಿಳಿಸಿದರು.
ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಸಾನಿಧ್ಯವಹಿಸಿ ಅಶೀರ್ವಚನ ನೀಡಿ, ಲಕ್ಷ ದೀಪೋತ್ಸವ ಎಂದರೆ, ಅಂತರಂಗದೊಳಗಿನ ಜ್ಞಾನದ ಜ್ಯೋತಿಯ ಕಡೆ ಲಕ್ಷ್ಯಕೊಟ್ಟು ಒಳ್ಳೆಯ ವಿಚಾರಗಳ ಕಡೆ ಗಮನ ಹರಿಸಿ, ಸದಾ ಧರ್ಮದ ಕಡೆ ಸಾಗುತ್ತಾ ಸಂತೃಪ್ತ ಜೀವನ ನಡೆಸುವ ಸಂಕೇತ ಹೊರತು ಡಂಬಾಚಾರಕ್ಕೆ ದೀಪ ಬೆಳಗಿಸುವ ಕಾರ್ಯವಲ್ಲ, ಕ್ಷೇತ್ರಕ್ಕೆ ಬರುವಂತ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಸ್ಥಾಪಿಸುವ ಸಲಹೆ ನೀಡಿದ ಅವರು, ಎಡೆಯೂರು ಕ್ಷೇತ್ರದಲ್ಲಿ ಇದೀಗ ಅನ್ನದಾಸೋಹ, ಭಕ್ತಿದಾಸೋಹ ನಡೆಯುತ್ತಿದ್ದು ಇದರ ಜೊತೆಯಲ್ಲಿ ಜ್ಞಾನದಾಸೋಹ ನಡೆಸುವುದಕ್ಕೆ ಪೂರಕವಾಗಿ ಗ್ರಂಥಾಲಯ ಸ್ಥಾಪನೆಗೆ ದೇವಾಲಯ ಆಡಳಿತ ಮಂಡಳಿ ಗಮನಹಿಸಬೇಕಿದೆ ಎಂದರು. ಎಡೆಯೂರು ಬಾಳೆಹೊನ್ನೂರು ಖಾಸಾಶಾಖಾ ಮಠಾಧೀಶರಾದ ರೇಣುಕಾಶಿವಾಚಾರ್ಯ ಸ್ವಾಮಿ, ದೀಪ ಬೆಳೆಗಿದರೆ ಹೇಗೆ ಜ್ಯೋತಿ ಊರ್ಧ್ವಮುಖವಾಗಿ ಬೆಳಗುತ್ತದೆಯೋ ಹಾಗೆ ಜ್ಯೋತಿ ಬೆಳಗುವ ಮಾನವನು ಸಹ, ಉತ್ತಮ ಚಿಂತನೆಗಳನ್ನು ಗುರುವಿನ ಮಾರ್ಗದರ್ಶನದಲ್ಲಿ ಪಡೆದು ಸದಾ ಅಭಿವೃದ್ಧಿಯ ಸಂಕೇತವಾದ ಊರ್ಧ್ವಮುಖವಾಗಿ ಬೆಳೆಯಬೇಕಿದೆ. ಎಡೆಯೂರಿನಲ್ಲಿ ಗ್ರಂಥಾಲಯ ಪ್ರಾರಂಭದ ಜೊತೆಯಲ್ಲಿ ಮಾಸಿಕ ಪತ್ರಿಕೆಯನ್ನು ಹೊರತರುಬೇಕೆಂಬ ಸಲಹೆ ನೀಡಿದರು.
ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯಸ್ವಾಮಿಜಿ, ಕುಂಭಕೋಣಂ ಹಿರೇಮಠದ ರಾಮಾನುಜಂ, ಕಗ್ಗೆರೆ ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ತಹಸೀಲ್ದಾರ್ ಪುಟ್ಟನರಸಯ್ಯ, ತಾಪಂ ಸ್ಥಾಯಿಸಮಿತಿ ಸದಸ್ಯ ಜಗದೀಶ್, ಸದಸ್ಯ ಸಿದ್ದಲಿಂಗಯ್ಯ, ಜಿಪಂಸದಸ್ಯ ಅರುಣಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತ ಸಮೂಹ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

