ಸಾರಿಗೆ ಸಂಸ್ಥೆ ಡಿಪೋಗೆ ಜಾಗ ನೀಡಲು ಪುರಸಭೆ ತೀರ್ಮಾನ
ಚಿಕ್ಕನಾಯಕನಹಳ್ಳಿ: ಬಹುಶಃ ಯಾವುದೇ ಪಟ್ಟಣದಲ್ಲಿ ಸರ್ಕಾರಿ ಸೌಲಭ್ಯ ಮಂಜೂರಾತಿ ದೊರೆತ 26 ವರ್ಷಗಳವರೆಗೂ ಅನುಷ್ಠಾನಕ್ಕೆ ತಾರದೆ ನಿರ್ಲಕ್ಷ ಧೋರಣೆ ತಾಳಿದ ಉದಾಹರಣೆ ರಾಜ್ಯದಲ್ಲಿ ಸಿಗಲಿಕ್ಕಿಲ್ಲ. ಆದರೆ ಚಿ.ನಾ.ಹಳ್ಳಿ ಪಟ್ಟಣ ಮಾತ್ರ ಇದಕ್ಕೆ ಜ್ವಂತ ಉದಾಹರಣೆಯಾಗಿದೆ.
ದಿವಂಗತ ರಾಮಕೃಷ್ಣ ಹೆಗಡೆಯವರ ಅಧಿಕಾರಾವಧಿಯಲ್ಲಿ ಇಲ್ಲಿಗೆ ಮಂಜೂರಾದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಪೋ ಮತ್ತು ನಿಲ್ದಾಣವನ್ನು ಅನುಷ್ಠಾನಕ್ಕೆ ತರಲು ಇಲ್ಲಿನ ಪುರಸಭೆಯ ಜನಪ್ರತಿನಿಧಿಗಳಿಗೆ ತಲೆಮಾರುಗಳೆ ಬೇಕಾಗುತ್ತಿರುವುದು ದುರ್ದೈವ. 1986 ರಲ್ಲಿ ಅಂದಿನ ನಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಮಂಜೂರಾತಿ ನೀಡಿದ ಬಸ್ ನಿಲ್ದಾಣ ಜನರ ಅನುಕೂಲಕ್ಕೆ ದೊರೆಯಲು ಈಗ್ಗೆ ಕೆಲವು ವರ್ಷಗಳ ಹಿಂದೆ ಮುಕ್ತಿ ಸಿಕ್ಕಿತು. ಆದರೆ ಡಿಪೋ ಪ್ರಾರಂಭಕ್ಕೆ ಹಿಡಿದಿರುವ ಗ್ರಹಣ ಇನ್ನು ಬಿಟ್ಟಿಲ್ಲವೆಂಬಂತೆ ಕಾಣುತ್ತದೆ.
ಡಿಪೋ ನಿರ್ಮಾಣ್ಕಕೆ ಅಗತ್ಯವಾದ ಭೂಮಿ ಪರಿಶೀಲನೆಗೆಂದು ಇತ್ತೀಚೆಗೆ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಬಂದಿದ್ದ ಸಂದರ್ಭದಲ್ಲಿ ಪಟ್ಟಣಕ್ಕೆ ಸಮೀಪವಿರುವ ಕಾಡೇನಹಳ್ಳಿ ಸರ್ವೆ ನಂಬರ್ನಲ್ಲಿ ಸರ್ಕಾರಿ ಗೋಮಾಳವಿರುವುದು ಪ್ತತೆಯಾಗಿದೆ. ಅದನ್ನು ಸ್ಥಳೀಯ ಕೆಲ ಜನಪ್ರತಿನಿಧಿಗಳು ಗುರುತಿಸಲಾಗಿ, ಸಂಸ್ಥೆಯ ಅಧಿಕಾರಿಗಳು ಪುರಸಭೆ ಸಭೆಯಲ್ಲಿಟ್ಟು ಠರಾವು ಮಾಡಿ ಕೊಟ್ಟರೆ ಕಂದಾಯ ಇಲಾಖೆಯವರಿಂದ ಜಾಗದ ಮಂಜೂರಾತಿ ಪಡೆಯವುದಾಗಿ ತಿಳಿಸಿ ಹೋಗಿದ್ದಾರೆ. ಅದರಂತೆ ಗುರುವಾರ ಕರೆದಿದ್ದ ತುರ್ತು ಸಭೆಯಲ್ಲಿ ಕೆಲವು ಸದಸ್ಯರು ಅಪಸ್ವರವೆತ್ತಿದರು.
