ತುಮಕೂರು

'ರಕ್ತದಾನ ನೀಡುವ ಮೂಲಕ ಪ್ರಾಣ ಉಳಿಸಿ'

Published On :

ಕುಣಿಗಲ್: ಜೀವಜಲವಾದ ಕುಡಿಯುವ ನೀರಿಗೆ ಪರ್ಯಾಯ ವಸ್ತು ಹೇಗಿಲ್ಲವೂ ಹಾಗೆಯೇ ಮನುಷ್ಯನ ಜೀವರಕ್ಷಣೆಗೆ ಪೂರಕವಾಗಿರುವ ರಕ್ತಕ್ಕೆ ಪರ್ಯಾಯ ವಸ್ತು ಇನ್ನೊಂದಿಲ್ಲ. ಅಪಘಾತ, ಅನಾರೋಗ್ಯ ಸೇರಿದಂತೆ ಹಲವು ಸಂದರ್ಭದಲ್ಲಿ  ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ನೀಡುವ ಮೂಲಕ ಮನುಷ್ಯ, ಮತ್ತೊಬ್ಬರ ಪ್ರಾಣ ಉಳಿಸಲು ನೆರವಾಗಬೇಕೆಂದು ರೈಟ್ಜಲ್ ಇಂಡಿಯಾ ಕಾರ್ಖಾನೆಯ ಮುಖ್ಯಕಾರ್ಯನಿರ್ವಾಹಕ ಶ್ರೀಧರ್ ನಂಜನಗೂಡು ತಿಳಿಸಿದರು.
ಮಂಗಳವಾರ, ತಾಲೂಕಿನ ಅಂಚೇಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿರುವ ರೈಟ್ಜಲ್ ಇಂಡಿಯಾ ಕಾರ್ಖಾನೆ ಮತ್ತು ತುಮಕೂರಿನ ಸಂಜೀವಿನಿ ರಕ್ತನಿಧಿ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ, ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ದಿವೂಂದಕ್ಕೆ ವಿವಿಧ ಕಾರಣಗಳಿಗಾಗಿ ವಿವಿಧ ರಕ್ತಗುಂಪುಗಳ ಕನಿಷ್ಠ ಸಾವಿರದ ಐನೂರಕ್ಕೂ ಹೆಚ್ಚು ರಕ್ತದ ಯೂನಿಟ್ ಅವಶ್ಯಕತೆ, ಮಾನವರಕ್ತಕ್ಕೆ ಪರ್ಯಾಯವಾಗಿ ಇನ್ನೊಂದು ರಸಾಯನಿಕ ವಸ್ತುಗಳಾಗಲಿ, ಬೇರೆ ವಸ್ತುಗಳು ಪೂಕವಾಗಿಲ್ಲದ ಕಾರಣ, ರಕ್ತದಾನಿಗಳು ನೀಡುವ ರಕ್ತದಿಂದ ಅವಶ್ಯಕತೆ ಉಳ್ಳವರನ್ನು ಪ್ರಾಣಾಪಾಯದಿಂದ ಪಾರುಮಾಡಬಹುದಾಗಿದ್ದು, ಕಾರ್ಖಾನೆಯ ಕಾರ್ಮಿಕರು ಕೇವಲ ಸಂಸ್ಥೆಯ ಏಳಿಗೆಗೆ ದುಡಿಯದೆ, ರಕ್ತದಾನದಂತಹ ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಮೂಲಕ ತಮ್ಮ ಸಾಮಾಜಿಕ ಬದ್ಧತೆ ಮೆರೆದಿರುವುದು ಸ್ವಾಗತಾರ್ಹ ಎಂದರು.
ಸಂಜೀವಿನಿ ರಕ್ತನಿಧಿಯ ದಿನೇಶ್ ಗೌಡ, 18 ತುಂಬಿದ ನಂತರ ಎಲ್ಲಾ ವಯೋವಾನದವರು ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವ ಮುನ್ನ ಹಲವು ಅಗತ್ಯ ತಿಳಿವಳಿಕೆಗಳನ್ನು ಪಡೆದುಕೊಂಡು ಯಾವುದೇ ಮೂಢನಂಬಿಕೆಗಳ ವದಂತಿಗೆ ಕಿವಿಗೊಡದೆ, ರಕ್ತದಾನ ಮಾಡುವ ಮೂಲಕ ಮಾನವ ಕುಲದ ಸೇವೆಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದರು.
ಕಾರ್ಖಾನೆಯಲ್ಲಿನ ಹಲವು ಕಾರ್ಮಿಕರು ಸ್ವಯಂಪ್ರೇರಿತರಾಗಿ ರಕ್ತದಾನ ನೆರವೇರಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರು ರಕ್ತದಾನ ನೆರವೇರಿಸಿದ್ದು ವಿಶೇಷವಾಗಿತ್ತು.  ವೈದ್ಯ ಜಮೀರ್ ಅಹಮದ್, ಕಾರ್ಖಾನೆಯ ಹಣಕಾಸು ಮುಖ್ಯಸ್ಥ ರಾಮಪ್ರಸಾದ್, ಮಾನವ ಸಂಪನ್ಮೂಲ ವಿಭಾಗದ ಸಹಾಯಕ ವ್ಯವಸ್ಥಾಪಕ ರವಿಕುಲಾಲ್, ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.