ತುಮಕೂರು

ಆಂಜನೇಯಸ್ವಾಮಿ ನೂತನ ರಥದ ಕಳಸ ಸ್ಥಾಪನೆ

Published On :

ಹುಳಿಯಾರು: ಪಟ್ಟಣದ ಮಾರುತಿನಗರದ ಶ್ರೀ ಆಂಜನೇಯಸ್ವಾಮಿ ನೂತನ ರಥದ ಕಳಸಸ್ಥಾಪನೆಯನ್ನು ಸೋಮವಾರ ಬೆಲಗೂರಿನ ಶ್ರೀಬಿಂಧುಮಾಧವ ಶರ್ಮಾ ಸ್ವಾಮೀಜಿ ಹಾಗೂ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿಯವರು ನೆರವೇರಿಸಿದರು.
ಗ್ರಾಮದೇವತೆ ಶ್ರೀದುರ್ಗಮ್ಮದೇವಿ, ಶ್ರೀಹುಳಿಯಾರಮ್ಮ, ಶ್ರೀಕೆಂಚಮ್ಮದೇವಿ ಹಾಗೂ ಶನೇಶ್ವರಸ್ವಾಮಿ, ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಸಮ್ಮುಖದಲ್ಲಿ ನೂತನ ರಥಕ್ಕೆ ವಿವಿಧ ಧಾರ್ಮಿಕ ಪೂಜೆಗಳನ್ನು ನಡೆಸಿ ನಂತರ ಕಳಸ ಸ್ಥಾಪನೆಯನ್ನು ನಡೆಸಲಾಯಿತು. ಹಾಸನದ ಕೃಷ್ಣಭಟ್ಟರು ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ
ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಿಗ್ಗೆಯಿಂದ ಶಾಂತಿಹೋಮ, ನವಗ್ರಹ ಹೋಮ, ಕಲಾಶಾದಿಹೋಮ, ಗಂಗಾಪೂಜೆ, ಬಲಿಪೂಜೆ, ರಥಕ್ಕೆ ಪುಣ್ಯಾಹಪೂಜೆ ನಡೆಸಿ ನಂತರ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ ಶೆಟ್ರು, ಅಧ್ಯಕ್ಷ ಕೆ.ಎಂ.ಎಲ್. ನರಸಿಂಹಮೂರ್ತಿ, ಉಪಾಧ್ಯಕ್ಷ ಆರ್. ಮಂಜುನಾಥ್, ಕಾರ್ಯದರ್ಶಿ ಧನಂಜಯ್, ಬಡಗಿರಾಮಣ್ಣ, ಪುಟ್ಟರಾಜು, ದೇವಾಲಯ ಜೀರ್ಣೋದ್ಧಾರ ಸಮಿಯ ಸದಸ್ಯರು ಹಾಗೂ ಅಪಾರ ಸಂಖ್ಯೆ ಭಕ್ತಾದಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.