ಸಹಕರಿಸೋಣ: ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಡಿ.ಚಂದ್ರಶೇಖರ್ ಅವರು ಕಾಡೇನಹಳ್ಳಿ ಸರ್ವೆ ನಂಬರ್ನಲ್ಲಿರುವ ಗೋಮಾಳವನ್ನು ಸಾರಿಗೆ ಇಲಾಖೆ ಮಂಜೂರಾತಿ ಪಡೆಯಲು ನಮ್ಮ ಕಡೆಯಿಂದ ಠರಾವು ಮಾಡಿ ನೀಡಿದರೆ ಅವರು ಮುಂದಿನ ಕ್ರಮಕೈಗೊಳ್ಳುತ್ತಾರೆ ಎಂದರು. ಒಂದು ವೇಳೆ ಸರ್ಕಾರ ಸದರಿ ಜಮೀನಿಗೆ ಹಣಕಟ್ಟಬೇಕೆಂದರೆ, ಬಸ್ ನಿಲ್ದಾಣ ಒತ್ತುವರಿದಾರರಿಂದ ವಸೂಲು ಮಾಡಿರುವ ಹಣ ಕಟ್ಟಿ ಡಿಪೋ ನಿರ್ಮಾಣಕ್ಕೆ ಸಹಕರಿಸೋಣ ಎಂಬ ಪ್ರಸ್ತಾಪವಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರಾದ ಸಿ.ಟಿ.ದಯಾನಂದ್, ಟಿಂಬರ್ ಮಲ್ಲೇಶ್, ವಿರೋಧ ಪಕ್ಷದ ಸಿ.ಪಿ.ಮಹೇಶ್ ಅವರು, ಅಕ್ರಮ ಒತ್ತುವರಿದಾರರಿಂದ ಕಟ್ಟಿಸಿಕೊಂಡಿರುವ ಹಣ ಕಟ್ಟಿ ಡಿಪೋ ಜಾಗ ಕೊಡಿಸುವ ಮೊದಲು ಸದರಿ ಒತ್ತುವರಿದಾರರಿಗೆ ಜಾಗದ ಮಾಲೀಕತ್ವವನ್ನು ನೀಡಲು ನಿಮಗೆ ಸಾಧ್ಯವಿದೆಯಾ, ಕಾನೂನಿನಲ್ಲಿ ಅವಕಾಶವುಂಟೆ ಎಂದು ಪ್ರಶ್ನಿಸಿದರು. ಇದಕ್ಕೆ ಸಮರ್ಪಕ ಉತ್ತರ ನೀಡಲು ಪುರಸಭೆ ವಿಫಲವಾದಾಗ, ಮೊದಲು ಅವರ ಸಮಸ್ಯೆ ಪರಿಹರಿಸಿ, ನಂತರ ಜಾಗದ ಹಣವನ್ನು ಕಟ್ಟಿ ಎಂದು ಹೊರನಡೆದರು. ಆದರೂ ಸದರಿ ಸಭೆಯಲ್ಲಿ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳು ಡಿಪೋ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಕೋರಿ ಠರಾವು ಮಾಡಲಾಯಿತು.
ಸಮಜಾಯಿಷಿ: ನಂತರ ಮಾತನಾಡಿದ ಸಿ.ಪಿ.ಮಹೇಶ್ ಪಟ್ಟಣದ ಶಾಲೆಯೊಂದರ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಆಯ್ಕೆಯಾದ ತಾಲೂಕಿನ ಮಕ್ಕಳಿಗೆ 5 ಸಾವಿರ ಬಹುಮಾನ ನೀಡುವುದಾಗಿ ಆಶ್ವಾಸನೆ ನೀಡಿದ್ದೀರಿ. ಈ ಹಣವನ್ನು ಯಾವ ಮೂಲದಿಂದ ನೀಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸುತ್ತಾ, ನಾನು ತಾಲೂಕಿನ ವಿದ್ಯಾರ್ಥಿಗಳೆಲ್ಲ ಎಂದು ಹೇಳಿಲ್ಲ, ಮಾಧ್ಯಮಗಳಲ್ಲಿ ತಪ್ಪಾಗಿ ಬಂದಿದೆ. ಕೇವಲ ಪುರಸಭೆ ವ್ಯಾಪ್ತಿಯ ಮಕ್ಕಳಿಗೆ ಮಾತ್ರ ನೀಡುವುದಾಗಿ ಹೇಳಿದ್ದೇನೆ ಎಂದು ಸಮಜಾಯಿಸಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

