ಸಾಂಕ್ರಾಮಿಕ ಕಾಯಿಲೆಗೆ ಜಾನುವಾರು ಬಲಿ
ಕುಣಿಗಲ್: ಮಾರಕ ಸಾಂಕ್ರಾಮಿಕ ರೋಗಗಳಿಗೆ ತಾಲೂಕಿನ ಕಸಬಾ ಹೋಬಳಿಯ ಕುರುಪಾಳ್ಯ, ಕೂತಾರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿನ ಜಾನುವಾರುಗಳು ವ್ಯಾಪಕವಾಗಿ ಬಲಿಯಾಗುತ್ತಾ ರೈತರು, ಜಾನುವಾರು ಮಾಲೀಕರು ಪರದಾಡುವಂತಾಗಿದೆ.
ಕಸಬಾ ಹೋಬಳಿಯ ಕೂತಾರಹಳ್ಳಿ, ಸೋಮೇದೋವರಪಾಳ್ಯ, ಕುರುಪಾಳ್ಯ, ಬೇಗೂರು ಸೇರಿದಂತೆ ಸುತ್ತಮಲ ಗ್ರಾಮಗಳಲ್ಲಿ ಪಶು ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿದ್ದು, ಜಾನುವಾರು ಮಾಲೀಕರಿಗೆ, ರೈತರಿಗೆ ಪಶು ವೈದ್ಯ ಇಲಾಖೆ ಸಿಬ್ಬಂದಿ ಮಾರ್ಗದರ್ಶನ ನೀಡದ ಕಾರಣ, ಪರಿಸ್ಥಿತಿ ಉಲ್ಬಣಗೊಂಡು, ದಿನಂಪ್ರತಿ ಹತ್ತಕ್ಕೂ ಹೆಚ್ಚು ಕುರಿ, ಮೇಕೆ, ಹಸು, ಕರುಗಳು ಸಾಯುತ್ತಿವೆ. ಖ ಈ ಸಂಬಂಧ ಪಶುವೈದ್ಯಾಧಿಕಾರಿಗಳಿಗೆ ಕರೆಮಾಡಿದರೆ ಬಂದು ಔಷಧ ಬರೆದು ಕೊಡುತ್ತಾರೆಯೇ ಹೊರತು, ರೋಗ ನಿಯಂತ್ರಣದ ಬಗ್ಗೆ ಏನನ್ನು ಹೇಳುವುದಿಲ್ಲ. ಸತ್ತಾಗ ಪರಿಹಾರ ಕೊಡುವುದರ ಬಗ್ಗೆ ಕೇಳಿದರೆ, ಸರ್ಕಾರದಿಂದ ಯಾವುದೇ ಸುತ್ತೊಲೆ ಬಂದಿಲ್ಲವೆಂದು ಪಶು ವೈದ್ಯರು ರೈತಮಹಿಳೆ ಯಶೋಧ ತಿಳಿಸುತ್ತಾರೆ
ಪಶುಸಂಗೋಪನೆ ಇಲಾಖೆ ಸ್ಪಷ್ಟನೆ: ರೈತರ ಆರೋಪಗಳಿನ್ನು ನಿರಾಕರಿಸಿರುವ ಪಶುಸಂಗೋಪನೆ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ನವೀನ್, ಪ್ರತಿಯೊಂದು ಗ್ರಾಮಗಳಲ್ಲಿ ಇಲಾಖಾ ಸಿಬ್ಬಂದಿ ತೆರಳಿ ಮಾಹಿತಿ ಪಡೆಯುವ ವ್ಯವಸ್ಥೆ ಇಲ್ಲ, ರೈತರೇ ಸಮಸ್ಯೆಯಾದಾಗ ತಾಲೂಕು ಕೇಂದ್ರಕ್ಕೆ ಬರಬೇಕು. ಇನ್ನು ಕೂತಾರಹಳ್ಳಿಯಲ್ಲಿ ಕರು ಸತ್ತಿರುವುದು ಜಂತು ಹುಳುವಿನ ಸಮಸ್ಯೆಯಿಂದ, ಕುರುಪಾಳ್ಯದಲ್ಲಿ ಕುರಿಮರಿಗಳಿಗೆ ಸರಿಯಾಗಿ ಲಸಿಕೆ ಹಾಕದ ಕಾರಣ ಮತ್ತು ಅವು ಬೇರೆ ಜಿಲ್ಲೆಯಿಂದ ತಂದಿದ್ದು, ಇಲ್ಲಿನ ವಾತವರಣಕ್ಕೆ ಹೊಂದಿಕೊಳ್ಳದ ಕಾರಣ ಸಾವು ಸಂಭವಿಸಿದ್ದು, ಮೇಕೆಗಳ ಸಾವಿನ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ತಾಲೂಕಿನಲ್ಲಿ ಕಾಲುಬಾಯಿರೋಗ ನಿಯಂತ್ರಣದಲ್ಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

